ಚಿಕ್ಕೋಡಿ: ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನಡೆದಿದೆ.
ಜೋಡಕುರಳಿ ಗ್ರಾಮದ ಮಾರುತಿಗೌಡ ಭೀಮಗೌಡ ಪಾಟೀಲ್ (65) ಮೃತ ವ್ಯಕ್ತಿ. ಇವರು ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಈ ಮಧ್ಯೆ ಚುನಾವಣಾ ಪ್ರಚಾರದ ಓಡಾಟವೇ ಇವರಿಗೆ ಮುಳುವಾಯ್ತಾ? ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಓದಿ: ಚಿಕ್ಕೋಡಿ: ಗ್ರಾ.ಪಂ ಚುನಾವಣೆ ಅಂತಿಮ ಕಣದಲ್ಲಿ 1,628 ಅಭ್ಯರ್ಥಿಗಳು
2ನೇ ಹಂತದ ಗ್ರಾ.ಪಂಚಾಯಿತಿ ಚುನಾವಣೆಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಇವರು ಗ್ರಾಮದ ವಾರ್ಡ್ ನಂ.3ರ ಚುನಾವಣಾ ಕಣದಲ್ಲಿದ್ದರು.