ETV Bharat / state

ನೆರೆಯಲ್ಲೂ ಭಾವೈಕ್ಯತೆ ಮೆರೆದು ಮೊಹರಂ ಹಬ್ಬ ಆಚರಿಸಿದ ಹಿಂದೂ-ಮುಸ್ಲಿಂ ಭಕ್ತರು - ಬೆಂಕಿ ಎರಚಿ

ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಒಂದೊಂದು ಗ್ರಾಮದಲ್ಲಿ ಭಕ್ತಾದಿಗಳು ಕೆಂಡದ ಓಕುಳಿ ಆಡುವ ಮೂಲಕ ಮೊಹರಂ ಆಚರಣೆ ಮಾಡುತ್ತಾರೆ. ಕೆಲವರು ಬಾರುಕೋಲು  ಮೂಲಕ‌ ಬಡಿದುಕೊಂಡು ಭಕ್ತಿಯನ್ನು‌ ಸಮರ್ಪಣೆ ಮಾಡುವ ದೃಶ್ಯ ಚಿಕ್ಕೋಡಿಯಲ್ಲಿ ಕಂಡುಬಂದಿದೆ.

ನೆರೆಯಲ್ಲೂ ಭಾವೈಕ್ಯತೆ ಮೆರೆದೂ ಮೊಹರಂ ಹಬ್ಬ ಆಚರಿಸಿದ ಹಿಂದೂ ಮುಸ್ಲಿಂ ಭಕ್ತರು
author img

By

Published : Sep 11, 2019, 3:45 AM IST

ಚಿಕ್ಕೋಡಿ : ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಕೆಲವು ಗ್ರಾಮದಲ್ಲಿ ಭಕ್ತಾದಿಗಳು ಕೆಂಡದ ಓಕುಳಿ ಆಡುವ ಮೂಲಕ ಮೊಹರಂ ಆಚರಣೆ ಮಾಡುತ್ತಾರೆ. ಕೆಲವರು ಬಾರುಗೋಲಿನಿಂದ ಬಡಿದುಕೊಂಡು ಭಕ್ತಿಯನ್ನು‌ ಸಮರ್ಪಣೆ ಮಾಡುವ ದೃಶ್ಯ ಜಿಲ್ಲೆಯಲ್ಲಿ ಕಂಡುಬಂದಿದೆ.

ಇನ್ನು ಕೆಲವರು ಕೆಂಡದ ಮೇಲೆ ನಡೆದುಕೊಂಡು ಲಾಲಸಾಬನಿಗೆ ಭಕ್ತಿಯಿಂದ ತಮ್ಮಇಷ್ಟಾರ್ಥಗಳು ಈಡೇರಿಸುವಂತೆ ಹಿಂದೂ ಭಕ್ತರು ಬೇಡಿಕೊಳ್ಳುವುದು ಈ ಮೊಹರಂ ಹಬ್ಬ ವಿಶೇಷ.

ನೆರೆಯಲ್ಲೂ ಭಾವೈಕ್ಯತೆ ಮೆರೆದೂ ಮೊಹರಂ ಹಬ್ಬ ಆಚರಿಸಿದ ಹಿಂದೂ ಮುಸ್ಲಿಂ ಭಕ್ತರು
ಊರ ತುಂಬಾ‌ ಮೆರವಣಿಗೆ ಮಾಡಿ ಹಿರಿಯರಿಂದ ಕಿರಿಯರವರೆಗೆ ಲಾಲಸಾಬ ಕೀ ದೋಸ್ತ್ರೋ ದಿನ್, ಭೋಲಾರಯಮೋ ಧೂಲಾ ಎಂದು ಜೈಕಾರ ಹಾಕುತ್ತಾ ಕೈಯಲ್ಲಿ ಹಸಿರು ನಿಶಾನೆ ಹಿಡಿದುಕೊಂಡು ಹಲಗೆ ಬಾರಿಸುತ್ತಾ, ವಿವಿಧ ವಾದ್ಯಗಳೊಂದಿಗೆ ಲಾಲಸಾಬ ದೇವರಿಗೆ ಬೇಡಿಕೊಂಡು ಇಷ್ಟಾರ್ಥ ಸಿದ್ದಿಯಾದರೆ ಹರಕೆ ತೀರಿಸುತ್ತಾರೆ.

