ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದ ಕಳೆಗಟ್ಟಿದೆ. ರಾಜ್ಯೋತ್ಸವ ದಿನದ ಅಂಗವಾಗಿ 10ಸಾವಿರ ಅಡಿ ಕನ್ನಡ ಬಾವುಟದ ಪ್ರದರ್ಶನ ಚೆನ್ನಮ್ಮ ವೃತ್ತದಿಂದ ಆರಂಭವಾಗಿ ನಗರದ ಜಿಲ್ಲಾ ಕ್ರೀಡಾಂಗಣದವರೆಗೆ ತೆರಳಲಿದೆ.
ಕನ್ನಡ ಮನಸುಗಳು ಮತ್ತು ಬೆಳಗಾವಿ ಪುಟ್ ಸಹಯೋಗದ 10ಸಾವಿರ ಅಡಿ ಉದ್ದ ಕನ್ನಡ ಧ್ವಜ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆ ಚೆನ್ನಮ್ಮ ವೃತ್ತದಿಂದ ಬೀಮ್ಸ್ ಆಸ್ಪತ್ರೆ ರಸ್ತೆ, ವೈ ಜಂಕ್ಸನ್ ಹಾಗೂ ಕೊಲ್ಲಾಪುರ ಸರ್ಕಲ್ ಮಾರ್ಗವಾಗಿ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಲಿದೆ. ಬಳಿಕ ಅಲ್ಲಿಂದ ರೂಪಕಗಳ ಜೊತೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.
ಎಂಇಎಸ್ನಿಂದ ಕರಾಳ ದಿನಾಚರಣೆ: ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ಎಂಇಎಸ್ ಕಾರ್ಯಕರ್ತರು ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ ಆಚರಿಸಿದರು. ಬೆಳಗಾವಿಯ ಶಿವಾಜಿ ಗಾರ್ಡ್ನಿಂದ ಮರಾಠ ಮಂಡಳದವರೆಗೆ ರ್‍ಯಾಲಿ ನಡೆಯಿತು. ಸೈಕಲ್ ರ್‍ಯಾಲಿ ಹೆಸರಿನಲ್ಲಿ ಎಂಇಎಸ್ ಕಾರ್ಯಕರ್ತರು ಕಪು ಪಟ್ಟಿ ಧರಿಸಿ ಉದ್ಧಟತನ ಮೆರೆದರು.
ಬೆಳಗಾವಿಯಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್: ಕನ್ನಡ ರಾಜ್ಯೋತ್ಸವ ಮತ್ತು ಎಂಇಎಸ್ನಿಂದ ಕರಾಳ ದಿನಾಚರಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ನೇತೃತ್ವದಲ್ಲಿ 3ಜನ ಡಿಸಿಪಿ, 12 ಎಸಿಪಿ, 52 ಜನ ಇನ್ಸಪೆಕ್ಟರ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 2500 ಪೊಲೀಸ್ ಸಿಬ್ಬಂಧಿ, 9 ಸಿಎಆರ್, 10ಕೆ ಎಸ್ ಆರ್ ಪಿ ತುಕಡಿಗಳು, 8 ಡ್ರೋನ್ ಕ್ಯಾಮರಾ, 300ಸಿಸಿಟಿವಿ ಮೂಲಕ ನಗರದಲ್ಲಿ ಕಣ್ಗಾವಲು ಇರಸಲಿವೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ, ಎಂಇಎಸ್ನಿಂದ ಕರಾಳ ದಿನಾಚರಣೆ: ಪೊಲೀಸ್ ಸರ್ಪಗಾವಲು