ETV Bharat / state

ಅಂಗನವಾಡಿ-ಆಶಾ ಕಾರ್ಯಕರ್ತೆಯರಿಗೆ ಉಚಿತ ಸೀರೆ: ಸಚಿವ ಶ್ರೀಮಂತ ಪಾಟೀಲ

ಕೊರೊನಾ ಸೋಂಕು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಶಾಘ್ಲನೀಯವಾಗಿದೆ. ಹಾಗಾಗಿ ಅವರಿಗೆ ಜವಳಿ ಖಾತೆಯಿಂದ ಪ್ರತಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಸೀರೆ ಕೊಡಲು ನಿರ್ಣಯಿಸಲಾಗಿದೆ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ್​ ಹೇಳಿದರು.

ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ್​

author img

By

Published : Jul 14, 2020, 5:21 PM IST

Updated : Jul 14, 2020, 6:43 PM IST

ಚಿಕ್ಕೋಡಿ (ಬೆಳಗಾವಿ): ಕೋವಿಡ್-19 ತಡೆಯುವಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ಹಾಗಾಗಿ ಜವಳಿ ಖಾತೆಯಿಂದ ಪ್ರತಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಸೀರೆ ಕೊಡಲು ನಿರ್ಣಯಿಸಲಾಗಿದೆ. ಸುಮಾರು ಆರು ಲಕ್ಷ ಸೀರೆಗಳನ್ನು ನೇಕಾರರಿಂದ ಖರೀದಿಸಲು ನಿಶ್ಚಯಿಸಿದ್ದೇವೆ ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ್​ ಹೇಳಿದರು.

ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ್​

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ. ಕಾಗವಾಡ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದರೂ ಕಳ್ಳ ಮಾರ್ಗದಿಂದ ಜನರು ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತುವುದರಿಂದ ಕಾಗವಾಡ, ಚಿಕ್ಕೋಡಿ, ಅಥಣಿ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಪ್ರತಿ ಬೇಸಿಗೆಯಲ್ಲಿ ನಾಲ್ಕು ಟಿಎಂಸಿ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ‌ ಒಪ್ಪಿಗೆ ನೀಡಿದೆ. ನಾವು ಮಹಾರಾಷ್ಟ್ರದವರಿಗೆ ನೀರು ಕೊಡಲು ಒಪ್ಪಿಗೆ ನೀಡಿದ್ದರಿಂದ ಎರಡು ರಾಜ್ಯಗಳ ನಡುವೆ ಕೊಡು-ತೆಗೆದುಕೊಳ್ಳುವ ಮಾತುಕತೆ ನಡೆದಿದೆ. ಪ್ರತಿ ಬೇಸಿಗೆಯಲ್ಲಿ ಕೃಷ್ಣಾ ನದಿಗೆ ನಾಲ್ಕು ಟಿಎಂಸಿ ನೀರು ಬಿಡಲು‌ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

Last Updated : Jul 14, 2020, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.