ETV Bharat / state

ಬೆಳಗಾವಿ ಜಿಲ್ಲೆಯ ವಿವಿಧೆಡೆ ಕನ್ನಡ ರಾಜ್ಯೋತ್ಸವ ಆಚರಣೆ - ಗೋಕಾಕ್​ನಲ್ಲಿ ಕನ್ನಡ ರಾಜ್ಯೋತ್ಸವ ಸುದ್ದಿ

ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಜಿಲ್ಲೆಯ ಹಲವೆಡೆ ಕರುನಾಡ ಹಬ್ಬದ ಸಂಭ್ರಮ ಜೋರಾಗಿತ್ತು.

ಕನ್ನಡ ರಾಜ್ಯೋತ್ಸವ ಆಚರಣೆ
author img

By

Published : Nov 1, 2019, 8:22 PM IST

ಬೆಳಗಾವಿ : ನಾಡು ನುಡಿ ಹೋರಾಟದಲ್ಲಿ ಬೆಳಗಾವಿಯ ಕೊಡುಗೆ ಅಪಾರ. ಜಿಲ್ಲೆಯ ಅನೇಕ ಹೋರಾಟಗಾರರು ಕನ್ನಡಕ್ಕೆ ತಮ್ಮದೇ ರೀತಿಯ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.

ನಗರದ ಸಿಪಿಇಡಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ನಡೆಯುತ್ತಿರುವ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ಜಿಲ್ಲೆಯ ಅನೇಕ ಹಳ್ಳಿಗಳು ತೊಂದರೆ ಅನುಭವಿಸಿವೆ. ಪ್ರವಾಹ ಪೀಡಿತ ನಿರಾಶ್ರಿತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಪರಿಹಾರ ನೀಡಲಾಗಿದ್ದು. ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮಾಡುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಗಾವಿ ಜಿಲ್ಲೆಯ ವಿವಿಧೆಡೆ ಕನ್ನಡ ರಾಜ್ಯೋತ್ಸವ ಆಚರಣೆ

ನಿಪ್ಪಾಣಿಯಲ್ಲಿ ರಾಜ್ಯೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆ:

ಬೆಳಗಾವಿ ಜಿಲ್ಲೆಯ ಗಡಿಭಾಗವಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ರಾಜ್ಯೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಿಸಿದರು. ಪಟ್ಟಣದ ಮುನ್ಸಿಪಲ್ ಹೈಸ್ಕೂಲ್​ ಮೈದಾನದಲ್ಲಿ ಕನ್ನಡ ಪರ ಸಂಘಟನೆಗಳಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಿದರು. ತಾಲೂಕು ಆಡಳಿತ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದಾದ್ಯಂತ ಕನ್ನಡಾಂಬೆಯ ಮೆರವಣಿಗೆ ನಡೆಸಲಾಯಿತು.

ಅಥಣಿಯಲ್ಲೂ ಕನ್ನಡ ರಾಜ್ಯೋತ್ಸವ:

ಅಥಣಿ ತಾಲೂಕು ಆಡಳಿತ ಕಚೇರಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಥಣಿ ತಹಶೀಲ್ದಾರ್ ಧ್ವಜಾರೋಹಣ ಮಾಡಿದರು. ನಂತರ ಭುವನೇಶ್ವರಿ ಪೋಟೋಗೆ ಪೂಜೆ ಸಲ್ಲಿಸಲಾಯಿತು.

ಗೋಕಾಕ್​ನಲ್ಲಿ ಕನ್ನಡ ರಾಜ್ಯೋತ್ಸವ:

ಗೋಕಾಕ್​ ಪಟ್ಟಣದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿರಾಜ್ಯೋತ್ಸವ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ್ ಕಾರ್ಯಾಲಯದಿಂದ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ಈ ವೇಳೆ ವಿದ್ಯಾರ್ಥಿಗಳು ರೂಪಿಸಿದ ವಿವಿಧ ರೂಪಕಗಳು ನೋಡುಗರ ಗಮನ ಸೆಳೆಯಿತು.

Intro:ನಿಪ್ಪಾಣಿ ನಗರದಲ್ಲಿ ರಾಜ್ಯೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆBody:

ಚಿಕ್ಕೋಡಿ :

ಗಡಿಭಾಗವಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ರಾಜ್ಯೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆ. ಬೆಳೆಗ್ಗೆಯಿಂದ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಎಂ ಇ ಎಸ್ ಪುಂಡರು ಕರಾಳ ದಿನ ಆಚರಿಸಿ ತಮ್ಮ ಹಳೆ ರಗಳೆ ಮುಂದುವರಿಸಿದ್ದಾರೆ.

ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಹೈಸ್ಕೂಲ ಮೈದಾನದಲ್ಲಿ ಕನ್ನಡ ಪರ ಸಂಘಟನೆಗಳಿಂದ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಿದರು. ತಾಲೂಕು ಆಡಳಿತ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಗರಾದ್ಯಾಂತ ಕನ್ನಡ ತಾಯಿಯ ಹಬ್ಬ ಆಚರಿಸಿ ಮರವಣಿಗೆ ಮಾಡುವ ಮೂಲಕ ಗಡಿಭಾಗ ನಿಪ್ಪಾಣಿಯಲ್ಲಿ ಕನ್ನಡದ ಬಣ್ಣವನ್ಮು ಇನ್ನಷ್ಟು ಗಾಢಗೊಳಿಸಲಾಯಿತು.

ಈ ಎಂಇಎಸ್ ಪುಂಡಾಟಿಕೆಗೆ ಶಡ್ಡು ಹೋಡೆದು ಅತ್ಯಂತ ವಿಜೃಂಭಣೆಯಿಂದ ಕನ್ನಡ ಹಬ್ಬವನ್ನು ಆಚರಿಸಿ ತಮ್ಮ ಕನ್ನಡ ಅಭಿಮಾನವನ್ನು ಹೆಚ್ಚಿಸಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.