ಬೆಳಗಾವಿ: ಬೆಳಗಾವಿ ಜಿಲ್ಲೆಗೋಕಾಕ್ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಗೋಕಾಕ್ ಫಾಲ್ಸ್ ಬಳಿ 2ನೇ ಬಾರಿಗೆ ಗುಡ್ಡ ಕುಸಿತ ಸಂಭವಿಸಿದೆ.
ಬೆಳಗಾವಿ ಹಾಗೂ ಗೋಕಾಕ್ ಮಧ್ಯೆ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಗೋಕಾಕ್ ಫಾಲ್ಸ್ಗೆ ಹೊಂದಿಕೊಂಡಿರುವ ಗುಡ್ಡ ಕುಸಿಯುತ್ತಿದ್ದು ರಸ್ತೆ ಮೇಲೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿದೆ. ಪರಿಣಾಮ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನ ಸವಾರರು ಆತಂಕಗೊಂಡಿದ್ದಾರೆ. ಇಷ್ಟಲ್ಲದೆ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ.
ಗುಡ್ಡ ಕುಸಿದು ದೊಡ್ಡ ಕಲ್ಲುಗಳು ರಸ್ತೆ ಮೇಲೆ ಬಂದು ಬಿದ್ದಿರುವುದರಿಂದ ವಾಹನ ಸವಾರರು ಆತಂಕದಲ್ಲೇ ರಸ್ತೆಯ ಒಂದು ಭಾಗದಲ್ಲಿ ಸಂಚರಿಸುತ್ತಿದ್ದಾರೆ.
ಬೃಹತ್ ಬಂಡೆಗಳು ಗುಡ್ಡದ ಆಧಾರದ ಮೇಲೆ ನಿಂತಿದ್ದು, ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬಂಡೆಗಳು ಬೀಳಬಹುದು ಎಂದು ಅವುಗಳನ್ನು ಎನ್ಡಿಆರ್ಎಫ್ ತಂಡ ಬ್ಲಾಸ್ಟ್ ಮಾಡಲು ನಿರ್ಧರಿಸಿದೆ.