ETV Bharat / state

ಕೋವಿಡ್​ ಭೀತಿ: ಕಾಗವಾಡ​ ಗಡಿಯಲ್ಲಿ ಹೈ ಅಲರ್ಟ್ - High alert at belgavi border

ಚೆಕ್‍ ಪೋಸ್ಟ್​​ಗಳಲ್ಲಿ ಪೊಲೀಸರು ಮಹಾರಾಷ್ಟ್ರದಿಂದ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಕೋವಿಡ್​​​ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಕರ್ನಾಟಕ ಗಡಿ ಪ್ರವೇಶಿಸಲು ಅವಕಾಶ ನೀಡುತ್ತಿದ್ದು, ನೆಗೆಟಿವ್ ರಿಪೋರ್ಟ್ ಇಲ್ಲದಿದ್ದರೆ ವಾಪಸ್ ಕಳುಹಿಸಲಾಗುತ್ತಿದೆ.

High alert at Kagawada-Miraza border
ಕೋವಿಡ್​ ಭೀತಿ: ಕಾಗವಾಡ-ಮಿರಜ ಗಡಿಯಲ್ಲಿ ಹೈ ಅಲರ್ಟ್ಕೋವಿಡ್​ ಭೀತಿ: ಕಾಗವಾಡ-ಮಿರಜ ಗಡಿಯಲ್ಲಿ ಹೈ ಅಲರ್ಟ್
author img

By

Published : Feb 23, 2021, 7:08 PM IST

ಚಿಕ್ಕೋಡಿ: ಕೋವಿಡ್​ ಭೀತಿ ಹಿನ್ನೆಲೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಾಗವಾಡ - ಮಿರಜ್​​ ರಸ್ತೆ ಗಡಿಯಲ್ಲಿ ಚೆಕ್‍ ಪೋಸ್ಟ್ ನಿರ್ಮಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುತ್ತಿರುವ ಪ್ರತಿ ವಾಹನ ಹಾಗೂ ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಕಾಗವಾಡ - ಮಿರಜ್​ ಗಡಿಯಲ್ಲಿ ಹೈ ಅಲರ್ಟ್

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸಾವಿರಾರು ಜನರು ಆಗಮಿಸುವುದರಿಂದ ಕರ್ನಾಟಕ ಸರ್ಕಾರ ಕೆಲವೊಂದು ಗೈಡ್​​ಲೈನ್ಸ್ ಹೊರಡಿಸಿದೆ. ಆ ಪ್ರಕಾರ ಚೆಕ್‍ ಪೋಸ್ಟ್​​ಗಳಲ್ಲಿ ಪೊಲೀಸರು ಮಹಾರಾಷ್ಟ್ರದಿಂದ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಕೋವಿಡ್​​​ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಕರ್ನಾಟಕ ಗಡಿ ಪ್ರವೇಶಿಸಲು ಅವಕಾಶ ನೀಡುತ್ತಿದ್ದು, ನೆಗೆಟಿವ್ ರಿಪೋರ್ಟ್ ಇಲ್ಲದಿದ್ದರೆ ವಾಪಸ್ ಕಳುಹಿಸಲಾಗುತ್ತಿದೆ.

ಕರ್ನಾಟಕ - ಮಹಾರಾಷ್ಟ್ರ ಜನರ ವ್ಯಾಪಾರ ವಹಿವಾಟುಗಳು ದಿನಂಪ್ರತಿ ಈ ಮಾರ್ಗ ಮಧ್ಯೆಯೇ ನಡೆಯುವುದರಿಂದ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾದರೂ ಕೂಡ ರಾಜ್ಯಕ್ಕೆ ಮಹಾ ಕೊರೊನಾ ಬರದಂತೆ ತಡೆಗಟ್ಟುವುದು ಅನಿವಾರ್ಯವಾಗಿದೆ. ಒಂದು ವೇಳೆ, ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದರೆ ಇಲ್ಲಿನ ಜನರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಈಗಿನಿಂದಲೇ ಕಟ್ಟೆಚ್ಚರ ವಹಿಸಲಾಗಿದೆ.

ಅಭಯ: 2025ರ ವೇಳೆಗೆ ಭಾರತವನ್ನ ಕ್ಷಯರೋಗ ಮುಕ್ತ ಮಾಡುತ್ತೇವೆ: ಪ್ರಧಾನಿ ಮೋದಿ ಅಭಯ

ಕಾಗವಾಡ ತಾಲೂಕು ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಮಂಗಸೂಳಿ, ಕೆಂಪವಾಡ, ಲೋಕುರ ಗ್ರಾಮಗಳ ರಸ್ತೆಗಳಲ್ಲಿ ಯಾವುದೇ ರೀತಿಯ ತಪಾಸಣೆ ಇಲ್ಲದಿರುವುದರಿಂದ ಮಹಾರಾಷ್ಟ್ರಕ್ಕೆ ಹೋಗುವ ಹಾಗೂ ಬರುವ ಪ್ರಯಾಣಿಕರು ಈ ಮಾರ್ಗವನ್ನು ಬಳಸುತ್ತಿದ್ದು, ಕರ್ನಾಟಕ ಗಡಿ ಭಾಗದ ಜನರು ಇನ್ನಷ್ಟು ಆತಂಕ ಪಡುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.