ETV Bharat / state

'ಅಥಣಿ ಗೆಳೆಯರ ಬಳಗ'ದಿಂದ ಉಚಿತ ಶವ ಸಂಸ್ಕಾರ

'ಅಥಣಿ ಗೆಳೆಯರ ಬಳಗ' ಉಚಿತವಾಗಿ ಶವ ಸಂಸ್ಕಾರ ನಿರ್ವಹಿಸುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಸುಮಾರು 12 ಜನ ಸೇರಿಕೊಂಡು ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟ 20ಕ್ಕೂ ಹೆಚ್ಚು ಜನರ ಅಂತ್ಯ ಸಂಸ್ಕಾರವನ್ನು ಉಚಿತವಾಗಿ ನೆರವೇರಿಸಿಕೊಟ್ಟಿದ್ದಾರೆ.

funeral
ಶವಸಂಸ್ಕಾರ
author img

By

Published : May 26, 2021, 12:46 PM IST

ಅಥಣಿ: ಕೊರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟವರ ಶವ ಸಂಸ್ಕಾರಕ್ಕೂ ಕೆಲ ಕುಟುಂಬ ವರ್ಗದವರು ಮುಂದೆ ಬರಲು ಯೋಚಿಸುವಂತಹ ಈ ಕರಾಳ ದಿನಗಳಲ್ಲಿ ಅಥಣಿಯಲ್ಲಿ ಗೆಳೆಯರ ಬಳಗವೊಂದು ಉಚಿತವಾಗಿ ಶವ ಸಂಸ್ಕಾರ ನಿರ್ವಹಿಸುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ.

ಅಥಣಿಯಲ್ಲಿ 'ಅಥಣಿ ಗೆಳೆಯರ ಬಳಗ' ಎಂಬ ಹೆಸರನ್ನಿಟ್ಟುಕೊಂಡು, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸುತ್ತಿದ್ದಾರೆ. ಹೌದು, ಇಂತಹ ಒಂದು ತಂಡ ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುತ್ತಿದೆ.

'ಅಥಣಿ ಗೆಳೆಯರ ಬಳಗ'ದಿಂದ ಉಚಿತ ಶವ ಸಂಸ್ಕಾರ

ಈಗಾಗಲೇ ತಾಲೂಕಿನ ಹಲವು ಕಡೆಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ರೂಪಾಯಿ ಹಣ ಪಡೆದ ಸಾಕಷ್ಟು ಉದಾಹರಣೆಗಳಿವೆ. ಅತ್ಯಂತ ಅಮಾನವೀಯವಾಗಿ ಕೆಲವರ ಅಂತ್ಯ ಸಂಸ್ಕಾರ ನೆರವೇರಿಸಿದ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ಇಂತಹ ಹಲವು ಘಟನೆಗಳನ್ನು ನೋಡಿದ್ದ ಈ ಅಥಣಿ ಗೆಳೆಯರ ಬಳಗ ಸದ್ಯ ಉಚಿತವಾಗಿ ಶವ ಸಂಸ್ಕಾರ ಮಾಡಿಕೊಡುತ್ತಿದೆ.

ಸುಮಾರು 12 ಜನ ಸೇರಿಕೊಂಡು ಕಳೆದ 15 ದಿನಗಳಿಂದ ಕೋವಿಡ್‌ನಿಂದ ಮೃತಪಟ್ಟ 20ಕ್ಕೂ ಹೆಚ್ಚು ಜನರ ಅಂತ್ಯ ಸಂಸ್ಕಾರ ನೆರವೇರಿಸಿಕೊಟ್ಟಿದ್ದಾರೆ. ಯಾರಿಂದಲೂ ನಯಾ ಪೈಸೆಯನ್ನು ಅಪೇಕ್ಷಿಸದೆ ತಮ್ಮ ಸ್ವಂತ ಖರ್ಚಿನಿಂದಲೇ ಸಾಧ್ಯವಾದಷ್ಟು ವಿಧಿ ವಿಧಾನಕ್ಕೆ ಬೇಕಾದ ವೆಚ್ಚಗಳನ್ನು ಭರಿಸುತ್ತಿದ್ದಾರೆ.

ಈ ಅಥಣಿ ಗೆಳೆಯರ ಬಳಗದಲ್ಲಿ ಮಲ್ಲೇಶ ಪಟ್ಟಣ, ಸಿದ್ದು ಮಾಳಿ, ಅರುಣ ಮಾಳಿ, ಪ್ರಶಾಂತ ತೋಡಕರ, ರಶೀದ ಶೇಡಬಾಳೆ, ಮಹಾದೇವ ಅಡಹಳ್ಳಿ, ಜಗನ್ನಾಥ ಬಾಮನೆ, ಆನಂದ ಮಾಕಾಣಿ, ಮಯೂರೇಶ ಮಂಗಸೂಳಿ, ಪ್ರಮೋದ ಚಂಡಕೆ, ಮಲ್ಲೇಶ ಕಾಂಬಳೆ, ಪ್ರಕಾಶ ಜಾಧವ ಇದ್ದಾರೆ.

ಇದನ್ನೂ ಓದಿ: "ನಾನು ನಕಲಿ‌ ವೈದ್ಯನಲ್ಲ, ಕ್ರಿಮಿನಲ್ ಕೇಸ್ ಹಾಕುವುದಕ್ಕಿಂತ ಸನ್ಮಾನಿಸಬೇಕಿತ್ತು": ಡೆತ್‌ನೋಟ್ ಬರೆದು ಸ್ಟಾಫ್‌ನರ್ಸ್ ಆತ್ಮಹತ್ಯೆ ​

ಕೋವಿಡ್​​ ನಿಯಂತ್ರಿಸಲು ವಿಧಿಸಲಾಗಿರುವ ಲಾಕ್​ಡೌನ್ ಹಿನ್ನೆಲೆ ಹಲವರು ಕೆಲಸ ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಖರ್ಚಿಗೂ ಕಾಸಿಲ್ಲದೆ, ಊಟಕ್ಕೂ ಹಣವಿಲ್ಲದೆ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಕಡೆ ದಿನಸಿ ಕಿಟ್, ಆಹಾರ ಪದಾರ್ಥ ಇತ್ಯಾದಿ ರೀತಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಹಂಚಿ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅದರಂತೆ ಇತ್ತ ಅಥಣಿಯಲ್ಲಿಯೂ ಅಥಣಿ ಗೆಳೆಯರ ಬಳಗದ ಸದಸ್ಯರು ಉಚಿತವಾಗಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸಿ ಮಾದರಿಯಾಗಿದ್ದಾರೆ.

ಉಚಿತ ಅಂತ್ಯ ಸಂಸ್ಕಾರಕ್ಕಾಗಿ ಈ ನಂಬರ್​ಗೆ ಕರೆ ಮಾಡಿ - 8546869005

ETV Bharat Logo

Copyright © 2024 Ushodaya Enterprises Pvt. Ltd., All Rights Reserved.