ETV Bharat / state

ಭಾರಿ ಮಳೆ: ರಾಜ್ಯದ ಗಡಿ ಭಾಗದಲ್ಲಿ ಬಿತ್ತನೆ ಕಾರ್ಯ ಆರಂಭ - etv bharat

ಕಳೆದ ಎರಡು ದಿನದಿಂದ ಭಾರಿ ಮಳೆ ಸುರಿಯುತ್ತಿದ್ದು, ರಾಜ್ಯದ ಗಡಿ ಭಾಗದಲ್ಲಿ ಬಿತ್ತನೆ ಕಾರ್ಯ ಚುರುಕಾಗಿದೆ.

ಚುರುಕುಗೊಂಡ ಬಿತ್ತನೆ ಕಾರ್ಯ
author img

By

Published : Jun 25, 2019, 9:52 PM IST

ಚಿಕ್ಕೋಡಿ: ವಾಡಿಕೆಯಂತೆ ಮುಂಗಾರು ಮಳೆ ಈ ಸಲ ಪ್ರಾರಂಭವಾಗದಿದ್ದರೂ ರಾಜ್ಯದ ಗಡಿ ಭಾಗದಲ್ಲಿ ಬಿತ್ತನೆ ಕಾರ್ಯ ಚುರುಕಾಗಿದೆ. ಕಳೆದ ಎರಡು ದಿನದಿಂದ ಭಾರಿ ಮಳೆ ಸುರಿಯುತ್ತಿದ್ದು, ರೈತರು ಹೊಲಗಳತ್ತ ಮುಖ ಮಾಡಿದ್ದಾರೆ.

ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ್, ಕಾಗವಾಡ ಮತ್ತು ಹುಕ್ಕೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ವಾಡಿಕೆಯಂತೆ 97.05 ಮಿ.ಮೀ. ಮಳೆ ನಿರೀಕ್ಷೆ ಮಾಡಲಾಗಿತ್ತು. ಆದರೆ, ಶೇ. 25ರಷ್ಟು ಮಾತ್ರ ಮಳೆಯಾಗಿದ್ದು, ರೈತರು ಬಿತ್ತನೆಗೆ ಮುಂದಾಗಿರಲಿಲ್ಲ. ಕಳೆದೆರಡು ದಿನಗಳಲ್ಲಿ ಭಾರಿ‌ ಮಳೆ ಬಿದ್ದ ಪರಿಣಾಮ ರೈತರು ಹೊಲಗಳತ್ತ ಮುಖ ಮಾಡಿದ್ದಾರೆ.

ಮಳೆ ಕೊರತೆಯಿಂದ ಪ್ರಸಕ್ತ ವರ್ಷವು ಕೂಡ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಮಳೆಗಾಗಿ ತಾಲೂಕಿನ ವಿವಿಧೆಡೆ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆದರೆ, ನಮ್ಮ ಪ್ರಾರ್ಥನೆ ದೇವರಿಗೆ ಮುಟ್ಟಿದೆ ಎಂದು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಚುರುಕುಗೊಂಡ ಬಿತ್ತನೆ ಕಾರ್ಯ

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಗಡಿ ಭಾಗದಲ್ಲಿ ಭೂಮಿ ಹಸಿಯಾಗುವಂತಹ ಮಳೆ ಸುರಿದಿದ್ದು, ರೈತರ‌ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದು, ನದಿಯ ಸುತ್ತಮುತ್ತಲಿನ ಕಬ್ಬು ಬೆಳೆದ ರೈತರಿಗೂ ಅನಕೂಲವಾಗಿದೆ.

Intro:ಗಡಿಭಾಗದಲ್ಲಿ ಪ್ರಾರಂಭವಾದ ಬಿತ್ತನೆ
Body:
ಚಿಕ್ಕೋಡಿ :
ಸ್ಟೋರಿ

ಜೂನ ಮೊದಲ ವಾರದಲ್ಲಿ ವಾಡಿಕೆಯಂತೆ ಪ್ರಾರಂಭವಾಗಬೇಕಾಗಿದ್ದ ಮಳೆ‌‌ ಕೈಕೊಟ್ಟಿದ್ದರಿಂದ ಮಂಕಾಗಿದ್ದ ರೈತರ ಮೊಗದಲ್ಲಿ ಈಗ ಹರ್ಷ ಮೂಡಿದ್ದು, ರೈತರು ಹೊಲಗಳತ್ತ ಮುಖ ಮಾಡಿ ಭರದಿಂದ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.

ಕುಗ್ಗಿದ ಮಳೆ ಪ್ರಮಾಣ :

ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ, ಕಾಗವಾಡ ಮತ್ತು ಹುಕ್ಕೇರಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಾಡಿಕೆಯಂತೆ 97.05 ಮಿ.ಮೀ ಮಳೆ ನಿರೀಕ್ಷೆ ಮಾಡಲಾಗಿತ್ತು ಆದರೆ ಶೇ 25 ರಷ್ಟು ಮಾತ್ರ ಮಳೆಯಾಗಿದ್ದು ರೈತರು ಬಿತ್ತನೆಗೆ ಮುಂದಾಗಿರಲಿಲ್ಲ ಕಳೆದೆರಡು ದಿನಗಳಲ್ಲಿ ಬಾರಿ‌ ಮಳೆ ಬಿದ್ದ ಪರುಣಾಮ ರೈತರು ಹೊಲಗಳತ್ತ ಮುಖ ಮಾಡಿ ಬಿತ್ತನೆ ಮಾಡಲು ಸಜ್ಜಾಗಿದ್ದಾರೆ.

ಸತತ ಬರದಿಂದ ಕೆಂಗಟ್ಟ ರೈತರು :

ಕಳೆದ ಹಾಗೂ ಪ್ರಸಕ್ತ ವರ್ಷವೂ ಬರ ಬಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಈ ಬಾರಿ ಜೂನ್ ಮುಗಿಯುವ ವೇಳೆಗೆ ಮಳೆರಾಯ ಕೃಪೆತೊರಿದ್ದು ಮಳೆಗಾಗಿ ಪ್ರಾರ್ಥಿಸಿ ರೈತರು ಪೂಜೆ ಹವನ ಮಾಡಿಸಿದ್ದು ಫಲಕಾರಿಯಾಗಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಗಡಿಭಾಗದಲ್ಲಿ ಭೂಮಿ ಹಸಿಯಾಗುವಂತೆ ಮಳೆ ಸುರಿದಿದ್ದು ರೈತರ‌ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಒಟ್ಟಾರೆ ಮುಂಗಾರು ಪೂರ್ವ ಮಳೆ ಕೈ ಕೊಟ್ಟಿದ್ದರಿಂದ ಬಿತ್ತನೆಗೆ ಸ್ವಲ್ಪ ಪ್ರಮಾಣದಲ್ಲಿ ಹಿನ್ನಡೆಯಾಗಿದ್ದು, ಈಗ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಜೊತೆಗೆ ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದು ನದಿಯ ಸುತ್ತಮುತ್ತಲಿನ ಕಬ್ಬು ಬೆಳೆದ ರೈತರಿಗೂ ಅನಕೂಲವಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.