ಗೋಕಾಕ: ಡಿಸೆಂಬರ್ 5ಕ್ಕೆ ಗೋಕಾಕ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಮತಕ್ಕಾಗಿ ಜೋಳಿಗೆ ದಿಕ್ಷೆ ಪಡೆದು ಭಿನ್ನವಾಗಿ ಪ್ರಚಾರ ನಡೆಸಿದರು.
ಗೋಕಾಕ್ನ ಶೂನ್ಯ ಸಂಪಾದನಾ ಮಠದಲ್ಲಿ ಮುರಘ ರಾಜೇಂದ್ರ ಮಹಾಸ್ವಾಮಿ ನೇತೃತ್ವದಲ್ಲಿ ಜೋಳಿಗೆ ಹಾಕಿದ ಅಶೋಕ ಪೂಜಾರಿ ಜೋಳಿಗೆ ದೀಕ್ಷೆ ಪಡೆದಿದ್ದು, ಇಂದಿನಿಂದ ಜೆಡಿಎಸ್ ಕ್ಷೇತ್ರದಲ್ಲಿ ಜೋಳಿಗೆ ಹಿಡಿದು ಮತ ಭಿಕ್ಷೆ ಯಾಚಿಸಲಿದ್ದಾರೆ. ಇನ್ನು, ಅಶೋಕ ಪೂಜಾರಿಗೆ ಬಂಡೆಪ್ಪ ಕಾಂಶಪೂರ್ ಸಾಥ್ ನೀಡಿದರು.