ETV Bharat / state

ಪ್ರವಾಹದ ಮಧ್ಯೆ ಗಣೇಶ ಹಬ್ಬ ಜೋರು .. ಕುಂದಾನಗರಿಯಲ್ಲಿ ಕಳೆಗಟ್ಟಿದ ಹಬ್ಬದ ವಾತಾವರಣ.. - ಉತ್ತರ ಕರ್ನಾಟಕ

ಮಳೆಯ ಆರ್ಭಟದಲ್ಲಿ ಜನರು ನಲುಗಿದ್ದರೂ ವಿನಾಯಕನ ಹಬ್ಬಕ್ಕೆ ಮಾತ್ರ ಯಾವುದೇ ವಿಘ್ನ ಬಂದಿಲ್ಲ. ಮಾರುಕಟ್ಟೆಯಲ್ಲಿ ಜನಜಂಗುಳಿ ತುಂಬಿ ತುಳುಕಿದ್ದು, ನಾಳೆಯ ಹಬ್ಬಕ್ಕೆ ತಯಾರಿ ಜೋರಾಗಿದೆ.

city police commissioner
author img

By

Published : Sep 1, 2019, 7:05 PM IST

Updated : Sep 1, 2019, 11:00 PM IST

ಬೆಳಗಾವಿ : ಕೆಲವು ದಿನಗಳ ಹಿಂದೆ ಮಳೆರಾಯನ ಆರ್ಭಟಕ್ಕೆ ಕುಂದಾನಗರಿ ಅಕ್ಷರಶಃ ನಲುಗಿ ಹೊಗಿತ್ತು. ಮನೆ ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದರು. ಇದರಿಂದ ಕುಗ್ಗದ ಜನತೆ ವಿನಾಯಕನನ್ನು ಬರಮಾಡಿಕೊಳ್ಳಲು ಅದ್ಧೂರಿ ತಯಾರಿ ನಡೆಸಿದ್ದಾರೆ.

ಮಳೆಯ ಆರ್ಭಟದಲ್ಲಿ ಜನರು ನಲುಗಿದ್ದರು ವಿನಾಯಕನ ಹಬ್ಬಕ್ಕೆ ಮಾತ್ರ ಯಾವುದೇ ವಿಘ್ನ ಬಂದಿಲ್ಲ. ಮಾರುಕಟ್ಟೆಯಲ್ಲಿ ಜನಜಂಗುಳಿ ತುಂಬಿ ತುಳಿಕಿದ್ದು, ನಾಳೆಯ ಹಬ್ಬಕ್ಕೆ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಹೂ, ಹಣ್ಣು ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬೇಕಾಗುವ ವಸ್ತುಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಹೋದ ವರ್ಷಕ್ಕಿಂತ ಈ ವರ್ಷ ವಸ್ತುಗಳು ದುಬಾರಿ ಆಗಿದ್ದರೂ ಜನರು ಮಾತ್ರ ಖರೀದಿ ಮಾಡುವಲ್ಲಿ ಮುಗಿಬಿದ್ದಿದ್ದಾರೆ.

ಕುಂದಾನಗರಿಯಲ್ಲಿ ಕಳೆಗಟ್ಟಿದ ಹಬ್ಬದ ವಾತಾವರಣ..

ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ :
ಕುಂದಾನಗರಿಯಲ್ಲಿ ಅತ್ಯಂತ ಸಡಗರದಿಂದ ನಡೆಯುವ ಗಣೇಶ ಹಬ್ಬಕ್ಕೆ ನಗರ ಪೊಲೀಸ್ ಸೂಕ್ತ ಮುನ್ನೆಚ್ಚರಿಕೆ ವಹಿಸಿದೆ. ಯಾವುದೇ ಅವಘಡ ಸಂಭವಿಸದಂತೆ ಆಯುಕ್ತರು ಸೇರಿ ಡಿಸಿಪಿ - 2, ಎಸಿಪಿ - 5, ಸಿಪಿಐ - 20, ಪಿಎಸ್ಐ - 12, ಎಎಸ್ಐ - 60, ಪೊಲೀಸ್ ಪೇದೆ - 980 ಹಾಗೂ ಗೃಹ ರಕ್ಷಕ ದಳ - 450 ಜೊತೆಗೆ ನಗರದಾದ್ಯಂತ ಸುಮಾರು 258 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ನಗರ ಆಯುಕ್ತ ಬಿ.ಎಸ್. ಲೋಕೇಶ್​ ಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಗಣೇಶೋತ್ಸವ ಹಬ್ಬಕ್ಕೆ ಕುಂದಾನಗರಿಯಲ್ಲಿ ಸಕಲ ಸಿದ್ದತೆ ನಡೆದಿದ್ದು, ಪ್ರವಾಹವನ್ನು ಲೆಕ್ಕಿಸದೆ ಜನರು ವಿಘ್ನ ನಿವಾರಕ ಗಣೇಶನ ಹಬ್ಬದಲ್ಲಿ ತೊಡಗಿಕೊಂಡಿದ್ದಾರೆ.

