ಗೋಕಾಕ(ಬೆಳಗಾವಿ): ಗೋಕಾಕ್ ರಾಜಕಾರಣಕ್ಕೆ ಈಗ ಹುಲಿಗಳ ಅವಶ್ಯಕತೆ ಇಲ್ಲ, ಈಗಾಗಲೇ ಒಂದು ಹುಲಿ ಏನೇನು ಮಾಡಿದೆ ಎಂಬುದು ನಿಮಗೆ ಗೊತ್ತಿದೆ. ಯಾಕಂದ್ರೆ, ಹುಲಿಯ ಸ್ವಭಾವವೇ ಹಿಂಸೆ, ಅದು ಜನರನ್ನು ತಿನ್ನುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆಗೆ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ತಿರುಗೇಟು ನೀಡಿದ್ದಾರೆ.
ನಗರದ ಜ್ಞಾನಮಂದಿರದಲ್ಲಿ ಮಾತನಾಡಿದ ಅವರು ಹುಲಿಯ ಜತೆ ಸೆಣಸಾಡಲು ಗೋಕಾಕದಲ್ಲಿ ಹುಲಿಯನ್ನೇ ಬಿಟ್ಟಿದ್ದೇನೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಗೋಕಾಕ್ ಜನರಿಗೆ ಈಗ ಬೇಕಿರುವುದು ಕಿತ್ತು ತಿನ್ನುವ ಹುಲಿಗಳಲ್ಲ, ಬದಲಾಗಿ ಹಾಲು ಕೊಡುವ ಮತ್ತು ನೆಲ ಉಳುಮೆ ಮಾಡುವ ಎತ್ತು ಎಂದರು.
ಇಲ್ಲಿ ಮಳೆ, ಗಾಳಿ, ಎನ್ನದೆ ಹೊಲ ಉಳುಮೆ ಮಾಡಿ ಹಗಲು ರಾತ್ರಿ ದುಡಿಯುವ ಹಸು ಬೇಕಾಗಿದೆ. ಸಾಹುಕಾರ್ ಹುಲಿಯ ಹೇಳಿಕೆಗೆ ತಾವು ಹಸು, ಎತ್ತು ಎಂದು ತಮ್ಮನ್ನು ಸಮರ್ಥಿಸಿಕೊಂಡರು.