ಚಿಕ್ಕೋಡಿ: ಹೊರರಾಜ್ಯಗಳಿಗೆ ದುಡಿಯಲು ಹೋದ ರಾಜ್ಯದ ಜನರ ಪರಿಸ್ಥಿತಿ ಲಾಕ್ಡೌನ್ನಿಂದಾಗಿ ಹೇಳತೀರದಾಗಿದೆ.
ಈ ವೇಳೆ ದೇಶಾದ್ಯಂತ ಕೊರೊನಾ ಲಾಕ್ಡೌನ್ ಜಾರಿಯಾದ ಹಿನ್ನೆಲೆ ಕಳೆದ 40 ದಿನಗಳಿಂದ ಅಲ್ಲಿಯೇ ಸಿಲುಕಿಕೊಂಡಿದ್ದು, ರಾಜ್ಯಕ್ಕೆ ಆಗಮಿಸಲು ಸರ್ಕಾರ ಅನುಕೂಲ ಕಲ್ಪಿಸಬೇಕು ಎಂದು ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಮನೆಯಲ್ಲಿರುವ ವೃದ್ಧ ತಂದೆ-ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಆಗಿದೆ. ಅದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಮಹಾರಾಷ್ಟ್ರದ ಕಮಿಷನರ್ ಜೊತೆ ಮಾತನಾಡಿ ನನಗೆ ಮಜಲಟ್ಟಿ ಗ್ರಾಮದ ಕಡೆ ಬರಲು ಅನಕೂಲ ಮಾಡಿ ಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.