ETV Bharat / state

ಬೆಳಗಾವಿಯಲ್ಲಿ ತಿನಿಸು ಕಟ್ಟೆ ನಿರ್ಮಾಣ : ನೂತನ ಮಳಿಗೆಗಳಿಗೆ ಡಾ.ಪ್ರಭಾಕರ ಕೋರೆ ಚಾಲನೆ

author img

By

Published : Mar 1, 2021, 7:48 AM IST

ಎರಡನೇ ಹಂತದಲ್ಲಿ ಇನ್ನೂ 30ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲು ಶಾಸಕ ಅಭಯ ಪಾಟೀಲ ಯೋಜನೆ ಹಾಕಿ ಕೊಂಡಿದ್ದಾರೆ. ಈ ವೇಳೆ ಡಾ. ಪ್ರಭಾಕರ‌ ಕೋರೆ, ಅಭಯ ಪಾಟೀಲ ಬೆಳಗಾವಿ ಆಲಿಪಾಕ್, ಪಾವ್ ಬಜಿ ಸವಿದು ಖುಷಿ ಪಟ್ಟರು..

ನೂತನ ಮಳಿಗೆಗಳಿಗೆ ಡಾ. ಪ್ರಭಾಕರ ಕೋರೆ ಚಾಲನೆ
Former MP Prabhakar Kore inaugurates new stores at Belgaum

ಬೆಳಗಾವಿ : ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರಾಣಿ ಚೆನ್ನಭೈರಾದೇವಿ ಹೆಸರಲ್ಲಿ ಮಹಿಳಾ ಬಜಾರ್, ತಿನಿಸು ಕಟ್ಟೆ ನಿರ್ಮಿಸಲಾಗಿದೆ. ನೂತನ ಮಳಿಗೆಗಳನ್ನು ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಉದ್ಘಾಟಿಸಿದರು.

ನೂತನ ಮಳಿಗೆಗಳಿಗೆ ಡಾ. ಪ್ರಭಾಕರ ಕೋರೆ ಚಾಲನೆ

ದೇಸಿ ಆಹಾರ ಮಾರಾಟ ಮಾಡಲು ಶಾಸಕರ ಅನುದಾನ, ಸ್ಮಾರ್ಟ್ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ಸುಸಜ್ಜಿತ 18 ಮಳಿಗೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ವಿಶೇಷ ಅಂದರೆ ಬಹುತೇಕ ಮಳಿಗೆಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಲಾಗಿದೆ.

ಪಾವ್ ಬಜಿ ಸವಿದ ಡಾ.ಪ್ರಭಾಕರ ಕೋರೆ

ಪಾವ್ ಬಜಿ, ಪಾನಿಪುರಿ, ದೋಸೆ, ಜ್ಯೂಸ್ ಸೆಂಟರ್, ಐಸ್ಕ್ರೀಂ ಪಾರ್ಲರ್, ನೂಡಲ್ಸ್ ಸೆಂಟರ್, ಕಬ್ಬಿನ ಹಾಲು ಮಾರಾಟ ಮಳಿಗೆ ಹೀಗೆ ವಿವಿಧ ಬಗೆಯ ಖಾದ್ಯಗಳು ಇಲ್ಲಿ ಒಂದೇ ಕಡೆ ದೊರೆಯುತ್ತವೆ. ನೂತನ ಮಳಿಗೆಗಳ ಆರಂಭದಿಂದ 500ಕ್ಕೂ ಅಧಿಕ ಜನರು ಉದ್ಯೋಗ ಪಡೆದಿದ್ದು, ಮೊದಲ ದಿನವೇ ನಗರವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ‌ವ್ಯಕ್ತವಾಗಿದೆ.

ಎರಡನೇ ಹಂತದಲ್ಲಿ ಇನ್ನೂ 30ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲು ಶಾಸಕ ಅಭಯ ಪಾಟೀಲ ಯೋಜನೆ ಹಾಕಿ ಕೊಂಡಿದ್ದಾರೆ. ಈ ವೇಳೆ ಡಾ. ಪ್ರಭಾಕರ‌ ಕೋರೆ, ಅಭಯ ಪಾಟೀಲ ಬೆಳಗಾವಿ ಆಲಿಪಾಕ್, ಪಾವ್ ಬಜಿ ಸವಿದು ಖುಷಿ ಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.