ETV Bharat / state

ನೂರು ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಹಿಂಡಲಗಾ ಮಹಾಲಕ್ಷ್ಮಿ ಜಾತ್ರೆ

author img

By

Published : Mar 21, 2021, 5:59 PM IST

ಕಳೆದ ವರ್ಷ ಏಪ್ರಿಲ್ 28ರಂದು ಜಾತ್ರೆ ಮಾಡಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊರೊನಾ ಲಾಕ್‌ಡೌನ್ ಹಿನ್ನೆಲೆ ಜಾತ್ರೆ ಮಾಡಲು ಸಾಧ್ಯವಾಗಿರಲಿಲ್ಲ.

hindalaga-mahalakshmi-fair
ಹಿಂಡಲಗಾ ಮಹಾಲಕ್ಷ್ಮಿ ಜಾತ್ರೆ

ಬೆಳಗಾವಿ: ಕೊರೊನಾ ಎರಡನೇ ಅಲೆ ಆತಂಕದ ಮಧ್ಯೆಯೂ ಬೆಳಗಾವಿ ಹಿಂಡಲಗಾ ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರೆ ಅದ್ಧೂರಿಯಾಗಿ ನೆರವೇರಿತು.

ಹಿಂಡಲಗಾ ಮಹಾಲಕ್ಷ್ಮಿ ಜಾತ್ರೆ

ಓದಿ: ವೃದ್ಧೆಯ ಸರ ಎಗರಿಸಿದ ಕಳ್ಳರು: ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕೈಚಳಕ

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಗ್ರಾಮದೇವತೆ ಮಹಾಲಕ್ಷ್ಮಿ ಜಾತ್ರೆ ನೂರು ವರ್ಷಗಳ ಬಳಿಕ ನಡೆದಿದ್ದು, ಗ್ರಾಮವಲ್ಲದೇ ಇಡೀ ತಾಲೂಕಿನಲ್ಲಿಯೇ ಜಾತ್ರೆ ಸಂಭ್ರಮ ಮನೆ ಮಾಡಿತ್ತು. ಹಿಂಡಲಗಾ ಗ್ರಾಮದ ಮಹಾಲಕ್ಷ್ಮಿ ಜಾತ್ರೆ ನೂರು ವರ್ಷಗಳ ಹಿಂದೆ ನಡೆದಿತ್ತಂತೆ. ನಂತರ ಗ್ರಾಮದೇವಿಯ ಜಾತ್ರೆಯೇ ನಡೆದಿರಲಿಲ್ಲ.

ಕಳೆದ ವರ್ಷ ಏಪ್ರಿಲ್ 28ರಂದು ಜಾತ್ರೆ ಮಾಡಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊರೊನಾ ಲಾಕ್‌ಡೌನ್ ಹಿನ್ನೆಲೆ ಜಾತ್ರೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಇಡೀ ಗ್ರಾಮಸ್ಥರು ಜಿಲ್ಲಾಡಳಿತದಿಂದ ಅನುಮತಿ ಪಡೆದಿಕೊಂಡು 9 ದಿನಗಳ ಕಾಲ ಜಾತ್ರೆಗೆ ಅನುಮತಿ ಕೇಳಿದ್ದರು. ಆದರೆ ಜಿಲ್ಲಾಡಳಿತ ಗ್ರಾಮಸ್ಥರಿಗೆ ಕೇವಲ ಐದು ದಿನಗಳ ಅನುಮತಿ ನೀಡಿತು. ಕಡೆಯ ದಿನವಾದ ಇಂದು ದೇವಿಗೆ ಉಡಿ ತುಂಬಿ ಸಂಭ್ರಮದಿಂದ ಜಾತ್ರೆ ಆಚರಿಸಿದರು.

ಮೊನ್ನೆ ನಡೆದ ರಥೋತ್ಸವ ಹಾಗೂ ದೇವಿಯ ಹೊನ್ನಾಟಕ್ಕೂ ಸಾವಿರಾರು ಜನರು ಸಾಕ್ಷಿಯಾಗಿದ್ದರು. ಕೊರೊನಾ ಎರಡನೇ ಅಲೆ ಭೀತಿಯ ನಡುವೆಯೂ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನೆರವೇರಿತು. ಇನ್ನು ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಇಂದು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಕೊಂಡರು.

ಹಿಂಡಲಗಾ ಗ್ರಾಮದ ಮಹಾಲಕ್ಷ್ಮಿ ದೇವಿಗೆ ತನ್ನದೇ ಆದ ಇತಿಹಾಸ ಇದ್ದು, ಮಹಾತಾಯಿಯ ದರ್ಶನ ಪಡೆದು ಏನೇ ಹರಿಕೆ ಹೊತ್ತುಕೊಂಡರೂ ಈಡೇರಲಿದೆ ಎಂಬುವುದು ಭಕ್ತರ ನಂಬಿಕೆ. ಹೀಗಾಗಿ ಐದು ದಿನದ ಜಾತ್ರೆಯಲ್ಲಿ 24 ಗಂಟೆಗಳ ಕಾಲವೂ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದುಕೊಂಡಿದ್ದಾರೆ. ಕೊರೊನಾ‌ ಎರಡನೇ ಅಲೆ ಭೀತಿ ಹಿನ್ನೆಲೆ ಮುಂಜಾಗ್ರತಾ ಕೈಗೊಳ್ಳಲು ಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ದೇವಿ ದರ್ಶನಕ್ಕೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿದ್ದರಾರೂ ಹಲವು ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರೋದು ಸಹ ಕಂಡು ಬಂತು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.