ETV Bharat / state

ಮಳೆಯ ಆರ್ಭಟಕ್ಕೆ ಧರೆಗುರುಳಿದ ಮನೆಗಳು, ಕುಸಿಯುತ್ತಿದೆ ಗುಡ್ಡ! - belgavi rain news

ಬೆಳಗಾವಿಯಲ್ಲಿ ನಿಲ್ಲದ ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳುತ್ತಿವೆ. ನಗರದ ಕೆಲವು ಪ್ರದೇಶಗಳು ಈಗಾಗಲೇ ನೀರಿನಲ್ಲಿ ಮುಳುಗಿದ್ದು, ಸಿಲುಕಿ ಹಾಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದೆ.

ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳಿರುವುದು
author img

By

Published : Aug 7, 2019, 1:27 PM IST

ಬೆಳಗಾವಿ: ಮಹಾಮಳೆ ಮುಂದುವರೆದಿದ್ದು, ಕರ್ನಾಟಕ‌, ಗೋವಾ ಗಡಿಯಲ್ಲಿ ಭಾರಿ‌ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದೆ. ಕಳೆದ ಒಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Homes are falling for rain
ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳಿರುವುದು

ಚೋರ್ಲಾ ಘಾಟ್​​ನಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಗೋವಾ, ಬೆಳಗಾವಿ ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ವಾಹನ ಸವಾರರು ರಸ್ತೆ ಮಧ್ಯೆ ಸಿಲುಕಿದ್ದಾರೆ.

ಜಲಾವೃತವಾಗುತ್ತಿವೆ ನಗರಗಳು: ಒಂದೇ ದಿನಕ್ಕೆ 25 ಮನೆಗಳು ಜಲಾವೃತವಾಗಿವೆ. ಬೆಳಗಾವಿಯಲ್ಲಿ ಮುಂದುವರೆದ ಮಳೆಗೆ ನಗರದ ಅನೇಕ ಸ್ಥಳಗಳು ನೀರಲ್ಲಿ ಮುಳುಗುತ್ತಿವೆ. ಇಲ್ಲಿನ ಓಂನಗರ, ಸಮರ್ಥನಗರ, ಟೀಳಕವಾಡಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮನೆಗಳು ಕುಸಿದಿವೆ.

Intro:ಮಳೆಯ ಆರ್ಭಟಕ್ಕೆ ಕುಸಿಯುತ್ತಿರುವ ಗುಡ್ಡಗಳು : ಬೆಳಗಾವಿಯಲ್ಲಿ ನೆಲಕ್ಕೆ ಉರುಳಿದ ಮನೆಗಳು

ಬೆಳಗಾವಿ : ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಕರ್ನಾಟಕ‌ ಗೋವಾ ಗಡಿಯಲ್ಲಿ ಭಾರಿ‌ ಪ್ರಮಾಣದಲ್ಲಿ ಗುಡ್ಡ ಕುಸಿತವಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಈ ಅವಾಂತರ ಸೃಷ್ಟಿಯಾಗಿದೆ.

Body:ಚೋರ್ಲಾ ಘಾಟ್ ನಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೋವಾ ಬೆಳಗಾವಿ ರಸ್ತೆ ಸಂಪರ್ಕ ಕಡಿತವಾಗಿದ್ದು ಗುಡ್ಡ ಕುಸಿತದಿಂದ ಲಾರಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಜೊತೆಗೆ ರಸ್ತೆಯಲ್ಲಿ ಅನೇಕ ವಾಹನಗಳು ಸಿಲುಕಿದ್ದು ಸವಾರರು ಪರದಾಡುತ್ತಿದ್ದಾರೆ.

Conclusion:ಇನ್ನೂ ಬೆಳಗಾವಿಯಲ್ಲಿ ಮಳೆರಾಯನ ಆರ್ಭಟ ಮುಂದುವರಡದಿದ್ದು ನಗರದ ಅನೇಕ ಸ್ಥಳಗಳು ಜಲಾವೃತವಾಗಿವೆ. ತಾಲೂಕಿನಲ್ಲಿ ಒಂದೇ ದಿನಕ್ಕೆ 25 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು ಜನರು ಪರದಾಡುವಂತಾಗಿದೆ. ಓಂನಗರ, ಸಮರ್ಥನಗರ, ಟೀಳಕವಾಡಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮನೆಗಳು ಕುಸಿದಿವೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.