ಚಿಕ್ಕೋಡಿ: ತಾಲೂಕಿನ ಹುಕ್ಕೇರಿ - ಘಟಪ್ರಭಾ ರಸ್ತೆಯ ಬೆಲ್ಲದಬಾಗೇವಾಡಿ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮದ ಬಸಗೌಡ ಈರಗೌಡ ಪಾಟೀಲ (43), ಲಕ್ಷ್ಮಣ ಕಲಗೌಡ ಪಾಟೀಲ (38) ಬಂಧಿತ ಆರೋಪಿಗಳು. ಇವರಿಂದ ನಾಲ್ಕು ಸಾವಿರ ಮೌಲ್ಯದ 670 ಗ್ರಾಂ ತೂಕದ ಒಣ ಗಾಂಜಾವನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.
ಈ ಕೃತ್ಯಕ್ಕೆ ಕಾರಣವಾದ ಇನ್ನೋರ್ವ ಆರೋಪಿ ಹುಕ್ಕೇರಿ ಪಟ್ಟಣದ ಬಾಗವಾನ ಗಲ್ಲಿ ನಿವಾಸಿ ಶಾನೂರ ರಫೀಕ ಅತ್ತಾರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.