ಬೆಳಗಾವಿ: ರಾಜ್ಯದ ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ಗೋಕಾಕ್ ಹಾಗೂ ಚಿಕ್ಕೋಡಿಯನ್ನ ಜಿಲ್ಲೆಯಾಗಿ ಘೋಷಣೆ ಮಾಡಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಜ್ಯದ ಆಡಳಿತಾತ್ಮಕ ದೃಷ್ಟಿಯಿಂದ ಸಣ್ಣ ಸಣ್ಣ ಜಿಲ್ಲೆಗಳು ರಚನೆ ಆಗಬೇಕೆಂಬುವುದು ದಶಕದ ಕೂಗಿದೆ. ಈ ಹಿಂದೆ 1990ರಲ್ಲಿ ಜೆ.ಎಚ್.ಪಟೇಲರು ಗೋಕಾಕ್ ಮತ್ತ ಚಿಕ್ಕೋಡಿಯನ್ನ ಜಿಲ್ಲೆಯಾಗಿ ಘೋಷಣೆ ಮಾಡಿದ್ದರು. ಆದರೆ ಕೇವಲ ಭಾಷೆಯ ಕಾರಣದಿಂದ ಅದನ್ನು ತಡೆ ಹಿಡಿಯಲಾಗಿದೆ. ಇದೀಗ ಮೂವತ್ತು ವರ್ಷಗಳಲ್ಲಿ ಬೆಳಗಾವಿ ಜಿಲ್ಲೆ ಬಹಳಷ್ಟು ಬದಲಾವಣೆ ಆಗಿದೆ. ಹೀಗಾಗಿ ಗೋಕಾಕ್ ಮತ್ತು ಚಿಕ್ಕೋಡಿ ಜಿಲ್ಲೆ ಆಗಬೇಕಿದೆ ಎಂದು ಹೇಳಿದರು.
ಬೆಳಗಾವಿ ಆಡಳಿತಾತ್ಮಕ ದೃಷ್ಟಿಯಿಂದ ಬಹಳ ದೊಡ್ಡ ಜಿಲ್ಲೆ ಆಗಿರುವುದರಿಂದ ಸರ್ಕಾರವೇ ನೇಮಕ ಮಾಡಿರುವ ಆಯೋಗಗಳು ಕೊಟ್ಟ ವರದಿ ಆಧಾರದ ಮೇಲೆ ಗೋಕಾಕ್ ಮತ್ತು ಚಿಕ್ಕೋಡಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಬೇಕು. ಈ ಕುರಿತಾಗಿ ನಾನು ಕೂಡ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಆಗ್ರಹಿಸುತ್ತೇನೆ ಎಂದರು.