ETV Bharat / state

ಭಜ್ಜಿ - ಚುರುಮರಿಗಿಲ್ಲ ಉಳ್ಳಾಗಡ್ಡಿ.. ಅದರ ಬದಲು ಕ್ಯಾಬೇಜ್​ ಪೀಸು ನೀಡುವ ಹೋಟೆಲ್ ಮಾಲೀಕರು.. - ಚಿಕ್ಕೋಡಿಯಲ್ಲಿ ಈರುಳ್ಳಿ ಸಮಸ್ಯೆ

ಈರುಳ್ಳಿ ಬೆಲೆ ನೂರರ ಗಡಿ ದಾಟಿ ಹೋಟೆಲ್​, ದಾಬಾ ಮಾಲೀಕರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಬರುವ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಈರುಳ್ಳಿ ಸಮಸ್ಯೆ
union problem in chikkodi
author img

By

Published : Dec 20, 2019, 11:21 PM IST

ಚಿಕ್ಕೋಡಿ: ಈರುಳ್ಳಿ ಬೆಲೆ ನೂರರ ಗಡಿ ದಾಟಿ ಹೋಟೆಲ್​,ದಾಬಾ ಮಾಲೀಕರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಬರುವ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡಕ್ಕಿ, ಭಜ್ಜಿಯೊಳಗೆ ಈರುಳ್ಳಿ ಹುಡುಕಿದ್ರೂ ಸಿಕ್ಕೋದಿಲ್ಲ..

ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಪ್ರತಿ ಹಳ್ಳಿಗಳ ಹೋಟೆಲ್​ಗಳಲ್ಲಿ ಭಜ್ಜಿ ಹಾಗೂ ಖಾರದ ಭಡಂಗ್ (ಚುರುಮರಿ) ಖಾದ್ಯ ಫೇಮಸ್. ಈ ಖಾದ್ಯ ತಿನ್ನುವಾಗ ಉಳ್ಳಾಗಡ್ಡಿ ಬೇಕೇಬೇಕು.ಆದರೆ, ಏಕಾಏಕಿ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಹೋಟೆಲ್​ಗಳಲ್ಲಿ ಭಜ್ಜಿ, ಚುರುಮರಿಗಳಲ್ಲಿ ಈರುಳ್ಳಿ ಬದಲಾಗಿ ಕ್ಯಾಬೇಜ್ ಪೀಸ್​ ಕೊಡುತ್ತಿದ್ದಾರೆ. ಇದು ಗ್ರಾಹಕರಿಗೆ ತೆಲೆನೋವಾಗಿದೆ. ಮೊದಲಿನಿಂದಲೂ ಭಜ್ಜಿ, ಭಡಂಗ ಜೊತೆ ಉಳ್ಳಾಗಡ್ಡಿ ತಿನ್ನುವಂತವರಿಗೆ ಈಗ ಸೌತೆಕಾಯಿ, ಕ್ಯಾಬೇಜ್ ತಿನ್ನಲ್ಲು ಆಗದೆ ಮಾಲೀಕರ ಜತೆ ವಾಗ್ವಾದಕ್ಕಿಳಿಯುತ್ತಿದ್ದಾರೆ.

ದರ ಹೆಚ್ಚಾಗಲು ಕಾರಣ : ಈರುಳ್ಳಿ ಬೆಳೆಯನ್ನು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಣ ಭೂಮಿಯಲ್ಲಿ ಮತ್ತು ಕಬ್ಬಿನ ಸಾಲಿನಲ್ಲಿ 2ನೇ ವಾಣಿಜ್ಯ ಬೆಳೆಯಾಗಿ ಹೆಚ್ಚಾಗಿ ಬೆಳೆಯುವುದು ಸಾಮಾನ್ಯ. ಆದರೆ, ಈ ವರ್ಷ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿರೋದರಿಂದ ಹಾಗೂ ಅತಿ ಮಳೆಯಿಂದಾಗಿ ನದಿಗೆ ಪ್ರವಾಹದಿಂದ ಲಕ್ಷಾಂತರ ಎಕರೆ ಈರುಳ್ಳಿ ನೀರಿನಿಂದ ಜಲಾವೃತಗೊಂಡಿದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಈರುಳ್ಳಿ ಬೆಲೆ ಅತಿ ಏರಿಕೆಯಾಗಿದೆ. ಆದರೆ, ಈ ಬಾರಿ ಉತ್ತರ ಕರ್ನಾಟಕದಲ್ಲಿ ಬೆಳೆದ ಈರುಳ್ಳಿ ಬೆಲೆ ಹಾಳಾಗಿದ್ದರಿಂದ ಈ ಭಾಗದ ಯಾವ ರೈತನಿಗೂ ಕೂಡಾ ಈರುಳ್ಳಿ ಬೆಳೆ ಕೈಗೆ ಬಂದಿಲ್ಲ.ಪ್ರತಿ ವರ್ಷ ನೂರಾರು ಕ್ವಿಂಟಲ್​ಗಳಷ್ಟು ಬೆಳೆಯುತಿದ್ದ ರೈತನಿಗೆ ಈ ಬಾರಿ ಈರುಳ್ಳಿ ಬೆಳೆ ಹಾಳಾಗಿ ಕಂಗಾಲಾಗುವಂತಾಗಿದೆ.

