ETV Bharat / state

ಬೆಳಗಾವಿ: ಮಾಜಿ ಸಚಿವ ಡಿಬಿ ಇನಾಮದಾರ್ ಇನ್ನಿಲ್ಲ.. ಸಿಎಂ ಬೊಮ್ಮಾಯಿ‌ ರೋಡ್ ಶೋ ರದ್ದು - ದಕ್ಷ ಆಡಳಿತದಿಂದ ಗುರುತಿಸಿಕೊಂಡಿದ್ದ ಡಿಬಿ ಇನಾಮದಾರ್

ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಸಚಿವರಾಗಿದ್ದ ಡಿಬಿ ಇನಾಮದಾರ್ ಇಂದು ಮೃತಪಟ್ಟಿದ್ದಾರೆ. ಆ ನಗರದಲ್ಲಿ ನಡೆಯಬೇಕಾಗಿದ್ದ ಸಿಎಂ ಬೊಮ್ಮಾಯಿ ರೋಡ್​ ಶೋ ರದ್ದುಗೊಳಿಸಲಾಗಿದೆ.

Inamadar Dhani is no more  Former minister DB Inamadar Dhani is no more  Former minister DB Inamadar Dhani news  ಮಾಜಿ ಸಚಿವ ಡಿಬಿ ಇನಾಮದಾರ್ ಧಣಿ ಇನ್ನಿಲ್ಲ  ಮಾಜಿ ಸಚಿವ ಡಿಬಿ ಇನಾಮದಾರ್ ಧಣಿ  ಡಿಬಿ ಇನಾಮದಾರ್ ಧಣಿ ಇಂದು ಮೃತ  ಚನ್ನಮ್ಮ ಕಿತ್ತೂರು ಮತಕ್ಷೇತ್ರ  ಇಂಫೆಕ್ಷನ್​ನಿಂದ ಬಳಲುತ್ತಿದ್ದ 74 ವರ್ಷದ ಇನಾಮದಾರ್  ದಕ್ಷ ಆಡಳಿತದಿಂದ ಗುರುತಿಸಿಕೊಂಡಿದ್ದ ಡಿಬಿ ಇನಾಮದಾರ್  ಐದು ಬಾರಿ ಗೆದ್ದಿದ್ದ ಡಿಬಿ ಇನಾಮದಾರ್
ಮಾಜಿ ಸಚಿವ ಡಿಬಿ ಇನಾಮದಾರ್ ಧಣಿ ಇನ್ನಿಲ್ಲ
author img

By

Published : Apr 25, 2023, 10:47 AM IST

Updated : Apr 25, 2023, 1:14 PM IST

ಬೆಳಗಾವಿ: ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು ಆದ ಡಿಬಿ ಇನಾಮದಾರ್ ಅವರು ಇಂದು ನಿಧರಾಗಿದ್ದಾರೆ. ನ್ಯುಮೋನಿಯಾ, ಲಂಗ್ಸ್ ಇಂಫೆಕ್ಷನ್​ನಿಂದ ಬಳಲುತ್ತಿದ್ದ 74 ವರ್ಷದ ಇನಾಮದಾರ್​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಹಲವು‌ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಡಿಬಿ ಇನಾಮದಾರ್ ಅವರ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಸ್ವಗ್ರಾಮ ನೇಗಿನಹಾಳ ಸೇರಿ ಚನ್ನಮ್ಮ ಕಿತ್ತೂರು ಕ್ಷೇತ್ರದಲ್ಲಿ ದುಃಖ ಮಡುಗಟ್ಟಿದೆ.

