ETV Bharat / state

ಬೆಳಗಾವಿ ಕೆಎಲ್ಇಯಲ್ಲಿ ಕೊರೊನಾ ಲ್ಯಾಬ್​: ಕೇಂದ್ರ ಸಚಿವರಿಂದ ಚಾಲನೆ

ಬೆಳಗಾವಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ 500 ರಿಂದ 700 ಟೆಸ್ಟ್ ಮಾಡುವ ಅತ್ಯಾಧುನಿಕ ಲ್ಯಾಬ್​ಗೆ ಕೇಂದ್ರದ ರೈಲ್ವೆ ಇಲಾಖೆ ರಾಜ್ಯಮಂತ್ರಿ ಸುರೇಶ್​​ ಅಂಗಡಿ ಚಾಲನೆ ನೀಡಿದರು.

Green Signal to Covid-19 Testing Laboratory
ಕೊರೊನಾ ಲ್ಯಾಬ್​ಗೆ ಚಾಲನೆ
author img

By

Published : May 15, 2020, 6:13 PM IST

Updated : May 15, 2020, 8:06 PM IST

ಬೆಳಗಾವಿ: ನೆಹರೂ ನಗರದಲ್ಲಿನ ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಡಬ್ಲ್ಯೂಹೆಚ್​ಒ, ಅಮೇರಿಕದ ಎಫ್​ಡಿಎ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಪ್ರಮಾಣೀಕರಿಸಿದ ನೂತನವಾಗಿ ಪ್ರಾರಂಭಿಸಲಾದ ಕೊರೊನಾ ವೈರಸ್ ಕೋವಿಡ್ -19 ಪರೀಕ್ಷಾ ಪ್ರಯೋಗಾಲಯಕ್ಕೆ ಕೇಂದ್ರದ ರೈಲ್ವೆ ಇಲಾಖೆ ರಾಜ್ಯಮಂತ್ರಿ ಸುರೇಶ್​​ ಅಂಗಡಿ ಚಾಲನೆ ನೀಡಿದರು.

Green Signal to Covid-19 Testing Laboratory
ಕೊರೊನಾ ಲ್ಯಾಬ್​ಗೆ ಚಾಲನೆ ನೀಡಿದ ಕೇಂದ್ರ ಸಚಿವ

ಬಳಿಕ ಮಾತನಾಡಿದ ಅವರು, ದೇಶವಷ್ಟೇ ಅಲ್ಲ ಇಡೀ ವಿಶ್ವವೇ ಇಂದು ಕೊರೊನಾ ವೈರಸ್ ಕೋವಿಡ್ -19ಗೆ ತಲೆಬಾಗಿ ನಿಂತಿದೆ. ಅದನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರವು ಸಕಲ ಕಾರ್ಯ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡಿದೆ. ಆರೋಗ್ಯವನ್ನು ಕಾಪಾಡಲು ಅಗತ್ಯ ಸೇವಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಲಾಕ್​​ಡೌನ ಪರಿಸ್ಥಿಯಲ್ಲಿ ಯಾರಿಗೂ ತೊಂದರೆಯಾಗದಂತೆ ಸಾಮಾಜಿಕ, ಆರ್ಥಿಕ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಸರ್ಕಾರವೇ ಭರಿಸುತ್ತಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಪಾತ್ರ ದೊಡ್ಡದಿದೆ. ಆದ್ದರಿಂದ ಸಾರ್ವಜನಿಕರು ಕೊರೊನಾ ವಾರಿಯರ್ಸ್​ಗೆ ಸಹಕಾರ ನೀಡಬೇಕು ಎಂದು ಕೋರಿದರು.

ಕೆಎಲ್​ಇ ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಮಾತನಾಡಿ, ಕೋವಿಡ್-19 ಕಂಡು ಬಂದ ತಕ್ಷಣ ಕೆಎಲ್​ಇ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಕೋವಿಡ್ ಅಲ್ಲದ ರೋಗಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಗೆ ತೊಂದರೆಯಾಗದಂತೆ ಎಚ್ಚರಿಕೆ ಕ್ರಮ ಕೈಕೊಂಡು ನಿರಂತರವಾಗಿ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿದೆ ಎಂದರು.

ಅಲ್ಲದೇ ಕೆಎಲ್​ಇ ಸಂಸ್ಥೆಯಲ್ಲಿ ಕೊರೊನಾ ಲ್ಯಾಬ್ ಆರಂಭಿಸಲು ಕೇಂದ್ರ ಸರ್ಕಾರ ಕಳೆದ ಮೂರು ತಿಂಗಳ ಹಿಂದೆಯೇ ಅನುಮತಿ ನೀಡಿತ್ತು. ಆದ್ರೆ, ಐಸಿಎಂಆರ್ ಅನುಮತಿ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಸುರೇಶ ಅಂಗಡಿಯವರ ನೇತೃತ್ವದಲ್ಲಿ ಒತ್ತಾಯ ಮಾಡಿದ್ದಾಗ ಲ್ಯಾಬ್ ತೆರೆಯಲು ಅವಕಾಶ ನೀಡಿದೆ. ಈ ಲ್ಯಾಬ್​​ನಿಂದ ನಮ್ಮ ಬಾಗದ ಜನರಿಗೆ ಉಪಯೋಗ ಆಗಲಿದ್ದು, 500 ರಿಂದ 700 ಟೆಸ್ಟ್ ಮಾಡುವ ಅತ್ಯಾಧುನಿಕ ಲ್ಯಾಬ್ ಇದಾಗಿದೆ ಎಂದರು.

ಸಂಸ್ಥೆಯ ನಿರ್ದೇಶಕ ಡಾ. ವಿ. ಎಸ್.ಸಾಧುನವರ, ಡಾ. ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್.ಮಹಾಂತಶೆಟ್ಟಿ ಇದ್ದರು.

Last Updated : May 15, 2020, 8:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.