ETV Bharat / state

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೋಮಲಿಂಗ ಮೂಲಿಮನಿ ಇನ್ನಿಲ್ಲ..

ಸ್ವಾತಂತ್ರ್ಯ ಸೇನಾನಿ ಸೋಮಲಿಂಗಪ್ಪ ಮೂಲಿಮನಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಸೋಮಲಿಂಗ ಮೂಲಿಮನಿ
ಸ್ವಾತಂತ್ರ್ಯ ಹೋರಾಟಗಾರ ಸೋಮಲಿಂಗ ಮೂಲಿಮನಿ
author img

By

Published : Apr 2, 2023, 10:18 PM IST

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಸ್ವಾತಂತ್ರ್ಯ ಸೇನಾನಿ ಸೋಮಲಿಂಗಪ್ಪ ಮೂಲಿಮನಿ (93) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸ್ವಾತಂತ್ರ್ಯ ಸೇನಾನಿ ನಡೆದು ಬಂದ ದಾರಿ: ಕ್ರಾಂತಿಕಾರಿಗಳ ನಾಡು ಸವದತ್ತಿ ತಾಲೂಕಿನ ಹೊಸೂರ ಗ್ರಾಮದ 225 ಜನ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿಯಾಗಿದ್ದ ಸೋಮಲಿಂಗಪ್ಪ ಮೂಲಿಮನಿ ಅಗಲಿದ್ದಾರೆ. ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊಡ್ಡದಾದ ತಂಡ ನಿರ್ಮಾಣವಾಗಿ ಇಂದಿಗೂ ಶೂರರ ನಾಡು ಎಂದರೆ ಹೊಸೂರ ಗ್ರಾಮ ಪ್ರಖ್ಯಾತಿ ಹೊಂದಿದೆ.

ಗ್ರಾಮದ ಸೋಮಲಿಂಗಪ್ಪ ವಣ್ಣುರ, ರಾಚಪ್ಪ ಬೋಳೆ, ಸುತಗಟ್ಟಿ ಈರಪ್ಪನವರು, ದಾದಾ ಕಾಳೆಯವರ ನೇತೃತ್ವದಲ್ಲಿ ಗ್ರಾಮದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳ ಪ್ರಭಾವದಿಂದ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೋಮಲಿಂಗಪ್ಪ ಮೂಲಿಮನಿ ಭಾಗವಹಿಸಿದ್ದರು.

ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟದಲ್ಲಿ ತೊಡಗಿ ಭೂಗತವಾಗಿ ಜಮೀನುಗಳಲ್ಲಿ ಅಡಗಿಕೊಂಡಿದ್ದ ಗ್ರಾಮದ ಹಿರಿಯರಿಗೆ ಇವರು ತಮ್ಮ 14ನೇ ವಯಸ್ಸಿನಲ್ಲಿ ಧೈರ್ಯದಿಂದ ಹೋರಾಟಗಾರರ ಅಡಗು ತಾಣಗಳಿಗೆ ಊಟ ಉಪಚಾರ ನೀಡಲು ಹೋಗುತ್ತಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಸೋಮಲಿಂಗಪ್ಪ ಮೂಲಿಮನಿ ನಿಧನಕ್ಕೆ ಸಂತಾಪ

ನಂತರ ಅಸಹಕಾರ ಚಳವಳಿ ಅಂಗವಾಗಿ ನಡೆದ ತಾರ ತಂತಿ ಕಡಿಯುವದು, ಗ್ರಾಮದಲ್ಲಿದ್ದ ಬ್ರಿಟಿಷ್ ಬಂಗ್ಲೆ ಸುಡುವಲ್ಲಿ ಭಾಗವಹಿಸದ್ದ ಇವರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ 225 ತಂಡದ ಅತ್ಯಂತ ಸಣ್ಣ ವಯಸ್ಸಿನ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ಇವರನ್ನು ನೋಡಿದರೆ ಸಣ್ಣ ಹುಡುಗ ಇವನೇನು ಮಾಡಿಯಾನು ಎನ್ನುವ ಭ್ರಮೆ ಹುಟ್ಟಿಸಿ ಅವರಿಗೆ‌ ಚಳ್ಳೆ ಹಣ್ಣು ತಿನ್ನಿಸಿ ಸಾಮಾನ್ಯ ಬಾಲಕನಂತೆ ಇದ್ದು, ಗ್ರಾಮದಲ್ಲಿ ನಡೆಯುತ್ತಿದ್ದ ಬ್ರಿಟಿಷರ ಎಲ್ಲ‌ ಮಾಹಿತಿಗಳನ್ನು ಹೋರಾಟಗಾರರಿಗೆ ನೀಡುತಿದ್ದರು.

