ETV Bharat / state

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಕೃಷ್ಣಾ ನದಿಯ ಒಳಹರಿವು ಹೆಚ್ಚಳ

ಚಿಕ್ಕೋಡಿ ಉಪ ವಿಭಾಗದ ಶಿನಾಳ-ಕಾತ್ರಾಳ, ಕೌಲಗುಡ್ಡ-ಮೋಳೆ, ಕೆಂಪವಾಡ - ಮಿರಜ, ಶಿರೂರ -ಖೇಳೆಗಾಂವ, ಕಾತ್ರಾಳ - ತಂಗಡಿ, ಸಂಬರಗಿ-ಆಜೂರ ಬಿಜ್ಜರಗಿ - ತೇಲಸಂಗ, ಕೆಂಪವಾಡ - ಖಟಾವ ರಸ್ತೆಗೆ ನುಗ್ಗಿದ ನೀರಿನಿಂದ ಜನರಿಗೆ ತೊಂದರೆ ಉಂಟಾಗಿದೆ.

Increase of Krishna River inlet flow
ಕೃಷ್ಣಾ ನದಿಯ ಒಳ ಹರಿವು ಹೆಚ್ಚಳ
author img

By

Published : Oct 15, 2020, 2:10 PM IST

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕೃಷ್ಣಾ, ವೇದಗಂಗಾ ಮತ್ತು ದೂಧ್​ಗಂಗಾ ನದಿಗಳ ಒಳಹರಿವಿನಲ್ಲಿ ಏರಿಕೆಯಾಗಿದೆ. 65,000ಕ್ಕೂ ಅಧಿಕ ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಕೃಷ್ಣಾ ನದಿ ಒಳಹರಿವು ಇದೆ ಎಂದು ತಹಶೀಲ್ದಾರ್​ ಶುಭಾಸ ಸಂಪಗಾಂವಿ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಕೃಷ್ಣಾ ನದಿಯ ಒಳಹರಿವು ಹೆಚ್ಚಳ

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 53,500 ಕ್ಯೂಸೆಕ್ ನೀರು, ದೂಧ್​​ಗಂಗಾ ನದಿಯಿಂದ 11,616 ಕ್ಯೂಸೆಕ್ ನೀರು ಹೀಗೆ ಒಟ್ಟು 65,000 ಕ್ಯೂಸೆಕ್​​ಗೂ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ - 64 ಮಿ.ಮೀ., ನವಜಾ - 67 ಮಿ.ಮೀ., ಮಹಾಬಲೇಶ್ವರ - 126 ಮಿ.ಮೀ., ವಾರಣಾ - 45 ಮಿ.ಮೀ., ಸಾಂಗಲಿ - 136 ಮಿ.ಮೀ., ಕೊಲ್ಲಾಪೂರ - 130 ಮಿ.ಮೀ., ಕಾಳಮ್ಮವಾಡಿ - 36 ಮಿ.ಮೀ., ರಾಧಾನಗರಿ - 70 ಮಿ.ಮೀ., ಪಾಟಗಾಂವ - 67 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.

ಚಿಕ್ಕೋಡಿ - 86.4 ಮಿ.ಮೀ., ಅಂಕಲಿ - 68.8 ಮಿ.ಮೀ., ನಾಗರಮುನ್ನೊಳಿ - 48.6 ಮಿ.ಮೀ., ಸದಲಗಾ - 95 ಮಿ.ಮೀ., ಜೋಡಟ್ಟಿ - 50.5 ಮಿ.ಮೀ. ಮಳೆಯಾಗಿದೆ. ಸದ್ಯ ಕೊಯ್ನಾ ಜಲಾಶಯ 99.39%, ವಾರಣಾ ಜಲಾಶಯ 100%, ರಾಧಾನಗರಿ ಜಲಾಶಯ 98.89%, ಕಣೇರ ಜಲಾಶಯ 100%, ಧೂಮ ಜಲಾಶಯ 99.85%, ಪಾಟಗಾಂವ 100%, ಧೂದ್​ಗಂಗಾ 100%ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 68,000 ಹಾಗೂ ಆಲಮಟ್ಟಿ ಜಲಾಶಯದಿಂದ 1,17,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ರಸ್ತೆಗೆ ನುಗ್ಗಿದ ನೀರು- ಜನಜೀವನ ಅಸ್ತವ್ಯಸ್ತ: ಚಿಕ್ಕೋಡಿ ಉಪ ವಿಭಾಗದ ಶಿನಾಳ-ಕಾತ್ರಾಳ, ಕೌಲಗುಡ್ಡ-ಮೋಳೆ, ಕೆಂಪವಾಡ - ಮಿರಜ, ಶಿರೂರ -ಖೇಳೆಗಾಂವ, ಕಾತ್ರಾಳ - ತಂಗಡಿ, ಸಂಬರಗಿ-ಆಜೂರ ಬಿಜ್ಜರಗಿ - ತೇಲಸಂಗ, ಕೆಂಪವಾಡ - ಖಟಾವ ರಸ್ತೆಗೆ ನುಗ್ಗಿದ ನೀರಿನಿಂದ ಜನರಿಗೆ ತೊಂದರೆ ಉಂಟಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ರಕ್ಕಸ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.