ಬೆಳಗಾವಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ(Kashmir to Kanyakumari) ಸೈಕಲ್ ಯಾತ್ರೆ ಆರಂಭಿಸಿದ್ದ ಪಂಚಾಯಿತಿ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಬುಧವಾರ ಜಲ್ಲೆಯ ನಿಪ್ಪಾಣಿ ತಾಲೂಕು ಪ್ರವೇಶಿಸಿದ್ದಾರೆ.
ರಾಜ್ಯ ಪ್ರವೇಶಿಸಿದ ಸದಾನಂದ ಅಮರಾಪುರ ಅವರನ್ನು ನಿಪ್ಪಾಣಿ ತಾಪಂ ಅಧಿಕಾರಿಗಳು ಮಾರ್ಲಾಪಣೆ ಮಾಡಿ ಸ್ವಾಗತಿಸಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಅವರು ಕಾಶ್ಮೀರದಿಂದ ಕನ್ಯಾಕುಮಾರಿ (Kashmir to Kanyakumari) ಯಾತ್ರೆ ಹೊರಟು ಕರ್ನಾಟಕ ಸೇರಿದ್ದಾರೆ.
ಸದಾನಂದ ಅಮರಾಪುರ ಅವರು ಅ.23 ರಂದು ಕಾಶ್ಮೀರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಆರಂಭವಾದ ಸೈಕಲ್ ಯಾತ್ರೆ ಪಂಜಾಬ್, ಹರಿಯಾಣ, ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ ಸಾಗಿ ಇದೀಗ ಕರ್ನಾಟಕ ತಲುಪಿದೆ. ಇಲ್ಲಿಂದ ಅವರು ತಮಿಳುನಾಡಿನ ಕನ್ಯಾಕುಮಾರಿಗೆ ಪ್ರಯಾಣ ಮುಂದುವರೆಸಲಿದ್ದಾರೆ.
19 ದಿನದಲ್ಲಿ ಕರ್ನಾಟಕಕ್ಕೆ
ಅ.23ರಂದು ಆರಂಭಗೊಂಡ ಯಾತ್ರೆಯೂ ನ.10ರಂದು ಕರ್ನಾಟಕ ಪ್ರವೇಶಿಸಿದೆ. ಕೇವಲ 19 ದಿನಗಳಲ್ಲಿ 7 ರಾಜ್ಯಗಳ ಸಂಚರಿಸಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ (Azadi ka amrit mahotva) ಮಹತ್ವ ಸಾರಿದ್ದಾರೆ. ಜತೆಗೆ ಯಾತ್ರೆಯ ಮೂಲಕ ಪಂಚಾಯತ್ ರಾಜ್ ಇಲಾಖೆ(Department of Panchayat raj)ಯ ಯೋಜನೆಗಳು ಹಾಗೂ ವ್ಯಸನಮುಕ್ತ ಸಮಾಜ (Addiction free society) ನಿರ್ಮಾಣದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
4 ಸಾವಿರ ಕಿಮೀ ಸೈಕಲ್ ಯಾತ್ರೆ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೈಗೊಂಡಿರುವ ಸೈಕಲ್ ಯಾತ್ರೆಯೂ 4 ಸಾವಿರ ಕಿ.ಮೀ.ವರೆಗೆ ಸಂಚರಿಸಲಿದೆ. ಈಗಾಗಲೇ 3 ಸಾವಿರಕ್ಕೂ ಅಧಿಕ ಕಿ.ಮೀ. ಯಾತ್ರೆ ಪೂರ್ಣಗೊಂಡಿದೆ. ನಿತ್ಯ ಅವರು 200 ಕಿ.ಮೀ ಸಂಚರಿಸುತ್ತಿದ್ದಾರೆ.
ಅಮೃತ ಮಹೋತ್ಸವದ ಹಿನ್ನೆಲೆ ಸೈಕಲ್ ಯಾತ್ರೆ ನಡೆಸುತ್ತಿರುವ ಸದಾನಂದ ಅಮರಾಪುರ ಅವರು ಐರನ್ ಮ್ಯಾನ್ (Iron Man) ಖ್ಯಾತಿಗೆ ಪಾತ್ರರಾಗಿದ್ದರು. ಈ ಹಿಂದೆ 3.8 ಕಿ.ಮೀ ಈಜು, 180 ಕಿ.ಮೀ ಸೈಕ್ಲಿಂಗ್ ಮತ್ತು 42 ಕಿ.ಮೀ ರನ್ನಿಂಗ್ ಸ್ಪರ್ಧೆಯನ್ನು ಕೇವಲ 15.45 ಗಂಟೆಗಳಲ್ಲಿ ಪೂರ್ಣಗೊಳ್ಳಿಸುವ ಮೂಲಕ ಐರನ್ ಮ್ಯಾನ್ ಕೀರ್ತಿಗೆ ಭಾಜರಾಗಿದ್ದರು.
ಇದನ್ನೂ ಓದಿ: onake obavva Jayanthi: ಇಂದು ಒನಕೆ ಓಬವ್ವ ಜಯಂತಿ... ಶುಭ ಕೋರಿದ ಅನೇಕ ಗಣ್ಯರು