ಬೆಳಗಾವಿ/ಚಿಕ್ಕೋಡಿ:
ಕಾಗವಾಡ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಪ್ರಚಾರ ನಡೆಸಿದ್ದು, ಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಇಂದು ಮೋಳೆ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಸಾರ್ವಜನಿಕರ ಮನವಿಯನ್ನು ಸ್ವೀಕರಿಸಿದ್ದಾರೆ.
ಗ್ರಾಮದಲ್ಲಿ ಹನುಮಾನ್ ದೇವಸ್ಥಾನದ ಕಟ್ಟಡ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲ. ನಮ್ಮ ಗ್ರಾಮಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು, ಯುವಕ ರವಿ ಬನಚೋಡ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಇನ್ನು ಇದೇ ವೇಳೆ ಮಾತನಾಡಿದ ಯುವಕ ರವಿ, ನಮ್ಮಲ್ಲಿ ಯಾರು ಕಾಲ ಇಟ್ಟು ಹೋಗಿದ್ದಾರೆಯೋ, ಅವರು ವಿಜಯಶಾಲಿಯಾಗದೇ ಹೋಗಿಲ್ಲ. ನಿಮ್ಮ ಗೆಲವು ನಿಶ್ಚಿತವಾಗಿದ್ದು, ನೀವು ನಮ್ಮ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಗ್ರಾಮಸ್ಥರ ಪರವಾಗಿ ಭರವಸೆ ನೀಡಿದರು.