ETV Bharat / state

ಪೊಲೀಸರ ದಾಳಿಗೆ ಬೆಚ್ಚಿ ನದಿಗೆ ಹಾರಿದ್ದ ಪ್ರಕರಣ: ಇಬ್ಬರ ಮೃತ ದೇಹ ಪತ್ತೆ - belguam crime news

ಪೊಲೀಸರ ದಾಳಿಗೆ ಹೆದರಿ ನದಿಗೆ ಹಾರಿದ್ದ ಆರು ಜನರಲ್ಲಿ ನಾಲ್ವರು ಈಜಿ ದಡ ಸೇರಿದ್ದು, ಇನ್ನುಳಿದ ಇಬ್ಬರು ಸಾವಿಗೀಡಾಗಿದ್ದಾರೆ.

Found of two dead body who was drowned river in fear of arrest by police
ಪೊಲೀಸರ ದಾಳಿಗೆ ಬೆಚ್ಚಿ ನದಿಗೆ ಹಾರಿದ್ದ ಪ್ರಕರಣ
author img

By

Published : Feb 8, 2021, 10:48 PM IST

ಬೆಳಗಾವಿ: ಜೂಜಾಡುತ್ತಿದ್ದ ವೇಳೆ ಪೊಲೀಸ್ ದಾಳಿಗೆ ಹೆದರಿ ನದಿಗೆ ಹಾರಿ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರವಲಯದ ಮಲಪ್ರಭಾ ನದಿಯಲ್ಲಿ ಯುವಕರ ಮೃತದೇಹ ಪತ್ತೆಯಾಗಿವೆ. ಮಂಜು ಬಂಡಿವಡ್ಡರ್(30), ಸಮೀರ್ ಬಟಕುರ್ಕಿ(22) ಮೃತರು. ಮಲಪ್ರಭಾ ನದಿ ದಡದಲ್ಲಿ ಜೂಜಾಡುತ್ತಿದ್ದ ಯುವಕರ ಗುಂಪಿನ ಮೇಲೆ ರಾಮದುರ್ಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಂಧನ ಭೀತಿಯಿಂದ ಆರು ಜನರು ಮಲಪ್ರಭಾ ನದಿಗೆ ಹಾರಿದ್ದರು. ಈ ವೇಳೆ ನಾಲ್ವರು ಈಜಿ ದಡ ಸೇರಿದ್ರೆ ಇಬ್ಬರು ಯುವಕರು ನಾಪತ್ತೆಯಾಗಿದ್ದರು.

ಹೆಚ್ಚಿನ ಓದಿಗೆ: ಜೂಜಾಡುತ್ತಿದ್ದಾಗ ಪೊಲೀಸರ ದಾಳಿ: ಬಂಧನ ಭೀತಿಯಿಂದ ನದಿಗೆ ಹಾರಿದ ಯುವಕರು!

ಬೆಳಗ್ಗೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಂಜೆ ವೇಳೆಗೆ ಶವ ಪತ್ತೆಯಾಗಿದ್ದು, ಮೃತದೇಹ ಹೊರತೆಗೆಯಲಾಗಿದೆ.

ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇತ್ತ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.