ETV Bharat / state

ಛೋರ್ಲಾ ಬಳಿ ಭೂಕುಸಿತ: ಕರ್ನಾಟಕ - ಗೋವಾ ಸಂಪರ್ಕ ಸ್ಥಗಿತ

ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಛೋರ್ಲಾ ಘಾಟ್ ಬಳಿ ಗುಡ್ಡ ಕುಸಿದಿದ್ದು, ಕರ್ನಾಟಕ ಮತ್ತು ಗೋವಾ ಸಂಪರ್ಕ ರಸ್ತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

Karnataka and Goa road connection cut, Karnataka and Goa road connection cut for Landslide, Karnataka and Goa road connection cut for Landslide near Chorla, ಛೋರ್ಲಾ ಬಳಿ ಭೂಕುಸಿತ, ಛೋರ್ಲಾ ಬಳಿ ಭೂಕುಸಿತದಿಂದ ಕರ್ನಾಟಕ ಮತ್ತು ಗೋವಾ ಸಂಪರ್ಕ ಸ್ಥಗಿತ, ಕರ್ನಾಟಕ ಮತ್ತು ಗೋವಾ ಸಂಪರ್ಕ ಸ್ಥಗಿತ ಸುದ್ದಿ,
ಕರ್ನಾಟಕ ಗೋವಾ ಸಂಪರ್ಕ ಸ್ಥಗಿತ
author img

By

Published : Jul 23, 2021, 1:03 PM IST

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಛೋರ್ಲಾ ಘಾಟ್ ಬಳಿ ಭೂಕುಸಿತ ಸಂಭವಿಸಿದೆ. ಹೀಗಾಗಿ ಕರ್ನಾಟಕ - ಗೋವಾ ಮಧ್ಯದ ಸಂಪರ್ಕ ತಾತ್ಕಾಲಿಕ ಸ್ಥಗಿತಗೊಂಡಿದೆ.

ಭೂಕುಸಿತದಿಂದ ಅಪಾರ ಪ್ರಮಾಣದ ಕಲ್ಲು ಹಾಗೂ ಮಣ್ಣು ರಸ್ತೆ ಮೇಲೆ ಅಪ್ಪಳಿದೆ. ಸದ್ಯ ಉಭಯ ರಾಜ್ಯಗಳ‌ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಹೀಗಾಗಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ‌ನಿಂತಿವೆ. ಇದರಿಂದಾಗಿ ಛೋರ್ಲಾ ಬಳಿ ಭೂಕುಸಿತ ಆಗುತ್ತಿದ್ದು, ಜನರಲ್ಲಿ ಭೀತಿ ಹೆಚ್ಚಿಸಿದೆ.

ಕರ್ನಾಟಕದಿಂದ ನಿತ್ಯ ಸಾವಿರಾರು ವಾಹನಗಳು ಹಾಲು, ತರಕಾರಿಯನ್ನು ಗೋವಾಗೆ ಪೂರೈಸುತ್ತವೆ. ಅಲ್ಲದೇ ಗೋವಾದಿಂದ ಕೂಡ ಮೀನು ಸೇರಿದಂತೆ ‌ಇನ್ನಿತರ ಆಹಾರ ಪದಾರ್ಥಗಳು ರಾಜ್ಯಕ್ಕೆ ‌ಪೂರೈಕೆ ಆಗುತ್ತವೆ. ರಸ್ತೆ ಸಂಚಾರ ಸಮಸ್ಯೆಯಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ‌. ಸ್ಥಳಕ್ಕೆ ಗೋವಾ ಅಗ್ನಿಶಾಮಕ ದಳದ ಸಿಬ್ಬಂದಿ ‌ದೌಡಾಯಿಸಿದ್ದು, ರಸ್ತೆ ಮೇಲಿನ ಮಣ್ಣು ತೆರವು ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.