ಬೆಳಗಾವಿ: ನಗರದ ಮನೆಗಳಿಗೆ ಕನ್ನ ಹಾಕುತ್ತಿದ್ದ 17 ವರ್ಷದ ಬಾಲಕ ಸೇರಿ ಮೂವರು ಕಳ್ಳರನ್ನು ಮಾಳಮಾರುತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿ.ಕೆ.ಕಂಗ್ರಾಳಿಯ ಸಂತಾಜಿಗಲ್ಲಿ ನಿವಾಸಿ ಸಂತೋಷ ಸುರೇಶ ಪಮ್ಮಾರ (20), ರುಕ್ಮಿಣಿ ನಗರದ ಸಂತೋಷ ವಸಂತ ಪಮ್ಮಾರ (19) ಹಾಗೂ 17 ವರ್ಷದ ಬಾಲಕ ಬಂಧಿತರು.
ಆರೋಪಿಗಳಿಂದ 2.64 ಲಕ್ಷ ರೂ. ಮೌಲ್ಯದ ಕಳುವಿನ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 1.16 ಲಕ್ಷ ರೂ. ಮೌಲ್ಯದ 54 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ, ಬೈಕ್, 1.20 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್, ಕ್ಯಾಮೆರಾ, ಕೀ ಬೋರ್ಡ್, ಪೆನ್ಡ್ರೈವ್, ಸಿಪಿಯು, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾನಗರದ ಸಹ್ಯಾದ್ರಿನಗರ, ಬಿ.ಕೆ.ಕಂಗ್ರಾಳಿ, ಹೊನಗಾ, ರಾಮತೀರ್ಥನಗರ, ಮಹಾಂತೇಶ ನಗರ, ಮುತಗಾ, ಗೋಕುಲ ನಗರಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ.
ಮಾಳಮಾರುತಿ ಠಾಣೆಯ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.