ETV Bharat / state

ಲಕ್ಷ್ಮಿ ಹೆಬ್ಬಾಳ್ಕರ್ ಯಾರೆಂಬುವುದೇ ನನಗೆ ಗೊತ್ತಿಲ್ಲ: ರಮೇಶ್​ ಜಾರಕಿಹೊಳಿ‌

author img

By

Published : Jan 10, 2021, 5:46 PM IST

Updated : Jan 10, 2021, 6:07 PM IST

ನನ್ನನ್ನು ಒಂದೆರಡು ಬಾರಿ ಯುವರಾಜ ಭೇಟಿಯಾಗಿದ್ದು ನಿಜ. ನಾನು ಶಾಸಕನಾಗಿದ್ದಾಗ ದೆಹಲಿಯ ಕರ್ನಾಟಕ ಭವನದಲ್ಲಿ ಯುವರಾಜ ಭೇಟಿಯಾಗಿದ್ದನು. ಆದರೆ, ನಾನು ಯುವರಾಜನ ಜೊತೆ ಫೋಟೋ ತೆಗೆಸಿಕೊಂಡಿರಲಿಲ್ಲ..

ರಮೇಶ್​ ಜಾರಕಿಹೊಳಿ‌
Ramesh Jarkiholi

ಬೆಳಗಾವಿ : ಲಕ್ಷ್ಮಿ ಹೆಬ್ಬಾಳ್ಕರ್ ಯಾರೆಂಬುವುದೇ ನನಗೆ ಗೊತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅಚ್ಚರಿಯ ಹೇಳಿಕೆ

ಸುಳ್ಳು ಹೇಳುವುದು ಬಿಜೆಪಿ ಸಂಸ್ಕೃತಿ ಎಂಬ‌ ಶಾಸಕಿ ಹೆಬ್ಬಾಳ್ಕರ್ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಲಕ್ಷ್ಮಿ ಯಾರು? ನನಗೆ ಪರಿಚಯ ಇಲ್ಲ ಎಂದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಯಶಸ್ಸು ಕೊಡೋದು ಜನರಿಗೆ ಬಿಟ್ಟಿದ್ದು, ಬೆಳಗಾವಿ ಗ್ರಾಮೀಣ ಅಷ್ಟೇ ಅಲ್ಲ, ಇಡೀ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುತ್ತೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು‌ ಬಹಳ ಜನರಿದ್ದಾರೆ ಎಂದರು.

ಓದಿ: ನಮ್ಮದು ಆರ್​ಎಸ್ಎಸ್ ಹಿನ್ನೆಲೆಯ ಕುಟುಂಬ: ಸಚಿವ ರಮೇಶ್ ಜಾರಕಿಹೊಳಿ‌

ಬಿಜೆಪಿ, ಆರ್‌ಎಸ್‌ಎಸ್ ನಾಯಕ ಎಂದೇಳಿಕೊಂಡು ಯುವರಾಜ್ ಹಲವರಿಗೆ ಮೋಸ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೀನಿ. ಯುವರಾಜ್​​ ಜೊತೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಮಂತ್ರಿಗಳು ಏನು ತಪ್ಪಿತಸ್ಥರಲ್ಲ. ಉನ್ನತ ಹುದ್ದೆಯಲ್ಲಿದ್ದಾಗ ಜನರು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಗಂಭೀರ ಆರೋಪ ಮಾಡದೆ ತನಿಖೆ ಬಳಿಕ ಮಾತನಾಡಿದ್ರೆ ಒಳ್ಳೆಯದು ಎಂದರು.

ನನ್ನನ್ನು ಒಂದೆರಡು ಬಾರಿ ಯುವರಾಜ ಭೇಟಿಯಾಗಿದ್ದು ನಿಜ. ನಾನು ಶಾಸಕನಾಗಿದ್ದಾಗ ದೆಹಲಿಯ ಕರ್ನಾಟಕ ಭವನದಲ್ಲಿ ಯುವರಾಜ ಭೇಟಿಯಾಗಿದ್ದನು. ಆದರೆ, ನಾನು ಯುವರಾಜನ ಜೊತೆ ಫೋಟೋ ತೆಗೆಸಿಕೊಂಡಿರಲಿಲ್ಲ ಎಂದರು.

Last Updated : Jan 10, 2021, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.