ಲಾಲಸಾಬನಿಗೆ ಸಾಯಂಕಾಲದಿಂದ ರಾತ್ರಿಯ ತನಕ ನೈವೇದ್ಯ ಮಾಡಲಾಗುತ್ತದೆ, ರಾತ್ರಿ 10 ಗಂಟೆಯ ಸುಮಾರಿಗೆ ರೋಜಾ ಮಾಡಿದ ಹಿಂದೂ ಭಕ್ತಾದಿಗಳು ಕೆಂಡದಲ್ಲಿ ತಯಾರಿಸಿದ ಬೆಂಕಿಯನ್ನ ಸುತ್ತು ಹಾಕಿ ಲಾಲಸಾಬ ಕೀ ದೋಸ್ತ್ರೋ ದಿನ್, ಭೋಲಾರಯಮೋ ಧೂಲಾ ಎಂದು ಜೈಕಾರ ಹಾಕುತ್ತಾ ಮೈ ಮೇಲೆ ಕೆಂಡ ಎರಚಿಕೊಳ್ಳುತ್ತಾರೆ. ನಂತರ ಈ ಬೆಂಕಿ ಎರಚಿಕೊಳ್ಳುವ ಕಾರ್ಯಕ್ರಮ ಮುಗಿದ ನಂತರ ರೋಜಾ ಮುಕ್ತಾಯವಾಗಿ ಮುಂಜಾನೆಯಿಂದ ರಾತ್ರಿಯವರೆಗೂ ಇದ್ದ ಉಪವಾಸ (ರೋಜಾ) ಮುಕ್ತಾಯವಾಗುತ್ತದೆ.

Intro:ನೆರೆಯಲ್ಲೂ ಭಾವೈಕ್ಯತೆ ಮೆರೆದೂ ಮೊಹರಂ ಹಬ್ಬ ಆಚರಿಸಿದ ಹಿಂದೂ ಮುಸ್ಲಿಂ ಭಕ್ತರು Body:

ಚಿಕ್ಕೋಡಿ :
ಪ್ಯಾಕೇಜ್

ಮೊಹರಂ ಹಬ್ಬವನ್ನು ಒಂದೊಂದು ಭಾಗದಲ್ಲಿ ಒಂದೊಂದು ಥರ ಈ ದಿನವನ್ನು ಆಚರಿಸುತ್ತಾರೆ. ಇದನ್ನು ಮುಸ್ಲಿಂರ ದುಃಖದ ಹಬ್ಬ ಎಂದು ಕರಿತಾರೆ. ಒಂದಂದೂ ಗ್ರಾಮದಲ್ಲಿ ಭಕ್ತಾದಿಗಳು ಕೆಂಡದ ಓಕುಳಿ ಆಡುವ ಮೂಲಕ ಮೊಹರಂ ಆಚರಣೆ ಮಾಡುತ್ತಾರೆ. ಕೆಲವಾರು ಬಾರಕೊಲ‌ ಮೂಲಕ‌ ಬಡಿದುಕೊಂಡು ಭಕ್ತಿಯನ್ನು‌ ಸಮರ್ಪಣೆ ಮಾಡುತ್ತಾರೆ ಇನ್ನು ಕೆಲವರು ಕೆಂಡದ ಮೇಲೆ ನಡೆದುಕೊಂಡು ಲಾಲಸಾಬನಿಗೆ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ಮುಸ್ಲಿಂ ದೇವರಿಗೆ ಹಿಂದೂ ಭಕ್ತರು ಬೇಡಿಕೊಳ್ಳುವುದು ಈ ಮೊಹರಂ ಹಬ್ಬ ವಿಶೇಷ.

ಊರ ತುಂಬಾ‌ಮೆರವಣಿಗೆ ಮಾಡಿ ಹಿರಿಯರಿಂದ ಕಿರಿಯರವರೆಗೆ ಲಾಲಸಾಬ ಕೀ ದೋಸ್ತ್ರೋ ದಿನ್, ಭೋಲಾರಯಮೋ ಧೂಲಾ ಎಂದು ಜೈಕಾರ ಹಾಕುತ್ತಾ ಕೈಯಲ್ಲಿ ಹಸಿರು ನಿಶಾನೆ ಹಿಡಿದುಕೊಂಡು ಹಲಗೆ ಬಾರಿಸುತ್ತಾ, ವಿವಿಧ ವಾದ್ಯಗಳೊಂದಿಗೆ ಲಾಲಸಾಬ ದೇವರಿಗೆ ಬೇಡಿಕೊಂಡು ಇಷ್ಟಾರ್ಥ ಸಿದ್ದಿಯಾದರೆ ಹರಕೆ ತಿರಿಸಲು ವಿವಿಧ ವಾದ್ಯಗಳ ಮೂಲಕ ಲಾಲಸಾಬನಿಗೆ ಹರಕೆ ತಿರಿಸುತ್ತಾರೆ,

ಹಿಂದೂ ಹಾಗೂ ಮುಸ್ಲಿಂ ಭಾವೈಕ್ಯತೆಯ ಸೊಗಡಾಗಿದೆ, ಮೊಹರಂ ಹಬ್ಬ ತಮ್ಮ ಇಷ್ಟರ್ಥ ಸಿದ್ದಿಗಾಗಿ ಜನರು ಲಾಲಸಾಬನಿಗೆ ಮೊರೆ ಹೋಗುತ್ತಾರೆ, ತಮ್ಮ ಕಾರ್ಯ ಯಶಶ್ವಿಯಾದರೆ ತಮ್ಮ ಮಕ್ಕಳನ್ನ ಪಕೀರನನ್ನಾಗಿ ಮಾಡೊದು ಇದೊಂದು ವಿಶೇಷ.

