ETV Bharat / state

ತಡೆಗೋಡೆಯಿಲ್ಲದೆ ಬಲಿಗಾಗಿ ಕಾದು ಕುಳಿತಿದೆ ಹೀರೆಹಳ್ಳ ಸೇತುವೆ.. - Road works

ಕಳೆದ ತಿಂಗಳು ಲೋಕೋಪಯೋಗಿ ಇಲಾಖೆಯಿಂದ ಕೋಹಳ್ಳಿಯಿಂದ ಐಗಳಿ ಕ್ರಾಸ್​​ವರೆಗೆ 8 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಹೀರೆಹಳ್ಳ ತಲುಪಲು ಸೇತುವೆ ಸಹಾಯದಿಂದ ದಾಟಬೇಕು, ಸೇತುವೆಗೆ ಅಕ್ಕಪಕ್ಕ ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ವಾಹನ ಸವಾರರು ಭಯದಲ್ಲೇ ಸಂಚಾರ ಮಾಡುವ ವಾತಾವರಣ ಸೃಷ್ಟಿಯಾಗಿದೆ.

Heerehalli bridge waiting for leads accident withour havint barrier In side
ತಡೆಗೋಡೆಯಿಲ್ಲದೆ ಬಲಿಗಾಗಿ ಕಾದು ಕುಳಿತಿದೆ ಕೋಹಳ್ಳಿ ಗ್ರಾಮದ ರಸ್ತೆ
author img

By

Published : Jun 6, 2020, 4:42 PM IST

ಅಥಣಿ (ಬೆಳಗಾವಿ) : ತಾಲೂಕಿನ ಐಗಳಿ ಕ್ರಾಸ್‌ನಿಂದ ಕೊಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಸಿದ್ದಿ ಪುರುಷ ಅಪ್ಪಯ್ಯ ಸ್ವಾಮೀಜಿಮಠ ಸಮೀಪದ ಹೀರೆಹಳ್ಳದ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸ್ವಲ್ಪ ಯಾಮಾರಿದರೆ ಹಳ್ಳಕ್ಕೆ ಬೀಳುವುದು ಖಚಿತವಾಗಿದೆ.

ಕಳೆದ ತಿಂಗಳು ಲೋಕೋಪಯೋಗಿ ಇಲಾಖೆಯಿಂದ ಕೋಹಳ್ಳಿಯಿಂದ ಐಗಳಿ ಕ್ರಾಸ್​​ವರೆಗೆ 8 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಹೀರೆಹಳ್ಳ ತಲುಪಲು ಸೇತುವೆ ಸಹಾಯದಿಂದ ದಾಟಬೇಕು, ಸೇತುವೆಗೆ ಅಕ್ಕಪಕ್ಕ ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ವಾಹನ ಸವಾರರು ಭಯದಲ್ಲೇ ಸಂಚಾರ ಮಾಡುವ ವಾತಾವರಣ ಸೃಷ್ಟಿಯಾಗಿದೆ.

ಸ್ಥಳೀಯರು ದರೇಪ್ಪ ಮೂತ್ತೂರ ಮಾತನಾಡಿ, ಈ ರಸ್ತೆ ಐಗಳಿ ಕ್ರಾಸ್​ನಿಂದ ಬರುವಾಗ ಇಳಿಜಾರಾದ ಕಾರಣ ವಾಹನ ವೇಗವಾಗಿ ಚಲಿಸುತ್ತದೆ. ಎದುರಿಗೆ ಒಮ್ಮೆಲೇ ತಿರುವು ಇರುವುದರಿಂದ ಹಾಗೂ ಅಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇರುವುದರಿಂದ ಹಠಾತ್ತನೆ ಎದುರಿಗೆ ವಾಹನ ಬರುವುದರಿಂದ ಚಾಲಕರು ಆತಂಕಕ್ಕೆ ಒಳಗಾಗಿ ಈ ಹಳ್ಳದಲ್ಲಿ ಬಿದ್ದಿರುವ ಎಷ್ಟೋ ನಿದರ್ಶನ ನಮ್ಮ ಮುಂದೆ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಈ ಸೇತುವೆಗೆ ತಡೆ ಗೋಡೆ ನಿರ್ಮಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.