ಗೋಕಾಕ್ : ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ತಮ್ಮ ಪತ್ನಿ ಸಂಧ್ಯಾ ಜೊತೆ ಸೇರಿ ನಗರದ ಜಲಾಲ್ಗಲ್ಲಿ, ಕಿಲ್ಲಾ ರಸ್ತೆ ಸೇರಿದಂತೆ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದರು.
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪರವಾಗಿ ಕೆಎಮ್‌ಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಸಹೋದರ ಭೀಮಶಿ ಜಾರಕಿಹೊಳಿ ಬೆನ್ನಿಗೆ ನಿಂತು ಪ್ರಚಾರ ನಡೆಸುತ್ತಿದ್ದಾರೆ,
ಕಾಂಗ್ರೆಸ್ ಅಭ್ಯರ್ಥಿ ಲಖನ್ ಪರ ಸಹೋದರ ಸತೀಶ್ ಜಾರಕಿಹೊಳಿ ಹಗಲಿರುಳು ಶ್ರಮ ಪಡುತ್ತಿದ್ದು, ಈಗ ಲಖನ್ ಪತ್ನಿ ಸಂಧ್ಯಾ ಜಾರಕಿಹೊಳಿ ಪತಿ ಪರ ಪ್ರಚಾರಕ್ಕೆ ಧುಮುಕ್ಕಿದ್ದಾರೆ. ಹಾಗಾಗಿ ಈಗ ಕ್ಷೇತ್ರದ ಜನತೆ ಕುತೂಹಲದಿಂದ ಚುನಾವಣೆ ಎದುರು ನೋಡುವಂತಾಗಿದೆ.