Intro:ಭಜಿ-ಭಢಂಗಕ್ಕಿಲ್ಲ ಉಳ್ಳಾಗಡ್ಡಿ...! ಅದರ ಬದಲಾಗಿ ಕೋಬಿಜ್ ಪೀಸುಗಳನ್ನು ನೀಡುತ್ತಿರುವ ಹೋಟೆಲ್ ಮಾಲೀಕರು Body:

ಚಿಕ್ಕೋಡಿ :
ಸ್ಟೋರಿ

ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ‌ ಹೆಚ್ಚಿಗೆ ಆಗುತ್ತಿರುವುದರಿಂದ ಹೋಟೇಲ್, ಧಾಭಾ ಮಾಲೀಕರು ಕಂಗಾಲಾಗಿದ್ದಾರೆ. ಈರುಳ್ಳಿ ಬೆಲೆ ನೂರರ ಗಡಿ ದಾಟಿ ಕಣ್ಣೀರು ತರಿಸಿದೆ. ಹೋಟೆಲ್, ಧಾಭಾ, ಖಾನಾವಳಿಗಳಲ್ಲಿ ಗ್ರಾಹಕರಿಗೆ ಈರುಳ್ಳಿ ನೀಡಲು ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರ್ನಾಟಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಪ್ರತಿಯೊಂದು ಹಳ್ಳಿಗಳ ಹೋಟೆಲಗಳಲ್ಲಿ ಭಜಿ ಹಾಗೂ ಖಾರವಾದ ಭಢಂಗ್ ಫೇಮಸ್. ಇಂಥ ಖಾದ್ಯ ತಿನ್ನುವಾಗ ಉಳ್ಳಾಗಡ್ಡಿ ಬೇಕೆ ಬೇಕು. ಆದರೆ, ಏಕಾಏಕಿ ಬೆಲೆ ಏರಿಕೆಯಿಂದಾಗಿ ಹೋಟೆಲಗಳಲ್ಲಿ ಭಜಿ ಭಂಢಂಗಳಲ್ಲಿ ಈರುಳ್ಳಿ ಬದಲಾಗಿ ಕೋಬಿಜ್ ಪೀಸುಗಳನ್ನು ಕೊಡುತ್ತಿದ್ದು, ಇದು ಗ್ರಾಹಕರಿಗೆ ತೆಲೆನೋವಾಗಿದೆ. ಮೊದಲಿನಿಂದಲ್ಲೂ ಭಜಿ, ಭಡಂಗ ಜೊತೆ ಉಳ್ಳಾಗಡ್ಡಿಯನ್ನು ತಿನ್ನುವಂತ ಜನರಿಗೆ ಈಗ ಸೌತೆಕಾಯಿ, ಕೊಬಿಜ್ ತಿನ್ನಲ್ಲು ಆಗೂತಿಲ್ಲ ಈಗ ಗ್ರಾಹಕರು, ಮಾಲೀಕರ ಜೊತೆ ವಾಗ್ವಾದಕ್ಕೆ ಇಳದಿದ್ದಾರೆ.

ಉತ್ತರ ಕರ್ನಾಟಕ ಹಾಗೂ ಪಶ್ವಿಮ ಮಹಾರಾಷ್ಟ್ರದಲ್ಲಿ ಈರುಳ್ಳಿಗೆ ಈ ಭಾಗದಲ್ಲಿ ಉಳ್ಳಾಗಡ್ಡಿ(ಕಾಂದಾ) ಎಂದು ಜನಪ್ರಿಯತೆ ಹೊಂದಿದೆ. ಊಟ, ಉಪಹಾರಗಳಲ್ಲಿ ಈರುಳಿಯನ್ನು ಯಥೇಚ್ಚವಾಗಿ ಬಳಸುತ್ತಾರೆ. ಆದರೀಗ ವಿಚಾರ ಮಾಡುವಂತಾಗಿದೆ. ಒಮ್ಮೇಲೆ ಭಾರಿ ಪ್ರಮಾಣದ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು ಹಿಂಗಾದ್ರ ಹ್ಯಾಂಗ್. ಬಾಳ ತ್ರಾಸ್ ಆಗತೈತಿ. ಉಳ್ಳಗಡ್ಡಿ ಒಂದು ಕೆಜಿಗೆ 90 ರಿಂದ 110 ರೂ ಕೊಡುದಾದ್ರ ರೊಕ್ಕಾ ಎಲ್ಲಿಂದ ತರೂದ, ಎಂದು ಜನ ಗೊಣಗುವಂತಾಗಿದೆ.

