ETV Bharat / state

ಲಾರಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆ: ಬೆಳಗಾವಿಯಲ್ಲಿ ನಾಲ್ವರು ನಕಲಿ ಪತ್ರಕರ್ತರ ಬಂಧನ - ನಕಲಿ ಪತ್ರಕರ್ತರ ಬಂಧನ

ಪತ್ರಕರ್ತರೆಂದು ಹೇಳಿಕೊಂಡು ಲಾರಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ನಾಲ್ವರು ನಕಲಿ ಪತ್ರಕರ್ತರನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

fake journalists arrested
ಬಂಧಿತ ಆರೋಪಿಗಳು
author img

By

Published : Aug 28, 2022, 7:14 AM IST

ಬೆಳಗಾವಿ: ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ಹಣಕ್ಕೆ ಬೇಡಿಕೆಯಿಟ್ಟ ಘಟನೆಯಲ್ಲಿ ನಾಲ್ವರು ನಕಲಿ ಪತ್ರಕರ್ತರನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿರಣ ಗಾಯಕವಾಡ್, ಸಚಿನ್​ ಕಾಂಬಳೆ, ಸಂತೋಷ ದೊಡ್ಡಮನಿ ಹಾಗೂ ದಾದು ವಿಶ್ವನಾಥ ಲೋಕಂಡೆ ಬಂಧಿತರು.

ಇವರು ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನದಿಗುಡಿಕ್ಷೇತ್ರ ಗ್ರಾಮದ ಶಿವಾನಂದ ಹುಕ್ಕೇರಿ ಎಂಬುವವರು ತಮ್ಮ ಮಾಲೀಕತ್ವದ ಲಾರಿಯಲ್ಲಿ ಜೋಳದ ಪಿಡ್ಸ್ ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿದ್ದರು. ಬಳಿಕ ನಾವು ಪತ್ರಕರ್ತರು, ನಿಮ್ಮ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸಲಾಗುತ್ತಿದೆ. ಹಣ ಕೊಡದಿದ್ದರೆ ಫುಡ್‌ ಇನ್ಸ್​​ಪೆಕ್ಟರ್ ಹಾಗೂ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆಯೂ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.