ETV Bharat / state

ಅಥಣಿ: ರಾಜ್ಯೋತ್ಸವ ಮೆರವಣಿಗೆಯಲ್ಲಿ ನಾಲ್ವರ ಮೇಲೆ ಬ್ಲೇಡ್‌ನಿಂದ ಹಲ್ಲೆ - ETV Bharat Kannada

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕರಿಗೆ ಹುಕ್ಕೇರಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಳಗಾವಿ ವಿಮ್ಸ್​ಗೆ ರವಾನಿಸಲಾಗಿದೆ.

miscreants attacked with the blade
ಬ್ಲೇಡ್​ನಿಂದ​ ಹಲ್ಲೆ ಮಾಡಿದ ಕಿಡಿಗೇಡಿಗಳು
author img

By

Published : Nov 24, 2022, 9:20 AM IST

Updated : Nov 24, 2022, 2:21 PM IST

ಅಥಣಿ: ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಗಲಾಟೆ ನಡೆದು, ಕೆಲವು ಕಿಡಿಗೇಡಿಗಳು ನಾಲ್ವರ ಮೇಲೆ ಬ್ಲೇಡ್​ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಚೇತನ ಹಡಪದ, ಪ್ರಸಾದ ಅಶೋಕ ಸಿಂದೂರೆ ಹಾಗು ವಿಕಾಸ ಸುಭಾಶ ಸುಣಗಾರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಹುಲ ಈರಪ್ಪ ಪಾಟೀಲ ಎಂಬ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಬೆಳಗಾವಿ ವಿಮ್ಸ್​ಗೆ ರವಾನಿಸಲಾಗಿದೆ.

ಬ್ಲೇಡ್​ನಿಂದ​ ಹಲ್ಲೆ ಮಾಡಿದ ಕಿಡಿಗೇಡಿಗಳು

ಪ್ರತಿ ವರ್ಷದಂತೆ ಅದ್ದೂರಿಯಾಗಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿತ್ತು. ಕಿಡಿಗೇಡಿಗಳ ಕೃತ್ಯದಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಡುಗಿಗೆ ಕಿರುಕುಳ ಆರೋಪ: ಯುವಕನಿಗೆ ಥಳಿಸಿದ ಜನ.. ವಿಡಿಯೋ

Last Updated : Nov 24, 2022, 2:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.