ಚಿಕ್ಕೋಡಿ : ಎರಡು ದಿನಗಳ ಕಾಲ ಜರುಗುವ ಬಸವ ಸಂಸ್ಕೃತಿ ಹಬ್ಬದ ನಿಮಿತ್ತ ಬಸವ ಮೂರ್ತಿಯ ಮೆರವಣಿಗೆಗೆ ಮಾಜಿ ಸಂಸದ ರಮೇಶ್ ಕತ್ತಿ ಚಾಲನೆ ನೀಡಿದರು.
ಬೆಳಗಾವಿಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮಾತನಾಡಿದ ಅವರು, ಒಂದು ದಿನದ ಮಟ್ಟಿಗೆ ಬಸವಣ್ಣನವರ ಕುರಿತು ಜೈಕಾರ ಹಾಕಿದರೆ ಸಾಲದು. ಬದುಕಿನುದ್ದಕ್ಕೂ ಸಂಸ್ಕಾರವಂತರಾಗಿ ಬಾಳಬೇಕಾದರೆ ನಿತ್ಯ ವಿಭೂತಿ ಹಚ್ಚಿಕೊಂಡು ಗುರು- ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದದರು.
ಚಾಲನೆ ನೀಡಿದ ಬಳಿಕ ಮೆರವಣಿಗೆಯಲ್ಲಿ ಭಾಗಿಯಾಗುವುದರ ಜೊತೆಗೆ ವಾದ್ಯ ಮೇಳದವರೊಂದಿಗೆ ರಮೇಶ್ ಕತ್ತಿ ಅವರು ಹೆಜ್ಜೆ ಹಾಕಿದರು.