ETV Bharat / state

ಬೆಳಗಾವಿ: ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಗೆಳೆಯನನ್ನೇ ಕೊಂದು ಅರಣ್ಯದಲ್ಲಿ ಬಿಸಾಕಿದ ಗಂಡ - chikkodi murder case

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆಯಾದ ಘಟನೆ‌ಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

chikkodi murder case
ಆರೋಪಿ ಬಂಧನ
author img

By

Published : Oct 9, 2022, 7:51 AM IST

ಚಿಕ್ಕೋಡಿ (ಬೆಳಗಾವಿ): ತಾಲೂಕಿನ ಕರೋಶಿ ಗ್ರಾಮದ ಮುಖ್ಯ ರಸ್ತೆ ಪಕ್ಕದ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಹೆಂಡತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸ್ನೇಹಿತನನನ್ನೇ ಕೊಲೆ ಮಾಡಿ ಎಸೆದಿದ್ದ ಎಂದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಸುನೀಲ ಮಹಾದೇವ ಸಾಳುಂಕೆ (25) ಕೊಲೆಯಾದವ. ಜೈನಾಪೂರ ಗ್ರಾಮದ ಮಹಾಂತೇಶ ತಳವಾರ ಕೊಲೆ ಮಾಡಿದ ಆರೋಪಿ.‌ ಮೃತ ಸುನೀಲ ಮತ್ತು ಬಂಧಿತ ಆರೋಪಿ ಮಹಾಂತೇಶ ಇಬ್ಬರು ಗೆಳೆಯರು. ಮಹಾಂತೇಶನ ಹೆಂಡತಿಯೊಂದಿಗೆ ಸುನೀಲ ಅಸಭ್ಯವಾಗಿ ವರ್ತಿಸಿದ್ದನಂತೆ. ಇದರಿಂದ ರೊಚ್ಚಿಗೆದ್ದಿದ್ದ ಮಹಾಂತೇಶ, ಸ್ನೇಹಿತನನ್ನು ಅ.2 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೋಟಾರ್​ ಸೈಕಲ್ ಮೇಲೆ ಕರೋಶಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ವಿಪರೀತವಾಗಿ ಕುಡಿಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನ ಕರೋಶಿ ಗ್ರಾಮದ ಚಿಕ್ಕೋಡಿ-ಹುಕ್ಕೇರಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದನು.

ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆ

ಇದನ್ನೂ ಓದಿ: ಬೆಳಗಾವಿ: ಗಂಡನ ಕೊಲೆಗೈದ ಪತ್ನಿ, ಪ್ರಿಯಕರನ ಬಂಧನ

ಇತ್ತ ನಾಪತ್ತೆಯಾಗಿದ್ದ ಸುನೀಲ ಸಾಳುಂಕೆ ಶವವಾಗಿ ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಆರ್‌ ಆರ್‌ ಪಾಟೀಲ, ಪಿಎಸ್ಐ ಯಮನಪ್ಪ ಮಾಂಗ್, ಎಎಸ್ಐ ಎಲ್ ಎಸ್ ಖೋತ್, ಡೆಪ್ಯೂಟಿ ಆರ್​​ಎಫ್ಒ ಶ್ರೀಶೈಲ್ ಬನ್ಸೆ, ಅರಣ್ಯ ಖಾತೆ ಗಾರ್ಡ್ ಮಲಪ್ಪ ಕದಂ ಭೇಟಿ ನೀಡಿ, ಪರಿಶೀಲನೆ ನಡೆಸಿದರು‌. ಇದಾದ ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಅನುಮಾನಾಸ್ಪದವಾಗಿ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.