ETV Bharat / state

ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ನಷ್ಟ: ಡಾ.ಪ್ರಭಾಕರ ಕೋರೆ

author img

By

Published : Apr 16, 2023, 4:33 PM IST

ಜಗದೀಶ್ ಶೆಟ್ಟರ್​​ ಬಿಜೆಪಿ ತೊರೆದಿರುವುದು ಪಕ್ಷಕ್ಕೆ ನಷ್ಟ ಎಂದು ಕೆಎಲ್​​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್​ ಕೋರೆ ಅಭಿಪ್ರಾಯಪಟ್ಟಿದ್ದಾರೆ.

jagadish-shettars-resignation-is-loss-to-bjp-says-dr-prabhakar-kore
ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ನಷ್ಟ: ಡಾ. ಪ್ರಭಾಕರ ಕೋರೆ

ಡಾ. ಪ್ರಭಾಕರ ಕೋರೆ ಹೇಳಿಕೆ

ಬೆಳಗಾವಿ : ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ನಷ್ಟ. ಅವರಿಗೆ ಯಾಕೆ ಟಿಕೆಟ್ ಕೊಡಲಿಲ್ಲ ಎಂಬುದು ಗೊತ್ತಿಲ್ಲ ಎಂದು ಕೆಎಲ್ಇ‌ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ತಿಳಿಸಿದ್ದಾರೆ. ತಮ್ಮ‌ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕವಾಗಿ ನನಗೂ ಅವರಿಗೂ ಸಂಬಂಧ ಇತ್ತು. ಇಂದು ಸಂಜೆ ಭೇಟಿಯಾಗಿ ಮಾತನಾಡುತ್ತೇನೆ. 7ನೇ ಬಾರಿಯೂ ಅವರು ಗೆಲ್ಲುತ್ತಿದ್ದರು. ಆದರೆ ಪಕ್ಷ ಯಾಕೆ ಕಡೆಗಣನೆ ಮಾಡಿತು ಎಂಬುದೇ ಗೊತ್ತಿಲ್ಲ. ಪಕ್ಷೇತರರಾಗಿ ನಿಂತರೂ ಅವರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಶೆಟ್ಟರ್ ಅವರನ್ನು ಮತ್ತೊಮ್ಮೆ ಪರಿಗಣಿಸಿ, ನಿರ್ಲಕ್ಷ್ಯ ಮಾಡಬೇಡಿ ಎಂದು ತಿಳಿಸುತ್ತೇನೆ. ಯಾಕೆಂದರೆ ಇದರಿಂದ ಸಮಾಜಕ್ಕೆ ತಪ್ಪು‌ ಸಂದೇಶ ಹೋಗುತ್ತದೆ. ಚುನಾವಣೆ ಮುಂದಿಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡುವ ಪ್ರಯೋಗ ಮಾಡಬಹುದಿತ್ತು ಎಂದು ಹೇಳಿದರು. ನಿಮ್ಮನ್ನು ಏನಾದರೂ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರಾ ಎಂಬ ಪ್ರಶ್ನೆಗೆ, ನನಗೆ ಕಾಂಗ್ರೆಸ್​​ನಿಂದ ಯಾವುದೇ ಆಫರ್ ಬಂದಿಲ್ಲ. ಬಿಜೆಪಿ ಬಿಡುವ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಸಮುದಾಯವನ್ನು ಬಿಜೆಪಿ‌ ಕಡೆಗಣಿಸುತ್ತಿದೆ, ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಶೆಟ್ಟರ್ ಅವರನ್ನು‌ ಕಡೆಗಣಿಸಿದ್ದು ವೈಯಕ್ತಿಕ ಇರಬಹುದು. ಆದರೆ ಲಿಂಗಾಯತ ಸಮಾಜವನ್ನು ಕಡೆಗಣಿಸಿದರೆ ಸಮಾಜ ಎಂದೂ ಒಪ್ಪುವುದಿಲ್ಲ. ರಾಜಕೀಯದಲ್ಲಿ ಬಹಳ ಪ್ರಜ್ಞಾವಂತರಿರುವ ಸಮಾಜವಿದು. ಸ್ವಾತಂತ್ರ್ಯ ಪೂರ್ವದಲ್ಲೂ ನಾವು ರಾಜಕಾರಣ ಮಾಡಿದ್ದೇವೆ. ನಮ್ಮವರು ಮಂತ್ರಿಗಳು ಕೂಡ ಆಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ನಮ್ಮ ಬಹಳಷ್ಟು ಲಿಂಗಾಯತ ಮುಖಂಡರು‌ ಭಾಗವಹಿಸಿದ್ದರು. ಹೀಗಾಗಿ ರಾಜಕೀಯವಾಗಿಯೂ ಪ್ರಜ್ಞಾವಂತವಾಗಿರುವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದರೆ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲ. ನಡುವಿನ ಜನರೇ ಮಾತನಾಡುತ್ತಿದ್ದಾರೆ. ಇವರುಗಳು ಏನಾದರೂ ಈ ಸಮಾಜವನ್ನು ಮುಗಿಸುತ್ತೇವೆ ಎಂದು ಅಂದುಕೊಂಡಿದ್ದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳೊಂದಿಗೆ ಸಚಿವ ಪ್ರಹ್ಲಾದ್ ಜೋಶಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.