ಉಳ್ಳಾಗಡ್ಡಿ ಇಲ್ಲಾರೀ..:

ಮಿರ್ಚಿ, ಮಂಡಕ್ಕಿಯ ಖೋಕಾಗಳಲ್ಲಿ ಬಿಳಿಜೋಳ ರೊಟ್ಟಿಯ ಖಾನಾವಳಿಗಳಲ್ಲಿ, ಸವಿಯಲು ಉಳ್ಳಾಗಡ್ಡಿ ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ. ಜವಾರಿ ಊಟಕ್ಕೆ ಈರುಳ್ಳಿ ಬೇಕೇ ಬೇಕು. ಆದ್ದರಿಂದ ಆದರೀಗ ಹೋಟೆಲ್, ಧಾಭಾಗಳಲ್ಲಿ ಏ ವೇಟರ್ ಉಳ್ಳಾಗಡ್ಡಿ(ಕಾಂದಾ) ತುಗೊಂದ ಬಾರೋ ಎಂದು ಗ್ರಾಹಕರು ಕೇಳಿದರೆ ಇತ್ತ ನೋ ರಿಪ್ಲಾಯ್. ಗ್ರಾಹಕರು ಪದೇ ಪದೇ ಕೇಳಿದರೆ ಒಂದೇರಡು ಪೀಸು ನೀಡಿ ಕೈತೊಳೆದುಕೊಳ್ಳುತ್ತಿರುವುದೀಗ ಸಾಮಾನ್ಯವಾಗಿದೆ. ಈರುಳ್ಳಿ ಬದಲಿಗೆ ಸವತೆಕಾಯಿ, ಗಜ್ಜರಿ, ಟೊಮ್ಯಾಟೊ ಹಾಗೂ ಕೋಬಿಜ್ ಮತ್ತಿತರ ತರಕಾರಿ ಹೋಟೆಲುಗಳಲ್ಲಿ ಬಳಸುತ್ತಿದ್ದಾರೆ.

ಈರುಳ್ಳಿ ದರ ಹೆಚ್ಚಾಗಲೂ ಕಾರಣ :

ಈರುಳ್ಳಿ ಬೆಳೆಯನ್ನು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಒಣ ಭೂಮಿಯಲ್ಲಿ ಮತ್ತು ಕಬ್ಬಿನ ಸಾಲಿನಲ್ಲಿ ಎರಡನೇಯ ವಾಣಿಜ್ಯ ಬೆಳೆಯಾಗಿ ಹೆಚ್ಚಾಗಿ ಬೆಳೆಯುವುದು ರೈತರ ವಾಡಿಕೆ. ಆದರೆ, ಈ ವರ್ಷ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ಹಾಗೂ
ಅತಿಯಾದ ಮಳೆಯಿಂದಾಗಿ ನದಿಗೆ ಪ್ರವಾಹ ಬಂದು ಬೆಳೆದು ನಿಂತ ಲಕ್ಷಾಂತರ ಎಕ್ಕರ ಭೂಮಿಯಲ್ಲಿಯ ಈರುಳ್ಳಿ ನೀರಿನಿಂದ ಜಲಾವೃತಗೊಂಡು ನಾಶವಾಗಿ ಹೊಗಿದ್ದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಲೆ ಅತಿಯಾಗಿ ಏರಿಕೆಯಾಗಿದೆ. ಆದರೆ, ಈ ಬಾರಿ ಉತ್ತರ ಕರ್ನಾಟಕದಲ್ಲಿ ಬೆಳೆದ ಈರುಳ್ಳಿ ಬೆಲೆ ಹಾಳಾಗಿದ್ದರಿಂದ ಈ ಭಾಗದ ಯಾವ ರೈತನಿಗೂ ಕೂಡಾ ಈರುಳ್ಳಿ ಹೆಚ್ಚಿನ ಬೆಲೆ ಸಿಗದೆ ಅವರಿಗೆ ಈ ಬಾರಿ ನಿರಾಸೆಯಾಗಿದಂತೂ ಸತ್ಯ. ಪ್ರತಿ ವರ್ಷ ನೂರಾರು ಕ್ವಂಟಲ್ ಗಳಷ್ಟು ಬೆಳೆಯುತಿದ್ದ ರೈತನಿಗೆ ಈ ಬಾರಿ ಈರುಳ್ಳಿ ಬೆಳೆ ಹಾಳಾಗಿದ್ದರಿಂದ ಈ ಬಾರಿ ಬೆಳೆದರೂ ಕೈ ಸಿಗದೆ ಹೋಗಿದ್ದು ಈ ಬಾರಿ ಉ.ಕ ರೈತರು ಕಂಗಾಲಾಗಿದ್ದಾರೆ.

 Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.