ETV Bharat / state

ದಾಖಲೆ ಬೆಲೆಗೆ ಕಿಲಾರಿ ಹೋರಿ ಮಾರಾಟ! ತವರು ಮನೆಯಿಂದ ಮಗಳನ್ನು ಕಳಿಸುವ ರೀತಿ ಬೀಳ್ಕೊಟ್ಟ ರೈತ!

author img

By

Published : Dec 12, 2020, 11:11 AM IST

Updated : Dec 13, 2020, 3:18 PM IST

ತಮ್ಮ ಕಿಲಾರಿ ಹೋರಿ ದಾಖಲೆ ಬೆಲೆಗೆ ಮಾರಾಟವಾದ ಖುಷಿಯಲ್ಲಿ ರೈತ, ಮನೆ ಮುಂದೆ ಮಂಟಪ ಹಾಕಿಸಿ‌ ಸುಮಂಗಲಿಯರಿಂದ ಆರತಿ ಬೆಳಗಿಸಿ, ತವರು ಮನೆಯಿಂದ ಮಗಳ ಕಳಿಸಿಕೊಡುವ ರೀತಿ ವಾದ್ಯಮೇಳಗಳೊಂದಿಗೆ ಮಹಾರಾಷ್ಟ್ರಕ್ಕೆ ಬೀಳ್ಕೋಟ್ಟರು.

Kilari bull sold for 5.15 lakh rupees in belgavi
ಬೆಳಗಾವಿ : 5.15 ಲಕ್ಷ ರೂ. ದಾಖಲೆ ಬೆಲೆಗೆ ಕಿಲಾರಿ ಹೋರಿ ಮಾರಾಟ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸಮೀಪ ಕುರುಬಗೋಡಿಯ ರೈತ ಅಡವೆಪ್ಪಾ ಪದ್ಮಣ್ಣ ಕುರಿ ಎಂಬವರು ತಮ್ಮ ಕಿಲಾರಿ ಹೋರಿಯನ್ನು ಬರೋಬ್ಬರಿ 5.15 ಲಕ್ಷ ರೂ.ಗೆ ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ.

5.15 ಲಕ್ಷ ರೂ. ದಾಖಲೆ ಬೆಲೆಗೆ ಕಿಲಾರಿ ಹೋರಿ ಮಾರಾಟ

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಲವೇಡಾ ತಾಲೂಕಿನ ನಂದೇಶ್ವರ ಗ್ರಾಮದ ದತ್ತಾ ಜ್ಞಾನೋಬಾ ಕರಡೆ, ಉತ್ತಮ ಕಿಲಾರಿ ಜಾತಿಯ ಹೋರಿಯನ್ನು 16 ತಿಂಗಳ ಹಿಂದೆ ಖರೀದಿಸಿದ್ದರು. ಇದೀಗ ತಾವು ಸಾಕಿದ ಹೋರಿ ದಾಖಲೆ ಬೆಲೆಗೆ ಮಾರಾಟವಾಗಿರುವುದರಿಂದ, ಮನೆ ಮುಂದೆ ಮಂಟಪ ಹಾಕಿಸಿ‌ ಸುಮಂಗಲಿಯರಿಂದ ಆರತಿ ಪೂಜೆ ಮಾಡಿಸಿ ತವರು ಮನೆಯಿಂದ ಮಗಳನ್ನು ಕಳಿಸಿಕೊಡುವ ರೀತಿ ವಾದ್ಯಮೇಳಗಳೊಂದಿಗೆ ಮಹಾರಾಷ್ಟ್ರಕ್ಕೆ ಹೋರಿಯನ್ನು ಬೀಳ್ಕೊಟ್ಟರು. ಈ ದಾಖಲೆ ಬೆಲೆಯ ಹೋರಿ ನೋಡಲು ನೂರಾರು ರೈತರು, ಸಾರ್ವಜನಿಕರು ಅಲ್ಲಿಗೆ ಆಗಮಿಸಿದ್ದರು.

ಓದಿ: ಚಳಿ ಮಧ್ಯೆ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕಳೆದ‌ ಪ್ರಯಾಣಿಕರು

'ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಭಾರತ ಸುಪ್ರಸಿದ್ಧ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಯಲ್ಲಿ ಈ ಹೋರಿಯನ್ನು 1.1 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದೆವು. ಅದನ್ನು ನಮ್ಮ ಮಕ್ಕಳಂತೆ ನೋಡಿಕೊಂಡು ಪ್ರತಿ ದಿನ ಹಾಲು, ಬಾಳೆಹಣ್ಣು, ಗೋಧಿ, ಕಡಲೆ ಇನ್ನಿತರೆ ಪೌಷ್ಠಿಕ ಆಹಾರವನ್ನು ಹಾಕಿ ಪೋಷಿಸಿದ್ದೇವೆ. 10 ತಿಂಗಳಲ್ಲಿ ಈ ಕಿಲಾರಿ ಹೋರಿಯು 5.15 ಲಕ್ಷಕ್ಕೆ ಮಾರಾಟವಾಗಿದೆ' ಎಂದು ಅಡವೆಪ್ಪಾ ತಿಳಿಸಿದ್ದಾರೆ.

Last Updated : Dec 13, 2020, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.