ETV Bharat / state

ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಆಪ್ತರಿಂದ ಹಲ್ಲೆ, ಜೀವ ಬೆದರಿಕೆ ಆರೋಪ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​ ಆಪ್ತರು ಅಮಾಯಕ ವ್ಯಕ್ತಿಗೆ ವಿನಾಕಾರಣ ಹಲ್ಲೆ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ಅಥಣಿ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಶಾಸಕರ ಆಪ್ತರ ವಿರುದ್ಧ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

kagwad-mla-srimant-patil-close-aides-attacked-man-at-athani
ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಆಪ್ತರಿಂದ ಹಲ್ಲೆ, ಜೀವ ಬೆದರಿಕೆ ಆರೋಪ
author img

By

Published : Oct 12, 2022, 3:32 PM IST

ಅಥಣಿ (ಬೆಳಗಾವಿ) : ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಆಪ್ತರು ಅ.6ರಂದು ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಬಂದೇನಮಾಜ್ ಮುಲ್ಲಾ ಎಂಬವರು ಆರೋಪ ಮಾಡಿದ್ದಾರೆ. ಹಾಗೂ ಶಾಸಕರ ಪಿಎ ರಾಜು ಮಾನೆಯಿಂದ ಜೀವ ಬೆದರಿಕೆ ಇರುವುದಾಗಿ ಇದೇ ವೇಳೆ ಆರೋಪಿಸಿದ್ದಾರೆ.

ಬಂದೇನಮಾಜ್ ಮುಲ್ಲಾ ಕೆಲಸ ಮುಗಿಸಿಕೊಂಡು ಊರಿಗೆ ಹಿಂತಿರುಗುತ್ತಿರುವಾಗ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರ ಆಪ್ತರಾದ ಗ್ರಾಪಂ ಸದಸ್ಯ ಶಂಕರಗೌಡ ಪಾಟೀಲ್, ಸಂಗಡಿರಾದ ರಾಘವೇಂದ್ರ ಸಪ್ತಸಾಗರ್, ಗಂಗಪ್ಪ ಮಾಳಿ, ಬುಜುಗೌಡ ಪಾಟೀಲ್ ಎಂಬುವರು ಬಂದೇನಮಾಜ್ ಮದ್ಯದ ಅಮಲಿನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಆಪ್ತರಿಂದ ಹಲ್ಲೆ, ಜೀವ ಬೆದರಿಕೆ ಆರೋಪ

ಹಲ್ಲೆಗೊಳಗಾದ ವ್ಯಕ್ತಿ ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮಾರನೆಯ ದಿನ 7ನೇ ತಾರೀಕು ನಾಲ್ವರ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗಿದ್ದರೂ ಅಥಣಿ ಪೊಲೀಸರು ಆರೋಪಿಗಳ ಮೇಲೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಘಟನೆ ನಡೆದು ಒಂದು ವಾರ ಕಳೆದರೂ FIR ಪ್ರತಿ ನೀಡುತ್ತಿಲ್ಲ. ಜೊತೆಗೆ ಪೊಲೀಸರು ಶಾಸಕರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅಥಣಿ ಹಲ್ಲೆಗೊಳಗಾದ ಬಂದೆನಮಾಜ್ ಸಂಬಂಧಿ ರಜಾಕ್ ಮುಲ್ಲಾ ಆರೋಪ ಮಾಡಿದ್ದಾರೆ.

kagwad-mla-srimant-patil-close-aides-attacked-man-at-athani
ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಆಪ್ತರಿಂದ ಹಲ್ಲೆ, ಜೀವ ಬೆದರಿಕೆ ಆರೋಪ

ಕೇಸು ದಾಖಲಿಸಿರುವ ಸಂಬಂಧ ಶಾಸಕ ಶ್ರೀಮಂತ ಪಾಟೀಲ್ ಆಪ್ತ ಸಲಹೆಗಾರ ರಾಜು ಮಾನೆ, ದೂರು ವಾಪಸ್ ತೆಗೆದುಕೋ ಇಲ್ಲವಾದರೆ ನಾವು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ರಜಾಕ್ ಮುಲ್ಲಾ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ: ಜನ ಸೇರಿಸದವರಿಗೆ ಟಿಕೆಟ್ ಕೈ ತಪ್ಪುವ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.