ETV Bharat / state

ಸುರೇಶ್​ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ರಾಜ್ಯಪಾಲ ವಜುಭಾಯ್ ವಾಲಾ - ಸುರೇಶ್ ಅಂಗಡಿ ಕುಟುಂಬ

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ವಜುಭಾಯ್ ವಾಲಾ ಅವರು ಸುರೇಶ್​ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

angadi
angadi
author img

By

Published : Oct 5, 2020, 3:19 PM IST

Updated : Oct 5, 2020, 4:19 PM IST

ಬೆಳಗಾವಿ: ಕೋವಿಡ್-19 ಸೋಂಕಿಗೆ ಒಳಗಾಗಿ ಇತ್ತೀಚೆಗಷ್ಟೇ ಚಿಕಿತ್ಸೆ ಫಲಿಸದೆ ಮೃತಪಟ್ಟ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದ ಸುರೇಶ್ ಅಂಗಡಿ ಕುಟುಂಬಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಸಾಂತ್ವನ ಹೇಳಿದರು‌.

ಸುರೇಶ್​ ಅಂಗಡಿ ಕುಟುಂಬ ಭೇಟಿಯಾದ ವಜುಭಾಯ್ ವಾಲಾ

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ವಜುಭಾಯ್ ವಾಲಾ ಅವರು ಸುರೇಶ್​ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

governor vajubhai vala visits suresh angadi family
ಸುರೇಶ್​ ಅಂಗಡಿ ಭಾವಚಿತ್ರಕ್ಕೆ ಪುಷ್ಪನಮನ

ಇಂದು ಬೆಳಗ್ಗೆ 9.20ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಜುಭಾಯ್ ವಾಲಾ ಆಗಮಿಸಿದ್ದರು. ಬಳಿಕ ಸುವರ್ಣ ಸೌಧದಲ್ಲಿ ಆಯೋಜಸಿದ್ದ ರಾಣಿ ಚೆನ್ನಮ್ಮ ವಿವಿಯ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಸುರೇಶ್​ ಅಂಗಡಿ ನಿವಾಸಕ್ಕೆ ಆಗಮಿಸಿದರು. ಸುರೇಶ್​ ಅಂಗಡಿ ತಾಯಿ ಸೋಮವ್ವ, ಪತ್ನಿ ಮಂಗಳಾ ಅಂಗಡಿ, ಪುತ್ರಿ ಸ್ಫೂರ್ತಿ ಹಾಗೂ ಶ್ರದ್ಧಾಗೆ ಸಾಂತ್ವನ ಹೇಳಿದರು.

ಸುರೇಶ್​ ಅಂಗಡಿ ಅವರ ಪಕ್ಷ ನಿಷ್ಠೆ ಇತರರಿಗೆ ಮಾದರಿಯಾಗಿತ್ತು. ಅಂಗಡಿ ಅವರ ಕುಟುಂಬದ ಜೊತೆಗೆ ನಾನಿದ್ದೇನೆ. ಸಹಾಯ ಬೇಕಾದ್ರೆ ರಾಜ್ಯಭವನ ಸಂಪರ್ಕಿಸುವಂತೆ ಕುಟುಂಬ ಸದಸ್ಯರನ್ನು ಕೋರಿದರು. ಬಳಿಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದರು.

Last Updated : Oct 5, 2020, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.