ಲಾಲಸಾಬನಿಗೆ ಸಾಯಂಕಾಲದಿಂದ ರಾತ್ರಿಯ ತನಕ ನೈವದ್ಯ ನೀಡಲಾಗುತ್ತದೆ, ರಾತ್ರಿ 10 ಗಂಟೆಯ ಸುಮಾರಿಗೆ ರೋಜಾ ಮಾಡಿದ ಹಿಂದೂ ಭಕ್ತಾದಿಗಳು ಕೆಂಡದಲ್ಲಿ ತಯಾರಿಸಿದ ಬೆಂಕಿಯನ್ನ ಸುತ್ತು ಹಾಕಿ ಲಾಲಸಾಬ ಕೀ ದೋಸ್ತ್ರೋ ದಿನ್, ಭೋಲಾರಯಮೋ ಧೂಲಾ ಎಂದು ಜೈಕಾರ ಹಾಕುತ್ತಾ  ಮೈ ಮೇಲೆ ಬೆಂಕಿ ಎರಚಿಕೊಳ್ಳುತ್ತಾರೆ. ನಂತರ ಈ ಬೆಂಕಿ ಎರಚಿಕೊಳ್ಳು ಕಾರ್ಯಕ್ರಮ ಮುಗಿದ ನಂತರ ರೋಜಾ ಮುಕ್ತಾಯವಾಗಿ ಮುಂಜಾನೆಯಿಂದ ರಾತ್ರಿವರೆಗು ಇದ್ದ ಉಪವಾಸ (ರೋಜಾ) ಮುಕ್ತಾಯವಾಗುತ್ತದೆ.

ಇಲ್ಲಿಯ ಹಿರಿಯರು ಹೇಳುವ ಪ್ರಕಾರ ಲಾಲಸಾಬನಿಗೆ ಬೇಡಿಕೊಂಡು ಅದು ಇಷ್ಟಾರ್ಥ ಸಿದ್ದಿಯಾದರೆ ಆ ಹರಕೆ ತೀರುವವರೆಗೆ ಲಾಲಸಾಬ ಬೀಡುವುದಿಲ್ಲ ಅಂತಹ ಎಷ್ಟೋ ಘಟನೆಗಳನ್ನ ಇಲ್ಲಿಯ ಹಿರಿಯರು ನೆನಪಿಸುತ್ತಾರೆ.

ಮೊಹರಂ ಹಬ್ಬದ ಇತಿಹಾಸ :

ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್) ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ ತಮ್ಮ ಪ್ರಾಣಗಳನ್ನೇ ತೆತ್ತರು. ಅವರ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಕೆಲವರು ಮಾಸದ 9, 10 ಹಾಗೂ 11ನೇ ದಿನಗಳಲ್ಲಿ ಉಪವಾಸ ಕೈಗೊಳ್ಳುತ್ತಾರೆ. ಎಲ್ಲೆಡೆ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗುತ್ತದೆ. ಕುರಾನ್ ನಲ್ಲಿ ಹೇಳಲಾಗಿರುವ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡಾ ಒಂದಾಗಿದ್ದು, ತಿಂಗಳ ಕೊನೆದಿನವನ್ನು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ.

ಇನ್ನು ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಮೊಹರಂ ಪ್ರಯುಕ್ತ ಬೆಂಕಿಯೊಂದಿಗೆ ಯುವಕರು ಆಟವಾಡುತ್ತಾರೆ. ಬೆಂಕಿಯ ಕೆಂಡವನ್ನು ಹೂವಿನಂತೆ ಎರಚುತ್ತಾರೆ. ಇದು ಬೆಂಕಿ ಕೆಂಡಗಳ ಓಕುಳಿಯೇ ಎನ್ನಲಾಗುತ್ತದೆ. ತಾವು ದೇವರಲ್ಲಿ ಬೇಡಿಕೊಂಡು ಇಷ್ಟಾರ್ಥಗಳೆಲ್ಲ ಪೂರ್ಣವಾದವರು ಈ ಬೆಂಕಿ ಎರಚಾಟವನ್ನು ನಡೆಸುತ್ತಾರೆ. ಇನ್ನು ಭಕ್ತಾದಿಗಳು ಜೀವದ ಹಂಗು ತೊರೆದು ಬೆಂಕಿ ಹಾರಿಸುತ್ತಾರೆ ಇದು ಒಂದು ಮೊಹರಂ‌ ವಿಶೇಷತೆ ಎನ್ನುತ್ತಾರೆ ಸ್ಥಳೀಯರು.

ಬೈಟ್ 1 : ಶಮಸುದ್ದೀನಿ ಮಕಾಂದರ - ಮುಸ್ಲಿಂ ಧರ್ಮದ ಬಾಬಾ (ಪೂಜಾರಿ)

ಬೈಟ್ 2 : ಸಿದ್ರಾಮ ಹಳ್ಳೋಳ್ಳಿ - ಭಕ್ತರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.