ಅಥಣಿ: ನೆಲ-ಜಲ, ನಾಡು ರಕ್ಷಣೆಗೆ ಯಾರೇ ಹೋರಾಟ ಮಾಡಿದರೂ ಅದು ಒಳ್ಳೆಯ ಬೆಳವಣಿಗೆ. ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಗೆ ಶುಭವಾಗಲಿ ಎಂದು ಕೂಡಲ ಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಶುಭ ಕೋರಿದರು.
ದೇಶದಲ್ಲಿ, ನಾಡಿನಲ್ಲಿ ನೀರು, ರೈತರ ಪರವಾಗಿ ಯಾವುದೇ ಪಕ್ಷದವರು ಧ್ವನಿ ಎತ್ತಿದರೂ ಒಳ್ಳೆಯದು. ನಾನು ಕಾಂಗ್ರೆಸ್ ನಾಯಕರ ಜತೆ ಮೇಕೆದಾಟು ಪಾದಯಾತ್ರೆಯಲ್ಲಿ ಸಾಗುವುದಕ್ಕೆ ಆಗುವುದಿಲ್ಲ. ಸದ್ಯ ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆ, ಬೆಂಗಳೂರು ಛಲೋ ಪಾದಯಾತ್ರೆಗೆ ಜ.14ಕ್ಕೆ ಒಂದು ವರ್ಷ ತುಂಬುವುದರಿಂದ ಈ ಕಾರ್ಯಕ್ರಮದ ತಯಾರಿಯಲ್ಲಿ ನಿರತರಾಗಿದ್ದೇನೆ ಎಂದು ತಿಳಿಸಿದರು.
ಪ್ರಧಾನಿ ಅವರ ಭದ್ರತೆಯಲ್ಲಿ ಲೋಪವಾಗಿರುವುದು ಯಾವ ಕಾರಣಕ್ಕೆ ಎಂಬುದು ಗೊತ್ತಿಲ್ಲ. ದೇಶದ ಪ್ರಧಾನಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಭಿನ್ನಾಭಿಪ್ರಾಯವಿದ್ದರೂ, ಈ ರೀತಿ ಅಗೌರವ ತೋರಿಸುವುದು ಸರಿಯಲ್ಲ ಎಂದು ಇದೇ ವೇಳೆ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಮಲ್ಲಿಕಾರ್ಜುನ ಖರ್ಗೆ ಚಾಲನೆ