ETV Bharat / state

ಮಹೇಶ ಕುಮಠಳ್ಳಿಗೆ ನೂರಕ್ಕೆ ನೂರರಷ್ಟು ಟಿಕೆಟ್​ ಸಿಗುವ ಬಗ್ಗೆ ವಿಶ್ವಾಸವಿದೆ: ರಮೇಶ ಜಾರಕಿಹೊಳಿ

ಬಿಜೆಪಿಗೆ ಬಂದಿರುವ 17 ಜನರಿಗೂ ಹೈಕಮಾಂಡ್​ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.​

Ramesh Jarakiholi
ರಮೇಶ ಜಾರಕಿಹೊಳಿ
author img

By

Published : Apr 9, 2023, 4:25 PM IST

ರಮೇಶ್ ಜಾರಕಿಹೊಳಿ ಹೇಳಿಕೆ

ಬೆಳಗಾವಿ : ಅಥಣಿ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಮಾಜಿ ಶಾಸಕ ರಮೇಶ್​ ಜಾರಕಿಹೊಳಿ, "ಕೆಲವು ವಿಷಯಗಳನ್ನು ಬಹಿರಂಗಪಡಿಸಲು ಬರುವುದಿಲ್ಲ. ಮಹೇಶ ಕುಮಠಳ್ಳಿಗೆ ಟಿಕೆಟ್ ಸಿಗುವ ಬಗ್ಗೆ ನಮಗೆ ನೂರಕ್ಕೆ ನೂರು ವಿಶ್ವಾಸವಿದೆ. ಇದರ ಜೊತೆಗೆ ಶ್ರೀಮಂತ ಪಾಟೀಲ ಮತ್ತು ನಾನೂ ಸೇರಿ ಬಿಜೆಪಿಗೆ ಬಂದಿರುವ 17 ಜನರಿಗೂ‌ ಹೈಕಮಾಂಡ್ ಆಶೀರ್ವಾದ ಮಾಡುವ ವಿಶ್ವಾಸವಿದೆ" ಎಂದರು. ರಮೇಶ್ ಜಾರಕಿಹೊಳಿ‌ ಅವರು ತಮ್ಮ ಆಪ್ತ ನಾಗೇಶ್ ಮನ್ನೋಳಕರ್‌ ಅವರ ಸಂಬಂಧಿಯ ಕಾರ್ಖಾನೆ ಪೂಜೆಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಢ ತಾಲೂಕಿನ ಶಿನೋಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಹೇಶ್​ ಸೋತರೆ ಅದನ್ನು ನನ್ನ ತಲೆಗೆ ಕಟ್ಟಲು ಷಡ್ಯಂತ್ರ ನಡೆದಿದೆ ಎಂಬ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, "ಅಥಣಿಯಲ್ಲಿ ಮಹೇಶ ಕುಮಠಳ್ಳಿ ಸೋಲು, ಗೆಲುವು ದೇವರ ಇಚ್ಛೆ. ಲಕ್ಷ್ಮಣ ಸವದಿ ಅವರು ಯಾಕೆ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂಬುದು ಅರ್ಥ ಆಗುತ್ತಿಲ್ಲ. ದೊಡ್ಡ ಹೆಮ್ಮರವಾಗಿ ನಮ್ಮ ರಾಷ್ಟ್ರೀಯ ನಾಯಕರಿದ್ದಾರೆ. ಅವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು. ಈ ಮಧ್ಯ ಯಾಕಿಷ್ಟು ಚಪಡಿಸುತ್ತಿಯಪ್ಪಾ, ಲಕ್ಷ್ಮಣ ಅಣ್ಣಾ ಆರಾಮಾಗಿರು" ಎಂದು ವ್ಯಂಗ್ಯವಾಡಿದರು.

ಸಭೆ ಮಾಡುವುದಾದ್ರೆ ಬೆಳಗಾವಿಯಲ್ಲೇ ಮಾಡುತ್ತೇನೆ: ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ ಅಂತ ಸಭೆ ಇಲ್ಲಿಗೆ ಶಿಫ್ಟ್ ಆಯ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ, "ಇದು ಚುನಾವಣಾ ಪ್ರಚಾರ ಸಭೆಯಲ್ಲ. ನಾಗೇಶ ಮನ್ನೋಳಕರ್ ಸಂಬಂಧಿಯ ಫ್ಯಾಕ್ಟರಿ ಪೂಜೆ. ಅದಕ್ಕೆ ಬಂದಿದ್ದೇನೆ. ಎಲ್ಲರೂ ಕೂಡಿ ಊಟ ಮಾಡಲು ಇದೊಂದು ಸಂದರ್ಭವಷ್ಟೇ. ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಭೆ ಮಾಡುವುದಾದರೆ ಬೆಳಗಾವಿಯಲ್ಲೇ ಮಾಡುತ್ತೇನೆ" ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಯಾವ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ಕೇಳಿದಾಗ, "ಟಿಕೆಟ್ ಯಾವಾಗ ಅನೌನ್ಸ್ ಆಗುತ್ತೋ ಗೊತ್ತಿಲ್ಲ. ಆದರೆ ಏ.10 ಅಥವಾ 11ರಂದು ಆಗಬಹುದು" ಎಂದು ಹೇಳಿದರು.

ಇದನ್ನೂ ಓದಿ: ಕಿತ್ತೂರಿನ ಸಿಂಹಾಸನಕ್ಕಾಗಿ ಕೈ-ಕಮಲ ಪೈಪೋಟಿ: ಯಾರಿಗೆ ಒಲಿಯುತ್ತೆ ರಾಣಿ ಚನ್ನಮ್ಮನ ಕ್ಷೇತ್ರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.