ಗೋಕಾಕ್: ಜಂಗಮ ಜೋಳಿಗೆಯಲ್ಲಿ ಮತದ ಜತೆಗೆ ಹಣ ಹಾಕಿದ್ರೆ ಸಮಾಜದ ಉಪಯೋಗಕ್ಕೆ ಬಳಕೆ ಮಾಡುತ್ತೇನೆ. ಜನರು ನೀಡಿದ ಸ್ಥಾನಮಾನಕ್ಕೆ ಅಪಮಾನ ಆಗದಂತೆ ಕೆಲಸ ಮಾಡುತ್ತೆನೆ ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದ್ದಾರೆ.
ಗೋಕಾಕ್ನ ಶೂನ್ಯ ಸಂಪಾದನಾ ಮಠದಲ್ಲಿ ಮುರಘರಾಜೇಂದ್ರ ಮಹಾಸ್ವಾಮಿ ನೇತೃತ್ವದಲ್ಲಿ ಜೋಳಿಗೆ ದೀಕ್ಷೆ ಪಡೆದು ಮಾತನಾಡಿದ ಅವರು, ಸಮಾಜದ ಋಣ ತೀರಿಸಲು ಕೆಲಸ ಮಾಡುತ್ತೇನೆ. ವಾಮಮಾರ್ಗ, ಕಾನೂನು ಬಾಹಿರ ಪ್ರಕ್ರಿಯೆಯಿಂದ ಹಣ ಗಳಿಸಿಲ್ಲ. ನನ್ನ ಬಳಿ ದುಡ್ಡಿಲ್ಲ. ಆದರೆ, ಜೋಳಿಯ ಮೂಲಕ ಪಡೆಯುತ್ತೇನೆ ಎಂದರು. ಅಲ್ಲದೆ ಜನರು ನೀಡಿದ ಹಣವನ್ನು ಚುನಾವಣೆ ಕಾರ್ಯಕ್ಕೆ ಬಳಕೆ ಮಾಡುತ್ತೇನೆ. ದಕ್ಷಿಣೆ ರೂಪದ ಹಣಕ್ಕೆ ಅಪಮಾನ ಆಗದಂತೆ ನೋಡುತ್ತೇನೆ ಎಂದು ಅಶೋಕ ಪೂಜಾರಿ ಹೇಳಿದ್ದಾರೆ.