ETV Bharat / state

ಯಾರು ಹಣ ಕೊಡಲು ಬಂದಿದ್ದರು ಅಂತ ಶಾಸಕರಿಗೆ ಕೇಳುತ್ತೇನೆ: ಮಾಜಿ ಡಿಸಿಎಂ ಸವದಿ - ವಾಲ್ಮೀಕಿ ಸಮುದಾಯದ ಭವನ

ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು. ಆದರೆ, ನಾನು ಯಾವುದೇ ಹಣಕ್ಕೆ ಬೇಡಿಕೆ ಇಡದೇ, ಸಮಾಜ ಸೇವೆಗಾಗಿ ಒಳ್ಳೆಯ ಸ್ಥಾನಮಾನ ನೀಡುವಂತೆ ಕೇಳಿದ್ದೆ ಎಂದು ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದರು. ಈ ಸಂಬಂಧ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ.

Former dcm Savadi
ಮಾಜಿ ಡಿಸಿಎಂ ಸವದಿ
author img

By

Published : Sep 12, 2021, 2:11 PM IST

ಚಿಕ್ಕೋಡಿ (ಬೆಳಗಾವಿ): ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಪಕ್ಷ ಸೇರುವ ಸಂದರ್ಭದಲ್ಲಿ ತಮಗೆ ಹಣದ ಆಮಿಷವೊಡ್ಡಿದ್ದರು ಎಂಬ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದೆ. ಮಾತಿನ ಭರದಲ್ಲಿ ಆ ರೀತಿ ಮಾತನಾಡಿರಬೇಕು ಹಾಗೂ ನಾನು ಅವರು ಸಿಕ್ಕಿದಾಗ ಖುದ್ದಾಗಿ ಭೇಟಿಯಾಗಿ ಮಾತನಾಡುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಅಥಣಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದ ಭವನ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಯಾರು ಹಣ ಕೊಡಲು ಹೋಗಿದ್ದರು, ಯಾರು ಆಮಿಷಡ್ಡಿದ್ದರು ಎಂಬುದನ್ನು ಶಾಸಕರ ಬಳಿಯೇ ಕೇಳುತ್ತೇನೆ ಎಂದಿದ್ದಾರೆ.

ಯಾರು ಹಣ ಕೊಡಲು ಬಂದಿದ್ದರು ಅಂತ ಶಾಸಕರ ಭೇಟಿಯಲ್ಲಿ ಕೇಳುತ್ತೇನೆ: ಮಾಜಿ ಡಿಸಿಎಂ ಸವದಿ

224 ಜನ ಶಾಸಕರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ, ಅದರಲ್ಲಿ 34 ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆ. ಅಧಿಕಾರ ಇದ್ದಾಗ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಅಥಣಿ ತಾಲೂಕಿನ ಕೃಷ್ಣಾ ನದಿ ನೆರೆ ಸಂತ್ರಸ್ತರಿಗೆ ಸರ್ಕಾರ ಈಗಾಗಲೇ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. ಕೆಲವು ಗ್ರಾಮಗಳಿಗೆ ತುರ್ತು ಪರಿಹಾರ ಗ್ರಾಮಗಳಿಗೆ ಬಂದಿಲ್ಲಾ, ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಉಳಿದ ನೆರೆ ಸಂತ್ರಸ್ತರಿಗೆ ಪರಿಹಾರ ಧನ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.

ಓದಿ: ಬಿಜೆಪಿ ಪಕ್ಷ ಸೇರ್ಪಡೆ ಸಮಯದಲ್ಲಿ ನನಗೆ ಹಣದ ಆಫರ್ ಬಂದಿತ್ತು: ಶ್ರೀಮಂತ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.