ETV Bharat / state

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ - ಈಟಿವಿ ಭಾರತ ಕನ್ನಡ

ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿದವರನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kannada-pro-activist-ashok-chandaragi-slams-maha-cm-ekanatha-shindhe
ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ
author img

By

Published : Nov 22, 2022, 9:00 PM IST

Updated : Nov 23, 2022, 4:01 PM IST

ಬೆಳಗಾವಿ : ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿದವರನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿ ಹೋರಾಟದಲ್ಲಿ ಮೃತಪಟ್ಟ ಮರಾಠಿಗರಿಗೆ ಸ್ವಾತಂತ್ರ್ಯ ಹೋರಾಟಗಾರರ ರೀತಿ ಪಿಂಚಣಿ ನೀಡುವುದಾಗಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ಪ್ರಚೋದನಾತ್ಮಕವಾಗಿದೆ. ಬೆಳಗಾವಿಯಲ್ಲಿ ಏನು ನಡೆದಿತ್ತು ಎಂದು ಇಡೀ ಜಗತ್ತಿಗೆ ಗೊತ್ತಿದೆ.

1956 ರಿಂದ 1986ರವರೆಗೆ ಕನ್ನಡಿಗರ ವಿರುದ್ಧ ಹಿಂಸಾಚಾರ ಮಾಡಿ, ಗೋಲಿಬಾರ್‌ನಲ್ಲಿ ಹಲವರು ಸತ್ತಿದ್ದಾರೆ. ಗೂಂಡಾಗಳ ಕುಟುಂಬಗಳಿಗೆ ನೀವು ಪೆನ್ಷನ್ ಕೊಡುತ್ತಿದ್ದೀರಿ. ಮತ್ತೊಂದು ರಾಜ್ಯದ ವಿರುದ್ಧ ಚಳವಳಿ ಮಾಡೋರಿಗೆ ಪ್ರಚೋದನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇದನ್ನು ಕರ್ನಾಟಕ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

1986ರಲ್ಲಿ ಶರದ್ ಪವಾರ್ ಚಳವಳಿ ಮಾಡಿದಾಗ ಛಗನ್ ಭುಜಬಲ್ ಸಹ ಬಂದಿದ್ದರು. ಮಹಾರಾಷ್ಟ್ರದಿಂದ ಬೆಳಗಾವಿಗೆ ಬಂದ ಶಿವಸೇನೆಯವರು ಎಂಇಎಸ್ ಜೊತೆಗೂಡಿ ಗಲಭೆ ಮಾಡಿದ್ದರು. ಗೂಂಡಾಗಿರಿ ಮಾಡಿ ಕನ್ನಡ ಪತ್ರಿಕಾಲಯಗಳಿಗೆ ಬೆಂಕಿ ಹಚ್ಚಿದ್ದರು. ಬೆಳಗಾವಿ ನಗರಕ್ಕೆ ನೀರು ಪೂರೈಸುವ ಘಟಕಕ್ಕೆ ವಿಷ ಹಾಕಲು ಯತ್ನಿಸಿದರು.

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ

ಬೆಳಗಾವಿ ನಗರಕ್ಕೆ ನೀರು ಪೂರೈಸುವ ಹಿಂಡಲಗಾ ಬಳಿಯ ಪಂಪಿಂಗ್ ಸ್ಟೇಷನ್ ಸುಡಲು ಯತ್ನಿಸಿದ್ದರು. ಅಂದಿನ ಬೆಳಗಾವಿ ಎಸ್‌ಪಿ ಕೆ.ನಾರಾಯಣ ಗೋಲಿಬಾರ್‌ಗೆ ಆದೇಶಿಸಿದಾಗ 9 ಜನ ಮೃತಪಟ್ಟಿದ್ದರು. ಇಂತಹ ಅನೇಕ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳು ಬೆಳಗಾವಿಯಲ್ಲಿವೆ. ಅವರೇನೂ ಸ್ವಾತಂತ್ರ್ಯ ಚಳವಳಿ ಮಾಡಿದವರಲ್ಲ ಎಂದು ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿ ಮಾಡಿದ ಕುಟುಂಬಗಳಲ್ಲ. ಹಿಂಸಾಚಾರ, ಗೂಂಡಾಗಿರಿ ಮಾಡಿ ಗೋಲಿಬಾರ್‌ನಲ್ಲಿ ಸತ್ತವರ ಕುಟುಂಬಕ್ಕೆ ಪೆನ್ಷನ್ ಕೊಡುತ್ತಿದ್ದಾರೆ. ಇದು ಮತ್ತೊಂದು ರಾಜ್ಯದ ವಿರುದ್ಧ ಪ್ರಚೋದನೆ. ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಿಎಂ ಏಕನಾಥ ಶಿಂಧೆ ಹೇಳಿಕೆಯನ್ನು ವಿರೋಧಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಅಶೋಕ ಚಂದರಗಿ ಆಗ್ರಹಿಸಿದರು.

ಇದನ್ನೂ ಓದಿ : ಒಂದಿಂಚು ಭೂಮಿ, ಹನಿ ನೀರನ್ನೂ ಬಿಟ್ಟುಕೊಡಲ್ಲ; 'ಮಹಾ' ನಾಯಕರಿಗೆ ಸಚಿವ ಕಾರಜೋಳ ತಿರುಗೇಟು

Last Updated : Nov 23, 2022, 4:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.