ETV Bharat / state

ಕೃಷ್ಣಾ ನದಿಯಲ್ಲಿ ಹೆಚ್ಚಿದ ಒಳ ಹರಿವು : ಸ್ಥಳೀಯರಲ್ಲಿ ಆತಂಕ

ಲೋಂಡಾದ ನಿವಾಸಿ ಶೇಖರ್ ಮಿಠಾರಿ (50) ರಕ್ಷಣೆಗೆ ಒಳಗಾದವರು. ಇಂದು ಬೆಳಗ್ಗೆ ಲೋಂಡಾದಲ್ಲಿ ತನ್ನ ಮಾಲೀಕತ್ವದ ಕೋಳಿ ಫಾರ್ಮ್ ನೋಡಲು ಹೋಗಿರುವ ಸಂದರ್ಭದಲ್ಲಿ ಪಾಂಡರಿ ನದಿ ಉಕ್ಕಿ ಹರಿದಿದ್ದರಿಂದ ಕೋಳಿ ಫಾರ್ಮ್‌ನಲ್ಲಿ ಸಿಲುಕಿದ್ದರು..

ಕೃಷ್ಣಾ ನದಿಯಲ್ಲಿ ಹೆಚ್ಚಿದ ಒಳ ಹರಿವು
ಕೃಷ್ಣಾ ನದಿಯಲ್ಲಿ ಹೆಚ್ಚಿದ ಒಳ ಹರಿವು
author img

By

Published : Jul 23, 2021, 5:39 PM IST

Updated : Jul 23, 2021, 6:43 PM IST

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಏರಿಕೆ ಕಂಡಿದ್ದು, ಕೃಷ್ಣಾ ನದಿಯಲ್ಲಿ 1,56,000 ಅಧಿಕ ಕ್ಯೂಸೆಕ್‌ಗಿಂತ ನೀರು ಹೆಚ್ಚಾಗಿದೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,21,875 ಕ್ಯೂಸೆಕ್, ದೂಧಗಂಗಾ ನದಿಯಿಂದ 34,320 ಕ್ಯೂಸೆಕ್‌ ಸೇರಿ ಒಟ್ಟು 1,56,000 ಕ್ಯೂಸೆಕ್‌ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.

ಮಹಾರಾಷ್ಟ್ರದ ಕೋಯ್ನಾ- 610 ಮಿ.ಮೀ, ನವಜಾ - 746 ಮಿ.ಮೀ, ಮಹಾಬಲೇಶ್ವರ - 556 ಮಿ.ಮೀ, ವಾರಣಾ - 574 ಮಿ.ಮೀ, ಕಾಳಮ್ಮವಾಡಿ - 480 ಮಿ.ಮೀ, ರಾಧಾನಗರಿ - 567 ಮಿ.ಮೀ, ಪಾಟಗಾಂವ - 436 ಮಿ.ಮೀ ಮಳೆಯಾಗಿದೆ.

ಸದ್ಯ ಕೋಯ್ನಾ ಜಲಾಶಯ 78%, ವಾರಣಾ ಜಲಾಶಯ 95%, ರಾಧಾನಗರಿ ಜಲಾಶಯ 86%, ಕಣೇರ ಜಲಾಶಯ 70%, ಧೂಮ ಜಲಾಶಯ 72%, ಪಾಟಗಾಂವ 83% ಧೂದಗಂಗಾ 69%, ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,12,000 ಹಾಗೂ ಆಲಮಟ್ಟಿ ಜಲಾಶಯದಿಂದ 1,70,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ಕೃಷ್ಣಾ ನದಿಯಲ್ಲಿ ಹೆಚ್ಚಿದ ಒಳ ಹರಿವು

ಪಾಂಡರಿ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ : ಖಾನಾಪೂರ ತಾಲೂಕಿನ ಪಾಂಡರಿ ನದಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಬೋಟ್ ಹಾಗೂ ಹಗ್ಗದ ನೆರವಿನಿಂದ ಸ್ಥಳೀಯರು ಹಾಗೂ ರಕ್ಷಣಾ ತಂಡದ ಸಿಬ್ಬಂದಿ ರಕ್ಷಿಸಿದ್ದಾರೆ.

ಲೋಂಡಾದ ನಿವಾಸಿ ಶೇಖರ್ ಮಿಠಾರಿ (50) ರಕ್ಷಣೆಗೆ ಒಳಗಾದವರು. ಇಂದು ಬೆಳಗ್ಗೆ ಲೋಂಡಾದಲ್ಲಿ ತನ್ನ ಮಾಲೀಕತ್ವದ ಕೋಳಿ ಫಾರ್ಮ್ ನೋಡಲು ಹೋಗಿರುವ ಸಂದರ್ಭದಲ್ಲಿ ಪಾಂಡರಿ ನದಿ ಉಕ್ಕಿ ಹರಿದಿದ್ದರಿಂದ ಕೋಳಿ ಫಾರ್ಮ್‌ನಲ್ಲಿ ಸಿಲುಕಿದ್ದರು.

ಇದನ್ನೂ ಓದಿ : ಉಕ್ಕಿ ಹರಿಯುತ್ತಿರುವ ಚಿಕ್ಕೊತ್ರಾ ನದಿ : ಜಾನುವಾರು ಸಮೇತ ಗ್ರಾಮಗಳನ್ನು ಖಾಲಿ ಮಾಡುತ್ತಿರುವ ಜನರು

ಈ ಬಗ್ಗೆ ಸ್ಥಳೀಯರು ಹಾಗೂ‌ ಕುಟುಂಬಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ರಕ್ಷಣಾ ಪಡೆ, ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದ್ರೆ, ಕೋಳಿ ಫಾರ್ಮ್‌ ಸುತ್ತಲೂ ಪಾಂಡರಿ ನದಿ ಸುತ್ತುವರೆದ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಸ್ವಲ್ಪಮಟ್ಟಿಗೆ ಹಿನ್ನೆಡೆ ಉಂಟಾಗಿತ್ತು.

ಈ ವೇಳೆ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿ ಶೇಖರ್ ಫಾರ್ಮ್‌ನಿಂದ ಬ್ಯಾಟರಿ ಲೈಟ್ ಬಿಟ್ಟು ಜೀವಂತ ಇರುವ ಬಗ್ಗೆ ಮಾಹಿತಿ ನೀಡಿದ್ದನು‌. ಬಳಿಕ ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಾಣ ತಂಡದ ಸಿಬ್ಬಂದಿ, ಸ್ಥಳೀಯರ ನೆರವಿನಿಂದ ರಕ್ಷಣೆ ಮಾಡಿದ್ದಾರೆ.

Last Updated : Jul 23, 2021, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.