Intro:ಪ್ರವಾಹದ ಮಧ್ಯೆ ಗಣೇಶ ಹಬ್ಬ ಜೋರು : ಕುಂದಾನಗರಿಯಲ್ಲಿ ಗಳೆಗಟ್ಟಿದ ಹಬ್ಬದ ವಾತಾವರಣ

ಬೆಳಗಾವಿ : ಮಳೆ, ಮಳೆ , ಮಳೆ ಕಳೆದ ಕೆಲವು ದಿನಗಳ ಹಿಂದೆ ಮಳೆರಾಯನ ಆರ್ಭಟಕ್ಕೆ ಕುಂದಾನಗರಿ ಅಕ್ಷರಶಃ ನಲುಗಿ ಹೊಗಿತ್ತು. ಮನೆ ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದರು. ಆದರೆ ರಾಜ್ಯದಲ್ಲಿ ಅತ್ಯಂತ ಅದ್ದೂರಿಯಾಗಿ ಬೆಳಗಾವಿಯಲ್ಲಿ ನಡೆಯುವ ಗಣೇಶೋತ್ಸವಕ್ಕೆ ಯಾವುದೇ ವಿಘ್ನವಿಲ್ಲ, ವಿನಾಯಕನ್ನು ಬರಮಾಡಿಕೊಳ್ಳಲು ಜನರು ಅದ್ದೂರಿ ತಯಾರಿ ನಡೆಸಿದ್ದಾರೆ.

ಹೌದು ಬೆಳಗಾವಿ ಸಂಸ್ಕ್ರತಿವಾಗಿ ತನ್ನದೇ ಪ್ರಾಮುಖ್ಯತೆ ಹೊಂದಿದ ಜಿಲ್ಲೆ. ಗಡಿನಾಡಿನಲ್ಲಿ ನಡೆಯುವ ಗಣೇಶೋತ್ಸವ ತನ್ನದೆ ಇತಿಹಾಸ ಹೊಂದಿದೆ. ಬಾಲಗಂಗಾಧರ ನಾಥ ತಿಲಕರು ಪ್ರಾರಂಬಿಸಿದ ಗಣೇಶ ಹಬ್ಬವನ್ನು ಆಚರಿಸುವ ರಾಜ್ಯದ ಪ್ರಮುಖ ನಗರಗಳಲ್ಲಿ ಬೆಳಗಾವಿ ಕೂಡ ಒಂದು. ಮಳೆಯ ಆರ್ಭಟದಲ್ಲಿ ಜನರು ನಲುಗಿದ್ದರು ವಿನಾಯಕನ ಹಬ್ಬಕ್ಕೆ ಮಾತ್ರ ಯಾವುದೇ ವಿಘ್ನ ಬಂದಿಲ್ಲ. ಮಾರುಕಟ್ಟೆಯಲ್ಲಿ ಜನಜಂಗುಳಿ ತುಂಬಿ ತುಳಿಕಿದ್ದು ನಾಳೆಯ ಹಬ್ಬಕ್ಕೆ ತಯಾರಿ ಜೋರಾಗಿದೆ.

Body:ಇನ್ನೂ ಮಾರುಕಟ್ಟೆಯಲ್ಲಿ ಹೂ, ಹಣ್ಣು ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಬೇಕಾಗುವ ವಸ್ತುಗಳ ಮಾರಾಟ ಜೋರಾಗಿದೆ, ಹೋದ ವರ್ಷಕ್ಕಿಂತ ಈ ವರ್ಷ ವಸ್ತುಗಳು ದುಬಾರಿ ಆಗಿದ್ದರು ಜನರು ಮಾತ್ರ ಖರೀದಿ ಮಾಡುವಲ್ಲಿ ಮುಗಿಬಿದ್ದಿದ್ದಾರೆ. ಜೊತೆಗೆ ತೀವೃ ಮಳೆಯಿಂದ ಸಂಕಷ್ಟ ಅನುಭವಿಸಿದ್ದರು ಜನರು ಮೊಗದಲ್ಲಿ ಹಬ್ಬರ ವಾತಾವರಣ ಎದ್ದು ಕಾಣುತ್ತಿದೆ.

ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದು ಹಬ್ಬದ ವಸ್ತುಗಳ ಖರೀದಿ ಭರದಿಂದ ಸಾಗಿದೆ. ರಂಗೋಲಿ, ವಿವಿಧ ಹಣ್ಣುಗಳು. ತರ ತರಹದ ಹೂಗಳು, ಬಣ್ಣ ಬಣ್ಣದ ಲೈಟ್ಗಳು, ಗಣೇಶನನ್ನು ಸಿಂಗರಿಸುವ ತರ್ಮಾಕೊಲ್, ಬಲೂನ್, ಪ್ಲಾಸ್ಟಿಕ್ ಹೂ ಜೊತೆಗೆ
ಬಗೆ ಬಗೆಯ ಸಿಂಗಾರಕ ವಸ್ತುಗಳ ಮಾರಾಟ ಭರದಿಂದ ಸಾಗಿದೆ. ಒಟ್ಟಿನಲ್ಲಿ ಕುಂದಾನಗರಿ ಜನ ಹಬ್ಬದ ಮೂಡ್ ನಲ್ಲಿದ್ದಾರೆ.

ಗಣೇಶೋತ್ಸವ ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಸಕಲ ಸಿದ್ದತೆ : ಇನ್ನೂ ಕುಂದಾನಗರಿಯಲ್ಲಿ ಅತ್ಯಂತ ಸಾಗರದಿಂದ ನಡೆಯುವ ಗಣೇಶ ಹಬ್ಬಕ್ಕೆ ನಗರ ಪೊಲೀಸ್ ಸೂಕ್ತ ಮುನ್ನೆಚ್ಚರಿಕೆ ವಹಿಸಿದೆ. ಯಾವುದೇ ಅವಘಡ ಸಂಭವಿಸದಂತೆ, ಆಯುಕ್ತರು ಸೇರಿ. ಡಿಸಿಪಿ - 2, ಎಸಿಪಿ - 5, ಸಿಪಿಐ - 20, ಪಿಎಸ್ಐ - 12, ಎಎಸ್ಐ - 60, ಪೊಲೀಸ್ ಪೇದೆ - 980 ಹಾಗೂ ಗೃಹ ರಕ್ಷಕ ದಳ - 450, ಹಲಜೊತೆಗೆ ನಗರದಾದ್ಯಂತ ಸುಮಾರು 258 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ನಗರ ಆಯುಕ್ತ ಬಿ.ಎಸ್. ಲೋಕೇಶಕುಮಾರ್ ತಿಳಿಸಿದ್ದಾರೆ.

Conclusion:ಒಟ್ಟಿನಲ್ಲಿ ರಾಜ್ಯದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಗಣೇಶೋತ್ಸವ ಹಬ್ಬಕ್ಕೆ ಕುಂದಾನಗರಿಯಲ್ಲಿ ಸಕಲ ಸಿದ್ದತೆ ನಡೆದಿದ್ದು ಪ್ರವಾಹವನ್ನು ಲೆಕ್ಕಿಸದೆ ಜನರು ವಿಘ್ನ ನಿವಾರಕ ಗಣೇಶನ ಹಬ್ಬದಲ್ಲಿ ತೊಡಗಿಕೊಂಡಿದ್ದಾರೆ. ಜನರಿಗೆ ಎಷ್ಟೇ ತೊಂದರೆ ಆದರು ದೇವರ ಆಚರಣೆಗೆ ಯಾವುದೇ ಅಡ್ಡಿಯಿಲ್ಲ ಎಂಬುದು ತಿಳಿಯುತ್ತದೆ.

ಬೈಟ್ : ಬಿ.ಎಸ್. ಲೋಕೇಶಕುಮಾರ ( ನಗರ ಪೊಲೀಸ್ ಆಯುಕ್ತರು )
: ಉತ್ತಪ್ಪ ( ಮಾರಾಟಗಾರ )

ವಿನಾಯಕ ಮಠಪತಿ
ಬೆಳಗಾವಿ

Last Updated : Sep 1, 2019, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.