ಬೆಳಗಾವಿ: ರಾಜ್ಯದ ಪ್ರಸಕ್ತ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನೀರಾವರಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಕ್ಷೇತ್ರಕ್ಕೆ ಉತ್ತರ ಕರ್ನಾಟಕ ಶಾಸಕರು, ಮಂತ್ರಿಗಳು ಪ್ರಯತ್ನದಿಂದ ಬಜೆಟ್ ಮರುದಿನವೇ ಹತ್ತು ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದರು. ಆದರೆ ಅದು ಯಾವುದಕ್ಕೂ ಸಾಲುವುದಿಲ್ಲ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಹಾಗೇ ಆಗಿದೆ ಅನುದಾನ ಕೊಟ್ಟಿದ್ದಾರೆ ಎಂದರು.
ಇನ್ನು ಕಳಸಾ ಬಂಡೂರಿ ಯೋಜನೆಯನ್ನು ಹುಟ್ಟು ಹಾಕಿದ್ದೇ ನಾನು. ಕಳಸಾ ಬಂಡೂರಿ ಯೋಜನೆಯ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಹಾಗಾಗಿಯೂ ಅರಣ್ಯ ಇಲಾಖೆ ಅನುಮತಿ ಕೇಳುವ ಸಂದರ್ಭದಲ್ಲಿ ಗೋವಾದವರು ತಕರಾರು ಮಾಡಬಹುದು ಎಂದರು. ಈ ಯೋಜನೆಗೆ 16 ರಿಂದ 18 ನೂರು ಕೋಟಿ ಬೇಕಾಗುತ್ತೆ. ಅಂದಾಜು ಎರಡು ಸಾವಿರ ಕೋಟಿ ಬೇಕು. ಈಗಾಗಲೇ ಮುಖ್ಯಮಂತ್ರಿ ₹ 5,00ಕೋಟಿ ಹಣ ಮೀಸಲಿಟ್ಟಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.