ದಾನಪ್ಪಗೌಡ ಬಸನಗೌಡ ಇನಾಮದಾರ್​ ಅವರು 1948 ಜುಲೈ 2ರಂದು ಜನಿಸಿದ್ದು, ಅವರು ಬೆಳಗಾವಿಯ ಸೇಂಟ್ ಪಾಲ್ಸ್, ಲಿಂಗರಾಜ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. 1978ರಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಆಯ್ಕೆ ಆದರು. ಬಳಿಕ ಹಲವು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸಿರಸಂಗಿ ಲಿಂಗರಾಜ ಟ್ರಸ್ಟ್ ಅಧ್ಯಕ್ಷರು, ಕಿತ್ತೂರು ಸೈನಿಕ ಶಾಲೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪುತ್ರಿ ಬಿನಿತಾ ವಿಜಯಕುಮಾರ ಸೋನವಾಲ್ಕರ್, ಪುತ್ರರಾದ ವಿಕ್ರಮ ಇನಾಮದಾರ್​, ಬಸನಗೌಡ ಇನಾಮದಾರ್​ ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಸರಳ ಸಜ್ಜನಿಕೆ, ದಕ್ಷ ಆಡಳಿತದಿಂದ ಗುರುತಿಸಿಕೊಂಡಿದ್ದ ಡಿಬಿ ಇನಾಮದಾರ್ ಅವರು ಅಪರೂಪದ ರಾಜಕಾರಣಿ. ಎಲ್ಲರೂ ಪ್ರೀತಿಯಿಂದ ಅವರನ್ನು ಧಣಿ ಎಂದು ಕರೆಯುತ್ತಿದ್ದರು. 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಶಾಸರಾಗಿ ಆಯ್ಕೆಯಾಗಿದ್ದ ಡಿಬಿ ಇನಾಮದಾರ್​, ನಂತರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 1994 ಮತ್ತು 1999ರಲ್ಲಿ ಗೆದ್ದಿದ್ದರು. 2013ರಲ್ಲಿ ಮತ್ತೆ ಡಿಬಿ ಇನಾಮದಾರ ಶಾಸಕರಾಗಿದ್ದರು.

ಡಿಬಿ ಇನಾಮದಾರ್ ಜನತಾ ಪಕ್ಷದಿಂದ 2 ಬಾರಿ ಮತ್ತು ಕಾಂಗ್ರೆಸ್​ನಿಂದ 3 ಬಾರಿ ಹೀಗೆ ಒಟ್ಟು ಐದು ಬಾರಿ ಗೆದ್ದಿದ್ದರು. ಅದೇ ರೀತಿ ಎಸ್​ಎಂ ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಒಟ್ಟು 10 ಬಾರಿ ಚುನಾವಣೆ ಎದುರಿಸಿದ್ದ ಧಣಿಗಳು, ಐದು ಬಾರಿ ಗೆದ್ದು, ನಾಲ್ಕು ಬಾರಿ ಪರಾಭವಗೊಂಡಿದ್ದರು. ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಡಿಬಿ ಇನಾಮದಾರ್ ಅವರ ಅಗಲಿಕೆಯಿಂದ ಆದರ್ಶ, ಹಿರಿಯ ರಾಜಕೀಯ ಕೊಂಡಿಯೊಂದು ಕಳಚಿದಂತಾಗಿದೆ.

ಓದಿ: ಲಿಂಗಾಯತರ ಮತ ಸೆಳೆಯಲು ಬಿಎಸ್​​ವೈ ಪ್ಲಾನ್​​: ವೀರಶೈವ ಸಮಾಜದ ಸ್ನೇಹಮಿಲನ

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗಣಿ ಮತ್ತು ಭೂ ವಿಜ್ಞಾನ, ಅಬಕಾರಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಡಿಬಿ ಇನಾಮದಾರ್ ಅವರ ಅಂತ್ಯಕ್ರಿಯೆ ಬುಧವಾರ 2 ಗಂಟೆಗೆ ಸ್ವಗ್ರಾಮ ಬೈಲಹೊಂಗಲ‌ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆಯಲಿದೆ.

ಸಿಎಂ ಬೊಮ್ಮಾಯಿ‌ ರೋಡ್ ಶೋ ರದ್ದು: ಮಾಜಿ‌ ಸಚಿವ ಡಿಬಿ ಇನಾಮದಾರ್ ಅವರು ನಿಧನರಾದ ಹಿನ್ನೆಲೆ ಇಂದು ಎಂಕೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆಯಬೇಕಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೋಡ್​ ಶೋ ಮತ್ತು ಸಾರ್ವಜನಿಕ ಸಭೆಗಳನ್ನು ಬಿಜೆಪಿ ರದ್ದುಗೊಳಿಸಿದೆ.

Last Updated : Apr 25, 2023, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.