ಬೆಳಗಾವಿ: ಕುಂದಾನಗರಿಯಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ಇಂದು ಮಧ್ಯಾಹ್ನ ನಗರದಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯುತ್ತಿದೆ.
ಎರಡು ದಿನಗಳ ಹಿಂದೆ ಕೂಡ ಬೆಳಗಾವಿ ಜಿಲ್ಲೆಯ ಕೆಲವೆಡೆ ಮಳೆಯಾಗಿತ್ತು. ಈ ನಡುವೆ ಒಂದು ದಿನ ವಿರಾಮ ಪಡೆದ ಮಳೆರಾಯ ಇಂದು ಮತ್ತೆ ಅಬ್ಬರಿಸಿದ್ದಾನೆ . ನಿನ್ನೆ ಹಾಗೂ ಇಂದು ವಿಪರೀತ ಬಿಸಿಲು ಇದ್ದು, ಬಿಸಿಲಿನ ಬೇಗೆಗೆ ಹೈರಾಣಾಗಿದ್ದ ಕುಂದಾನಗರಿ ನಿವಾಸಿಗಳಿಗೆ ಇಂದು ಸುರಿದ ಅಬ್ಬರದ ಮಳೆ ಖುಷಿ ನೀಡಿತು.