ಅಥಣಿ : ಸಿದ್ದರಾಮಯ್ಯ ಮುಂದೆ ಯಾವತ್ತೂ ಕೂಡ ಸಿಎಂ ಆಗೋಕೆ ಸಾಧ್ಯವಿಲ್ಲ. ಅವರು ಹಗಲುಗನಸಿನ ಭ್ರಮೆಯಿಂದ ಹೊರಗೆ ಬರಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶೆಟ್ಟರ್, ದೇವೇಗೌಡ ಫ್ಯಾಮಿಲಿ ಮತ್ತು ಸಿದ್ದರಾಮಯ್ಯ ಉತ್ತರ ಕರ್ನಾಟಕದ ವಿರೋಧಿಗಳು, ಈ ಭಾಗಕ್ಕೆ ಯೋಜನೆಗಳ ಹೆಸರು ಕೊಟ್ಟಿದ್ದಾರೆ ಆದ್ರೆ ಸರಿಯಾದ ಅನುದಾನ ಕೊಟ್ಟಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಕಾಂಗ್ರೆಸ್-ಜೆಡಿಎಸ್ಗೆ ಸೋಲಿನ ಭೀತಿ ಶುರುವಾಗಿದೆ ಅದಕ್ಕೆ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಸೂರ್ಯ ಚಂದ್ರ ಇರುವುದು ಎಷ್ಟು ನಿಜವೂ ಹಾಗೆಯೇ ಬಿಜೆಪಿ 15 ಕ್ಷೇತ್ರ ಗೆಲ್ಲೋದು ಖಚಿತ. ಕಾಂಗ್ರೆಸ್ನವರು ಭ್ರಮೆಯಲ್ಲಿದ್ದು ತಿರುಕನ ಕನಸು ಕಾಣುತ್ತಿದ್ದಾರೆ, ಸಿದ್ದರಾಮಯ್ಯ ಮುಂದೆ ಯಾವತ್ತೂ ಕೂಡ ಸಿಎಂ ಆಗೋಕೆ ಸಾಧ್ಯವಿಲ್ಲ. ಅವರು ಹಗಲುಗನಸಿನ ಭ್ರಮೆಯಿಂದ ಹೊರಗೆ ಬರಬೇಕು ಎಂದು ವ್ಯಂಗ್ಯವಾಡಿದರು.
ಮಹೇಶ ಕುಟಮಳ್ಳಿ ಮತ್ತು ಶ್ರೀಮಂತ ಪಾಟೀಲ ಇಬ್ಬರೂ ಗೆದ್ದ ಬಳಿಕ ಸಚಿವರಾಗಲಿದ್ದಾರೆ ಇದನ್ನು ನಾವು ಸುಮ್ಮನೇ ಎಲೆಕ್ಷನ್ ಬಂದಿದೆ ಅಂತಾ ಹೇಳುತ್ತಿಲ್ಲ. ಈಗಾಗಲೇ ಕ್ಯಾಬಿನೆಟ್‌ನಲ್ಲಿ 15 ಸ್ಥಾನ ಖಾಲಿ ಇವೆ ಎಂದು ತಿಳಿಸಿದರು.