ಹುಕ್ಕೇರಿ: ಕೊರೊನಾ ಟಫ್ ರೂಲ್ಸ್ ಬ್ರೇಕ್ ಮಾಡಿ ಅದ್ಧೂರಿ ಮದುವೆ ಮದುವೆ ಮಾಡಿಕೊಂಡ ಘಟನೆ ತಾಲೂಕಿನ ಸಂಕೇಶ್ವರದಲ್ಲಿ ನಿನ್ನೆ ನಡೆದಿದೆ.
ನೂತನ ವಧು-ವರರ ಮೇಲೆ ಕೇಸ್ ಹಾಕಲಾಗಿದೆ. ಅದ್ಧೂರಿ ಮದುವೆ ಮಾಡಿದ ವಧು, ವರ ಹಾಗೂ ಎರಡೂ ಕುಟುಂಬಗಳ ವಿರುದ್ಧ ಸಂಕೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
![Grand marriage in covid increase time, Grand marriage in covid increase time at Sankeshwar, Sankeshwar marriage news, Sankeshwar grand marriage news, ಕೊರೊನಾ ರಣಕೇಕೆ ನಡುವೆಯೂ ಅದ್ದೂರಿ ಮದುವೆ, ಸಂಕೇಶ್ವರದಲ್ಲಿ ಕೊರೊನಾ ರಣಕೇಕೆ ನಡುವೆಯೂ ಅದ್ದೂರಿ ಮದುವೆ, ಸಂಕೇಶ್ವರ ಮದುವೆ ಸುದ್ದಿ, ಸಂಕೇಶ್ವರದಲ್ಲಿ ಅದ್ದೂರಿ ಮದುವೆ ಸುದ್ದಿ,](https://etvbharatimages.akamaized.net/etvbharat/prod-images/kn-ckd-3-aduri-maduve-madidakke-bittu-kesa-script-ka10023_23042021124252_2304f_1619161972_381.jpg)
ಪಟ್ಟಣದಲ್ಲಿ ನಿನ್ನೆ ಕುಟುಂಬಗಳೆರಡು ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಈ ಅದ್ಧೂರಿ ಮದುವೆ ಕಾರ್ಯಾಕ್ರಮದ ಮೇಲೆ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದು, ನೂತನ ವಧು ಕಾರ್ತಿಕ ಗಾಯಕವಾಡ ಹಾಗೂ ಮೇಘಾ ದೆವದಟ್ಟೆ ಕುಟುಂಬಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪದ ಮಾಲೀಕನ ಮೇಲೂ ಪ್ರಕರಣ ದಾಖಲಿಸಿದ ಪೋಲಿಸರು, ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಈ ಮದುವೆ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಪುರಸಭೆ ಆಡಳಿತದವರು ಮುಂದಿನ ಕ್ರಮ ಕೈಗೊಂಡಿದ್ದಾರೆ.