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗಾರರು: ಗ್ರಾಮ ಕ್ರಾಂತಿಕಾರಿಗಳ ಬೀಡಾಗಿದ್ದರ ಪ್ರತೀಕವಾಗಿ ಪ್ರತಿ ವರ್ಷ ಆಗಷ್ಟ್ 14 ರಂದು ರಾತ್ರಿ12 ಘಂಟೆಗೆ ಗ್ರಾಮದಲ್ಲಿ ನಡೆಯುತಿದ್ದ ಧ್ವಜಾರೋಹಣ ಕಾರ್ಯಕ್ರಮ ಇವರ ಹಸ್ತದಿಂದ ನಡೆಸುತ್ತಿತ್ತು. ಈ ಕಾರ್ಯಕ್ರಮಕ್ಕೆ ಇವರು ಎಂದು ಗೈರು ಆಗಲಿಲ್ಲ. ಎಂತಹ ಅನಾರೋಗ್ಯದಲ್ಲಿದ್ದರು ಹಾಗೂ ಕೊರೋನಾದಂತಹ ಸಮಯದಲ್ಲಿ ಮತ್ತು ಬಾರಿ ಮಳೆಯ ನಡುವೆಯು ರಾತ್ರಿ ಧ್ವಜಾರೋಹಣ ನಡೆಸುತಿದ್ದರು. ತಮ್ಮ 93ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ಇವರಿಗೆ, ನೀಲಪ್ಪ, ರುದ್ರಪ್ಪ, ಮಹಾಂತೇಶ, ಮಂಜುನಾಥ ಹಾಗೂ ಶಶಿಕಲಾ ಕಳಸಣ್ಣವರ ಎಂಬ ಮಕ್ಕಳಿದ್ದು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಬದುಕು ದೇಶಕ್ಕಾಗಿ ಮೀಸಲು ಮಾಡಿದ್ದರಿಂದ ಇವತ್ತು ಅವರ ಕುಟುಂಬ ಸಮಸ್ತ ಕರುನಾಡಿಗೆ ಪಸರಿಸಿದೆ. ಮಕ್ಕಳಿಬ್ಬರು ತಂದೆಯ ಖಾದಿ ಪ್ರಭಾವದಿಂದ ಮೈಸೂರಿನಲ್ಲಿ ಶ್ರೀ ವೆಂಕಟೇಶ ಮಾಗಡಿ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಘ ಸ್ಥಾಪಿಸಿ ಇಂದು ಮೈಸೂರು ಭಾಗದಲ್ಲಿ ಪ್ರಭಾವಿಗಳಾಗಿದ್ದಾರೆ. ಹೊಸೂರ ಗ್ರಾಮದಲ್ಲಿದ್ದ‌ ಕುಟುಂಬ ರಾಜ್ಯಕ್ಕೆ ಪರಿಚಯವಾಗಿದೆ.

ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಕಂದಾಯ ನೀರಿಕ್ಷಕ ಆರ್. ಎಸ್ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್. ಬಿ ಸಿದ್ದನಗೌಡರ, ನೀರು ಬಳಕೆದಾರರ ಮಹಾಮಂಡಳ‌ ನಿರ್ದೆಶಕ ಸಿ. ವಾಯ್, ಬೂದಿಹಾಳ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಎಸ್.ಕೆ ಮೆಳ್ಳಿಕೇರಿ ಸಂತಾಪ‌ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : 'ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಕೇಂದ್ರದಿಂದ ರಾಜ್ಯದ ಜನರಿಗೆ ಅನ್ಯಾಯ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.