ETV Bharat / state

ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್‍ಮೇಲ್: ಇಬ್ಬರು ನಕಲಿ ಪತ್ರಕರ್ತರ ಬಂಧನ

ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಇಬ್ಬರು ನಕಲಿ ಪತ್ರಕರ್ತರು ಪೊಲೀಸರ ಅತಿಥಿಯಾಗಿದ್ದಾರೆ.

Honey trap case, ಹನಿಟ್ರ್ಯಾಪ್ ಪ್ರಕರಣ
author img

By

Published : Nov 11, 2019, 9:15 PM IST

ಗೋಕಾಕ: ಹನಿಟ್ರ್ಯಾಪ್ ಹೆಸರಿನಲ್ಲಿ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ.

ಇಲ್ಲಿಯ ಆದಿಜಾಂಬವ ನಗರದ ನಿವಾಸಿ ರವಿ ಕಡಕೋಳ ಹಾಗೂ ಸಂಗಮ ನಗರದ ಸತೀಶ್​ ಹರಿಜನ ಬಂಧಿತರು. ಕೆಲ ದಿನಗಳ ಹಿಂದೆ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದರು.

ಯರಗಟ್ಟಿ ಗ್ರಾಮದ ರಮೇಶ್​ ಮಹಾದೇವ ಕಟ್ಟಿಮನಿ ಎಂಬವರಿಂದ ನಕಲಿ ಪತ್ರಕರ್ತರಿಬ್ಬರು ಪ್ರಕರಣದ ಆರೋಪಿ ಶಿಂಗಳಾಪೂರ ಗ್ರಾಮದ ಲಕ್ಷ್ಮಿ ಹೆಸರು ಹೇಳಿ ಹಣ ದೋಚಲು ಪ್ರಯತ್ನಪಟ್ಟಿದ್ದರು. ಈ ಕುರಿತು ದೂರು ನೀಡಿರುವ ರಮೇಶ್, ಪ್ರಕರಣದಿಂದ ನನ್ನ ಹೆಸರು ತೆಗೆಸುವುದಾಗಿ ಹೇಳಿ ₹ 3 ಲಕ್ಷ ನೀಡುವಂತೆ ನಕಲಿ ಪತ್ರಕರ್ತರು ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಬಂಧಿತರಿಂದ 2 ಮೋಟಾರ ಸೈಕಲ್, 2 ಮೊಬೈಲ್​ ಹಾಗೂ 4 ನಕಲಿ ಪತ್ರಕರ್ತರ ಗುರುತಿನ ಚೀಟಿಗಳನ್ನು ವಶಪಡಿಕೊಂಡಿದ್ದಾರೆ.

Intro:ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್‍ಮೇಲ್ : ಇಬ್ಬರು ನಕಲಿ ಪತ್ರಕರ್ತರ ಬಂಧನBody:ಗೋಕಾಕ: ಹನಿಟ್ರ್ಯಾಪ್ ಹೆಸರಿನ್ನಲ್ಲಿ ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಇಬ್ಬರು ನಕಲಿ ಪತ್ರಕರ್ತರನ್ನು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ. ಇಲ್ಲಿಯ ಆದಿಜಾಂಬವ ನಗರದ ನಿವಾಸಿ ರವಿ ಕಡಕೋಳ ಹಾಗೂ ಸಂಗಮ ನಗರದ ಸತೀಶ ಹರಿಜನ ಎಂಬ ಬಂಧಿತ ಆರೋಪಿಗಳು.

ಇತ್ತೀಚೆಗೆ ನಗರದಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಓರ್ವ ಮಹಿಳೆ ಸಮೇತ ಏಳು ಜನರ ತಂಡವನ್ನು ಪೋಲೀಸರು ಬಂಧಿಸಿದ್ದರು. ಈ ಪ್ರಕರಣದ ಉಪಯೋಗ ಮಾಡಿಕೊಂಡು ಯರಗಟ್ಟಿ ಗ್ರಾಮದ ರಮೇಶ ಮಹಾದೇವ ಕಟ್ಟಿಮನಿ ಎಂಬುವನಿಗೆ ಉಭಯ ನಕಲಿ ಪತ್ರಕರ್ತರು ಹನಿಟ್ರ್ಯಾಪ್ ಪ್ರಕರಣ ಆರೋಪಿ ಶಿಂಗಳಾಪೂರ ಗ್ರಾಮದ ಲಕ್ಷ್ಮೀ ಉರ್ಫ ಸರಸ್ವತಿ ಕೋಂ ವಿಜಯ ಚಿಗಡೊಳ್ಳಿ ಇವಳು ಆತನ ಹೆಸರು ಹೇಳಿದ್ದಾಳೆ. ಅದಕ್ಕಾಗಿ  ಆತನ ಹೆಸರನ್ನು ತೆಗೆಸಲು ಡಿವೈಎಸ್‍ಪಿ, ಸಿಪಿಐ, ಹಾಗೂ ಪಿಎಸ್‍ಐ ಸಾಹೇಬರಿಗೆ 3 ಲಕ್ಷ ರೂ.ಗಳನ್ನು ನೀಡಬೇಕೆಂದು ಎಂದು ರವಿ ಕಡಕೋಳ ಮತ್ತು ಸತೀಶ ಹರಿಜನ ಬೇಡಿಕೆ ಇಟ್ಟಿದ್ದಾರೆಂದು ರಮೇಶ ಕಟ್ಟಿಮನಿ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದನು. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೋಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಂದ 2 ಮೋಟಾರ ಸೈಕಲ್, 2 ಮೋಬಾಯಿಲ್ ಹಾಗೂ 4 ನಕಲಿ ಪತ್ರಕರ್ತರ ಗುರುತಿನ ಚೀಟಿಗಳನ್ನು ವಶಪಡಿಕೊಳ್ಳಲಾಗಿದೆ.

ಇದೇ ತರನಾಗಿ ಇನ್ನೂ ಹಲವಾರು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆಂದು ಪೋಲೀಸ ಮೂಲಗಳು ತಿಳಿಸಿವೆ. ಈ ಕುರಿತು ಗೋಕಾಕ ಶಹರ ಠಾಣೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

KN_GKK_HONEYTRAP_NEWS_PHOTO_KAC10009.
Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.